ಈ ಎಲೆಯಲ್ಲಿದೆ ನೂರಾರು ಕಾಯಿಲೆಗಳನ್ನು ಗುಣಪಡಿಸೋ ಔಷಧಿ.!

ನಮ್ಮ ಪೂರ್ವಜರು ನಮಗೆ ಅದೆಷ್ಟೋ ಅಯುರ್ವೇದ ಜೌಷಧೀಗಳನ್ನು ವರದಾನವಾಗಿ ನಮಗಾಗಿ ಬಿಟ್ಟು ಹೋಗಿದ್ದಾರೆ. ಹಿಂದಿನ ಕಾಲದಲ್ಲಿ ಪ್ರಮುಖವಾಗಿ ಯಾವುದೇ ಕಾಯಿಲೆ ಬರಲಿ ಅದಕ್ಕೆ ಆಯುರ್ವೇಧದ ಔಷಧಿಗಳನ್ನೇ ನೀಡುತ್ತಿದ್ದರು, ಅಲ್ಲದೇ ಅದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಆಗುತ್ತಿರಲಿಲ್ಲ, ಆದ್ರೆ ಕ್ರಮೇಣ ಇಂಗ್ಲೀಷ್ ಮೆಡಿಸಿನ್ ದಾಳಿಯಿಂದ ಆಯುರ್ವೇಧದ ಔಷಧಿದಾರರ ಬಳಕೆ ಕಡಿಮೆಯಾದ್ರು, ಅದರ ಪ್ರಾಮುಖ್ಯತೆಯನ್ನು ಎಂದಿಗೂ ಕಳೆದುಕೊಂಡಿಲ್ಲ, ಅಲ್ಲದೇ ನಮ್ಮ ಪೂರ್ವಜರು ನಮಗೆ ಅದೆಷ್ಟೋ ಮನೆಮದ್ದುಗಳನ್ನು ಸಹ ನಮಗೆ ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ. ಅಂತಹದರಲ್ಲಿ ಬೇವಿನ ಮರವೂ ಒಂದು. ಹೌದು ಬೇವಿನ ಮರವೂ ಅದೆಷ್ಟೋ ಔಷಧಿಯ ಗುಣವನ್ನು ಹೊಂದಿದೆ ಎಂದು 2000 ವರ್ಷಗಳ ಹಿಂದೆ ನಮ್ಮ ಹಿರಿಯರಿಗೆ ತಿಳಿದಿತ್ತು. ಬೇವಿನ ಮರದಲ್ಲಿ ನೂರಕ್ಕೂ ಹೆಚ್ಚು ಕಾಯಿಲೆಯನ್ನು ಗುಣಪಡಿಸುವ ಗುಣ ಹೊಂದಿದ್ದು, ಇದು ವೈದ್ಯಲೋಕಕ್ಕೆ ಒಂದು ವರ ಅಂತಾನೇ ಹೇಳಬಹುದು.

ಈ ಬೇವಿನ ಮರದಲ್ಲಿ ಯಾವೆಲ್ಲಾ ರೋಗ ನಿರೋಧಕ ಗುಣಗಳು ಇವೆ ಅನ್ನೋದನ್ನು ನಾವು ಇವತ್ತು ತಿಳಿದುಕೊಳ್ಳೋಣ

