ಯುವ ಸ್ಪಿನ್ನರ್ ಗಳಿಗೆ ಸವಾಲು ಹಾಕಿದ ಬಜ್ಜಿ..!

ಟೀಂ ಇಂಡಿಯಾದ ಟರ್ಬನೇಟರ್ ಎಂದೇ ಖ್ಯಾತಿ ಪಡೆದಿದ್ದ ಹರ್ಭಜನ್ ಸಿಂಗ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಟೀಂ ಇಂಡಿಯಾದಲ್ಲಿ ಸದ್ಯ ಸ್ಥಾನಗಿಟ್ಟಿಸಿಕೊಳ್ಳಲು ಶ್ರಮ ಪಡುತ್ತಿರೋ ಬಜ್ಜಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದು 2016ರಲ್ಲಿ, ಸದ್ಯ 40ರ ಹರೆಯ ಬಜ್ಜಿ ಯುವ ಸ್ಪಿನ್ನರ್‍ಗಳ ನಡುವೆ ಕಾಂಪಿಟ್ ಮಾಡಲು ಸದ್ಯವಾಗದೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಯುವ ಸ್ಪಿನ್ನರ್‍ಗಳ ಸತತ ಒಳ್ಳೇ ಪ್ರದರ್ಶನದಿಂದ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದಾರೆ.

ಹೀಗಿರುವಾಗ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಪ್ರಯತ್ನಿಸುತ್ತಿರುವಾಗ ಯುವ ಸ್ಪಿನ್ನರ್‍ಗಳಿಗೆ ಚಾಲೆಂಜ್ ಹಾಕಿದ್ದಾರೆ. ಈಗಿನ ಯುವ ಸ್ಪಿನ್ನರ್ಸ್‍ಗಿಂತ ನನ್ನ ಸ್ಪಿನ್ ಸ್ಕಿಲ್ಸ್ ಬೆಸ್ಟ್ ಎಂದು ಸಾಭೀತು ಪಡಿಸಬಲ್ಲೆ ಅಂತ ಹರಭಜನ್ ಹೇಳಿದ್ದಾರೆ.

ಭಜ್ಜಿ ತಾವೂ `ನೀವು ಈಗ ಯಾವ ಸ್ಪಿನ್ನರ್‍ಗಳನ್ನು ಬೆಸ್ಟ್ ಅಂತ ಪರಿಗಣಿಸಿದ್ದೀರೋ,ಅವ್ರನ್ನ ನನ್ನ ಮುಂದೆ ಕರೆದುಕೊಂಡು ಬನ್ನಿ, ಸ್ಪಿನ್ ಸ್ಕಿಲ್ಸ್ ನಲ್ಲಿ ನಾನು ಯುವ ಸ್ಪಿನ್ನರ್‍ಗಳಿಗಿಂತ ಬೆಸ್ಟ್ ಅನ್ನೋದನ್ನ ತೋರಿಸುತ್ತೇನೆ ಎಂದು ಬಜ್ಜಿ ಹೇಳಿದ್ದಾರೆ.

ಇನ್ನು ಭಜ್ಜಿ ಯುವ ಸ್ಪಿನ್ನರ್‍ಗಳಿಗೆ ಸವಾಲು ಹಾಕುವುದರ ಜೊತೆಯಲ್ಲಿ ನಿವೃತ್ತಿ ವಿಚಾರವಾಗಿಯು ಮಾತನಾಡಿದ್ದು, ನಾನು ಇನ್ನು ಐಪಿಎಲ್‍ನಲ್ಲಿ ಈ ವರ್ಷ ಕೊನೆಗೊಳಿಸಬೇಕೋ ಬೇಡವೋ ಅನ್ನೋದರ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ, ನಾನು ಐಪಿಎಲ್ ಆಡುವುದಕ್ಕೆ ಉತ್ಸುಕನಾಗಿದ್ದೇನೆ. ನಾನು ಮೂರು ನಾಲ್ಕು ತಿಂಗಳಿನಿಂದ ಯೋಗ ಮಾಡುತ್ತಿದ್ದು, ನನ್ನ ದೇಹ ಸದೃಢವಾಗಿದ್ದು, ಇನ್ನಷ್ಟು ದಿನ ಕ್ರಿಕೆಟ್ ಆಡುತ್ತೇನೆ ಅನ್ನೋ ಮೂಲಕ ನಿವೃತ್ತಿ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ಇನ್ನು 18ನೇ ವಯಸ್ಸಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ಭಜ್ಜಿ ಇದುವರೆಗೂ 236 ಏಕದಿನ ಪಂದ್ಯದಲ್ಲಿ 269 ವಿಕೆಟ್ ಕಬಳಿಸಿದ್ರೆ 103 ಟೆಸ್ಟ್ ಪಂದ್ಯದಲ್ಲಿ 417 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್‍ನಲ್ಲೂ ತಮ್ಮದೇ ಪ್ರಭಾವ ಬೀರಿದ್ದು, ಮುಂಬೈ ಇಂಡಿಯನ್ಸ್ ಪ್ರತಿನಿಧಿಸಿದ್ದು, ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top