ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಜಗಳ ಕಿತ್ತಾಟ..!

ನಿನ್ನೆ ಗ್ರ್ಯಾಂಡ್ ಓಪನಿಂಗ್ ಪಡೆದ ಬಿಗ್ ಬಾಸ್ ಸೀಸನ್ 6ನ ಮೊದಲ ದಿನವೇ ಮನೆಯಲ್ಲಿ ಕಿತ್ತಾಟ ಜಗಳ ಶುರುವಾಗಿದೆ. ಇನ್ನು ಬಿಗ್ ಬಾಸ್ ಮನೆ ಸೇರಿ 24ಗಂಟೆ ಕಳೆಯುವ ಮೊದಲೇ ಒಬ್ಬರಿಗೊಬ್ಬರು ಕಚ್ಚಾಡಿಕೊಳ್ಳಲು ಶರುಮಾಡಿದ್ದಾರೆ. ಒಂದೆಡೆ ರ್ಯಾಪಿಡ್ ರಶ್ಮಿ ನಾವಿಲ್ಲಿ ಬಂದಿರೋದು ಸಂಸಾರ ಮಾಡೋಕೆ ಅಲ್ಲ. ಆಟ ಆಡೋಕೆ ಅಂತ ಖಡಕ್ ವಾಯ್ಸ್ ನಲ್ಲಿ ಹೇಳ್ತಾ ಇದ್ರೆ. ಇತ್ತ ಬಿಗ್ ಬಾಸ್ ಕೂಡ ಮೊದಲ ದಿನವೇ ಮನೆಯವರಿಗೆ ಸಖತ್ ಶಾಕ್ ನೀಡಿದೆ. ಮೊದಲ ದಿನವೇ ಸ್ಪರ್ಧಿಗಳಿಗೆ ನಾಮಿನೇಷನ್ ಪ್ರಕ್ರಿಯೇ ನೀಡಿದ್ದು.. ಇನ್ನು ಒಬ್ಬರಿಗೊಬ್ಬರು ಪರಿಚಯವಾಗುವಷ್ಟರಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ನೀಡಿ ಮನೆಯವರಿಗೆ ಬಿಗ್ ಶಾಕ್ ನೀಡಿದೆ.. ಇನ್ನು ಒಬ್ಬರಿಗೊಬ್ಬರು ಮಾತಿಗೆ ಮಾತು ಬೆಳಸಿಕೊಂಡು ಕಣ್ಣಂಚಿನಲ್ಲಿ ನೀರು ಬರೆಸಿಕೊಳ್ಳೋ ರೀತಿ ಮಾಡಿಕೊಂಡಿದ್ದಾರೆ.. ಒಟ್ಟಿನಲ್ಲಿ ಮೊದಲನೇ ದಿನವೇ ಬಿಗ್ ಬಾಸ್ ಮನೆಯಲ್ಲಿ ಜಗಳ ಕಿತ್ತಾಟ ಶುರುವಾಗಿದ್ದು ಬಿಗ್ ಬಾಸ್ ಕೂಡ ಮೊದಲನೇ ದಿನ ಸಖತ್ ಆಗೇ ಶಾಕ್ ನೀಡಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಏನೇನ್ ಆಯ್ತು ಅಂತ ಇಂದು ರಾತ್ರಿ 8ಗಂಟೆವರೆಗೂ ಕಾಯಲೇ ಬೇಕು.!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top