ಬಿಗ್‍ಬಾಸ್ ಮನೆಯಲ್ಲಿ ಆನಂದ್‍ಗೆ ಬಂತು ಕಳ್ಳನ‌ ಹಣೆಪಟ್ಟಿ..!

ಬಿಗ್‍ಬಾಸ್ ಸೀಸನ್ 6 ನಲ್ಲಿ ಪ್ರತಿದಿನ ಒಂದೊಂದು ಟಾಸ್ಕ್ ಕೊಟ್ಟು ಮನೆಯ ಸದಸ್ಯರ ನಡುವೆ ವೈಮನಸ್ಸು ಮತ್ತು ಜಗಳ ಹುಟ್ಟುಕೊಂಡಿದ್ರೆ. ಬಿಗ್ ಬಾಸ್ ಮೂರನೇ ದಿನವಾದ ಇಂದು ಮನೆಯ ಸದಸ್ಯರಿಗೆ ಕಠಿಣ ಟಾಸ್ಕ್ ಒಂದನ್ನು ನೀಡಿದ್ದಾರೆ. ಒಬ್ಬರ ಕೈಲಿ ಇರೋ ವಸ್ತುವನ್ನು ಇನ್ನೊಬ್ಬರು ಪಡೆದುಕೊಳ್ಳೋ‌ ಟಾಸ್ಕ್, ಈ ಟಾಸ್ಕ್ ನಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಬಿದ್ದಾದ್ರು ಕೈಯಲ್ಲಿ ಇರೋ ವಸ್ತುವನ್ನು ಪಡೆಯಬೇಕು ಅನ್ನೋ ಹಟದಲ್ಲಿದ್ದರೆ.

ಇತ್ತ ಬಿಗ್ ಬಾಸ್ ಮನೆಯಲ್ಲಿರೋ ಮಹಿಳಾಮಣಿಯರು ಹುಡುಗಿರ ಮೈಮೇಲೆ ಬಿಳೋದೆಲ್ಲ ಸರಿ ಇಲ್ಲ ಅಂತ ಹುಡುಗರ ಮೇಲೆ ಗರಂ ಆದ್ರು.. ಇತ್ತ ಕಂಡೆಕ್ಟರ್ ಆನಂದ್ ಮಾಲಗತ್ತಿ ಇಲ್ಲಿ ಕಾಸಿದ್ದೊನೇ ಬಾಸು ಅಂತ ಡೈಲಾಗ್ ಹೊಡೆದ್ರೆ, ಇತ್ತ ಲೇಡಿಸ್ ಕಡೆಯಿಂದ ಬಾಸ್ ಅಲ್ಲ ಕಳ್ಳ ಅಂತ ಡೈಲಾಗ್ ಕೂಡ ಬಂತು. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ‌ ಹೀಟ್ ಜಾಸ್ತಿಯಾಗಿದ್ದು ಇನ್ನು ಏನೇನ್ ನಡೆಯುತ್ತೆ ಮನೆಯ ಸದಸ್ಯರಲ್ಲಿ ಯಾರ ಮೇಲೆ ಯಾರಿಗೆ ವೈಮನಸ್ಸು ಶುರುವಾಗುತ್ತೆ ಅಂತ ರಾತ್ರಿ 8ಕ್ಕೆ ಪ್ರಸಾರವಾಗೋ ಫುಲ್ ಎಪಿಸೋಡ್ ವರೆಗೂ ಕಾಯಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top