  1. ಮನೆಯ ಬಳಿ ಒಂದು ಬೇವಿನ ಮರವಿದ್ರೆ ಅದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಡುವುದ ಜೊತೆಗೆ ಗಾಳಿಯಲ್ಲಿ ಬರುವ ಅನೇಕ ರೀತಿಯ ವೈರಸ್‍ಗಳನ್ನು ಸಹ ಇದು ತಡೆದು ನಿಲ್ಲಿಸುತ್ತದೆ.
  2. ನಿಮಗೆ ಮೈಯಲ್ಲಿ ತುರಿಕೆ ಇದ್ದರೆ, ಬೇವಿನ ಎಲೆಯನ್ನು ನುಣ್ಣಗೆ ಅರೆದು ಪೇಸ್ಟ್ ಮಾಡಿ ಅದನ್ನು ಚರ್ಮಕ್ಕೆ ಲೇಪನ ಮಾಡಿ ಒಂದುಗಂಟೆಗೂ ಹೆಚ್ಚುಕಾಲ ಬಿಟ್ಟು ನಂತರ ಸ್ನಾನ ಮಾಡಿದ್ರೆ ಕ್ರಮೇಣ ತುರುಕೆಯು ಕಡಿಮೆಯಾಗುತ್ತಾ ಹೋಗುತ್ತದೆ.
  3. ಪ್ರತಿದಿನ ಎರಡರಿಂದ ಮೂರು ಬೇವಿನ ಎಲೆಯನ್ನು ಸೇವನೆ ಮಾಡೋದ್ರಿಂದ ನಿಮ್ಮ ದೇಹದಲ್ಲಿ ರಕ್ತದ ಶುದ್ಧೀಕರಣಕ್ಕೆ ಇದು ಸಹಾಯ ಮಾಡುತ್ತದೆ ಜೊತೆಗೆ ಇದು ಕಣ್ಣಿನ ದೃಷ್ಠಿಗೂ ಸಹ ಒಂದು ಉತ್ತಮ ಔಷಧಿ.
  4. ಪ್ರತಿದಿನ ಸ್ನಾನ ಮಾಡಲು ನೀರು ಕಾಯಿಸಿಕೊಳ್ಳುವಾಗ 5-6 ಬೇವಿನ ಎಲೆಯನ್ನು ನೀರಿನಲ್ಲಿ ಕಾಯಿಸಿ ಅದರಿಂದ ಸ್ನಾನ ಮಾಡಿದ್ರೆ ನಿಮಗಿರುವ ಅನೇಕ ಚರ್ಮದ ಕಾಯಿಲೆಗೆ ಇದು ರಾಮಬಾಣ ಅಂತಾನೇ ಹೇಳಬಹುದು.
  5. ನಿಮ್ಮ ಮುಖದಲ್ಲಿ ಮೊಡವೆಗಳಿದ್ರೆ ಅದಕ್ಕೆ ಬೇವಿನ ಎಲೆಯ ಪುಡಿಯನ್ನು ನೀರಿನ ಜೊತೆ ಬೆರಸಿ ಮೊಡವೆ ಇರುವ ಜಾಗಕ್ಕೆ ಹಚ್ಚಿದ್ರೆ, ಮೊಡವೆ ಇಲ್ಲದಂತಾಗಿ ಕಲೆಯೂ ಮಂಗಮಾಯವಾಗಿ ಹೋಗುತ್ತದೆ.
  6. ಬೇವಿನ ಕಡ್ಡಿಯಿಂದ ಪ್ರತಿದಿನ ಹಲ್ಲು ಉಜ್ಜುವುದರಿಂದ ಹಲ್ಲು ಹುಳುಕು ಹಿಡಿಯುವುದಿಲ್ಲ ಜೊತೆಗೆ ನಿಮ್ಮ ಬಾಯಿಯಿಂದ ದುರ್ವಾಸನೆ ಬರುವುದಿಲ್ಲ.
  7. ಒಣಗಿದ ಬೇವಿನ ಎಲೆ ಅಥವಾ ಕಡ್ಡಿಗೆ ಬೆಂಕಿ ಹಚ್ಚಿ ಮನೆಯ ಸುತ್ತ ಮುತ್ತ ಹೊಗೆ ಹಾಕಿದ್ರೆ ಸೊಳ್ಳೆಯ ಕಾಟವಿರುವುದಿಲ್ಲ.
  8. ಬೇವಿನ ಮರದ ತೊಗಟೆಯನ್ನು ಚೆನ್ನಾಗಿ ಬೇಯಿಸಿ ಅದರ ನೀರನ್ನು ವಾರದಲ್ಲಿ ಒಂದು ದಿನ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಇರುವ ಕೆಟ್ಟ ರಕ್ತವನ್ನು ಶುದ್ಧ ಮಾಡಿ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.

ಈ ರೀತಿ ಮನೆಯಲ್ಲೇ ಸಿಗುವ ಮದ್ದುಗಳನ್ನು ನಮ್ಮ ಆರೋಗ್ಯಕ್ಕಾಗಿ ಉಪಯೋಗಿಸಿಕೊಂಡರೇ ನಮ್ಮ ಆರೋಗ್ಯ ಭಾಗ್ಯವಾಗಿರುವುದರಲ್ಲಿ ಅನುಮಾನವೇ ಇಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top