Big Breaking : ಬಿಗ್​ಬಾಸ್​ಗೆ ಪವರ್​ ಟಿವಿ ಚಂದನ್​ ಶರ್ಮಾ.!

Big Breaking : ಬಿಗ್​ಬಾಸ್​ಗೆ ಪವರ್​ ಟಿವಿ ಚಂದನ್​ ಶರ್ಮಾ

ಬಿಗ್ ಬಾಸ್. ಎಲ್ಲೆಲ್ಲೂ ಸದ್ಯ ಈ ಬಿಗ್ ಬಾಸ್​ನದ್ದೇ ಸದ್ದು. ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಈಗಾಗಲೇ ಈ ಸೀಸನ್​ನ ಶೋ ಶುರುವಾಗಿದೆ. ಕನ್ನಡದ ಬಿಗ್​ ಬಾಸ್​ಗೆ ದಿನಗಣನೆ ಆರಂಭವಾಗಿದೆ.. ಇನ್ನೇನು ಹದಿಮೂರೇ ಹದಿಮೂರು ದಿನಕ್ಕೆ ಕನ್ನಡ ಬಿಗ್​ ಬಾಸ್​ ರಿಯಾಲಿಟಿ ಶೋ ಆರಂಭವಾಗ್ತಿದ್ದು, ಬಿಗ್​ ಬಾಸ್​ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಬಿಗ್​ಬಾಸ್​​ ಮನೆಗೆ ಚಂದನ್ ಶರ್ಮಾ : ಕನ್ನಡದ ಜನಪ್ರಿಯ ನಿರೂಪಕ ಚಂದನ್​ ಶರ್ಮಾ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಪವರ್ ಟಿವಿಯ ಎಕ್ಸಿಕ್ಯೂಟಿವ್​ ಎಡಿಟರ್ ಚಂದನ್ ಶರ್ಮಾ ಅವರಿಗೆ ಕಳೆದ ಕೆಲ ಸೀಸನ್​ಗಳಿಂದಲೇ ಆಫರ್ ಬರುತ್ತಿದ್ದು, ಈ ಬಾರಿಯೂ ಬಿಗ್​ಬಾಸ್​ನಿಂದ ಕರೆ ಬಂದಿದೆ. ಹೊಸ ಸುದ್ದಿವಾಹಿನಿ ಪವರ್ ಟಿವಿಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಚಂದನ್ ಶರ್ಮಾ ಬಿಗ್​ ಬಾಸ್​ ಮನೆಗೆ ಪ್ರವೇಶಿಸುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

ಕುರಿಪ್ರತಾಪ್ : ಚಂದನ್ ಶರ್ಮಾ ಅವರ ಜೊತೆ ಬಿಗ್​ ಬಾಸ್ ಪ್ರವೇಶಿಸುತ್ತಿರುವ ಇನ್ನೊಬ್ಬ ಸ್ಟಾರ್ ಕುರಿಪ್ರತಾಪ್. ಹೆಸರಾಂತ ಕಾಮಿಡಿಯನ್, ಮಜಾ ಟಾಕೀಸ್ ಖ್ಯಾತಿಯ ನಟ ಕುರಿಪ್ರತಾಪ್​ರವರು ಕಳೆದ ಸೀಸನ್​ನಲ್ಲೇ ಬಿಗ್​ಬಾಸ್​ಗೆ ಹೋಗ್ತಾರೆ ಎನ್ನಲಾಗಿತ್ತು. ಕಳೆದ ಬಾರಿ ಪ್ರತಾಪ್​ ಬಿಗ್​ಬಾಸ್​​ಗೆ ಹೋಗಿರಲಿಲ್ಲ. ಈ ವರ್ಷ ಖಂಡಿತಾ ಬಿಗ್ ಬಾಸ್​ ಮನೆಗೆ ಹೋಗಿ ನಗೆ ಕಡಲಲ್ಲಿ ತೇಲಿಸ್ತಾರೆ ಎನ್ನಲಾಗುತ್ತಿದೆ.

ಹನುಮಂತ : ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಗಾಯಕ ಹನುಮಂತರವರು ಈ ಬಾರಿ ಬಿಗ್​ಬಾಸ್​ ಮನೆಗೆ ಹೋಗುವ ಮತ್ತೊಬ್ಬ ಸ್ಪರ್ಧಿ. ತನ್ನ ಸುಮಧುರ ಗಾಯನದ ಮೂಲಕ ಕನ್ನಡಿಗರ ಮನ ಗೆದ್ದಿರುವ ಹನುಮಂತ.. ಬಿಗ್​ಬಾಸ್ ಮೂಲಕ ಮತ್ತಷ್ಟು ಹತ್ತಿರವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಶಿವರಾಜ್​ ಕೆ.ಆರ್ ಪೇಟೆ : ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಶಿವರಾಜ್​ ಕೆ.ಆರ್ ಪೇಟೆ ಈ ಬಾರಿ ಬಿಗ್​ ಬಾಸ್ ಮನೆಗೆ ಹೋಗಲಿರುವ ಮತ್ತೊಬ್ಬ ಸ್ಟಾರ್. ಈಗಾಗಲೇ ರಿಯಾಲಿಟಿ ಶೋಗಳು, ಸಿನಿಮಾ ಮೂಲಕ ಕನ್ನಡಿಗರನ್ನು ತಲುಪಿರುವ ಶಿವರಾಜ್​ ಬಿಗ್​ ಬಾಸ್ ಮನೆಗೆ ಎಂಟ್ರಿಕೊಡುವುದು ಪಕ್ಕಾ ಎಂಬ ಮಾಹಿತಿ ಹೊರಬಂದಿದೆ.

ಇನ್ನುಳಿದಂತೆ ನಟಿಯರಾದ ಶರ್ಮಿತಾ ಮಂಡ್ರೆ, ಶ್ವೇತಾ ಪ್ರಸಾದ್ ಮೊದಲಾದವರು ಬಿಗ್​ ಬಾಸ್​ ಮನೆಗೆ ಹೋಗಲಿದ್ದಾರೆ ಎಂದು ತಿಳಿದುಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top