ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು..? ಗಂಗೂಲಿನಾ -ಧೋನಿನಾ..ಬಿಸಿ ಬಿಸಿ ಚರ್ಚೆ..

ಟೀಂ ಇಂಡಿಯಾದಲ್ಲಿ ಬೆಸ್ಟ್ ಕ್ಯಾಪ್ಟನ್ ಆಗಿದ್ದವರು ಯಾರು ಅನ್ನೋ ಬಿಸಿಬಿಸಿ ಚರ್ಚೆ ಈಗ ಕ್ರಿಕೆಟ್ ವಲಯದಲ್ಲಿ ಕೇಳಿ ಬರ್ತಾ ಇದೆ. ಇನ್ನು ತಮ್ಮ ತಮ್ಮ ನಿಲುವುಗಳಲ್ಲಿ ಒಬ್ಬೊಬ್ಬ ಕ್ಯಾಪ್ಟನ್ ಅವರನ್ನು ಒಬ್ಬೊಬ್ಬರು ಒಪ್ಪಿತ್ತಿದ್ದಾರೆ. ಅದರಲ್ಲೂ ಧೋನಿ ಮತ್ತು ಗಂಗೂಲಿ ಇವರಿಬ್ಬರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್ ಅನ್ನೋ ಮಾತುಗಳು ಈಗ ಎಲ್ಲಾ ಕಡೆ ಕೇಳಿ ಬರ್ತಾ ಇದ್ದು, ಸದ್ಯ ಹಾಟ್ ಟಾಪಿಕ್ ಆಗಿದೆ.

ಹೀಗಿರುವಾಗ ಭಾರತ ತಂಡದ ಕ್ರಿಕೆಟ್ ಜರ್ನಿಯಲ್ಲಿ ಧೋನಿಗಿಂತ ಗಂಗೂಲಿ ಬಹಳ ಪರಿಣಾಮಕಾರಿ ಕ್ಯಾಪ್ಟನ್ ಅಂತ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿದ ಪಾರ್ಥಿವ್ ಪಟೇಲ್, ಧೋನಿ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದಿರ ಬಹುದು, ಆದ್ರೆ ಟೀಂ ಇಂಡಿಯಾ ಕಷ್ಟದ ದಿನಗಳನ್ನು ಎದುರಿಸದ ಸಂಧರ್ಭದಲ್ಲಿ ಟೀಂ ಅನ್ನು ಕಟ್ಟಿ ಬೆಳೆಸಿದ್ದು ಸೌರವ್ ಗಂಗೂಲಿ ಎಂದು ಹೇಳಿದ್ದಾರೆ.

2000ರಲ್ಲಿ ಗಂಗೂಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆದಾಗ ಟೀಂ ಕಷ್ಟದಲ್ಲಿತ್ತು ಅಷ್ಟೇನು ಚೆನ್ನಾಗಿ ಆಡುತ್ತಿರಲಿಲ್ಲ, ಕಠಿಣ ಸಮಯವನ್ನು ಎದುರಿಸುತ್ತಿತ್ತು, ಈ ವೇಳೆ ವಿದೇಶದಲ್ಲಿ ಹಲವು ಟೂರ್ನಿಗಳನ್ನು ಗೆದ್ದಿದ್ದರು, ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಗೆದ್ದು ಬಂದಿದ್ದೇವು, ಆಸ್ಟ್ರೇಲಿಯಾದಲ್ಲಿ ಎಷ್ಟೋ ವರ್ಷಗಳ ನಂತರ ಟೆಸ್ಟ್ ಸರಣಿ ಗೆದ್ದುಕೊಂಡು ಬಂದಿದ್ದೇವು ಅದು ಸೌರವ್ ಗಂಗೂಲಿ ಕ್ಯಾಪ್ಟನ್ ಶಿಪ್‍ನಲ್ಲಿ ಅಂತ ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಈ ಸರಣಿಯನ್ನು ಗೆಲ್ಲಲು ಗಂಗೂಲಿ ಕಟ್ಟಿದ ಟೀಂನಿಂದಾಗಿ ಸದ್ಯವಾಯಿತು, ಇನ್ನು 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‍ನಲ್ಲಿ ಯಾರು ಸಹ ಭಾರತ ಫೈನಲ್ ಪ್ರವೇಶಿಸುತ್ತದೆ ಎಂದು ಅಂದಾಜು ಸಹ ಮಾಡಿರಲಿಲ್ಲ, ಆದ್ರೆ ಸೌರವ್ ಸಾರಥ್ಯದಲ್ಲಿ ಫೈನಲ್ ಪ್ರವೇಶ ಮಾಡಿದ್ವಿ. ಧೋನಿ ಪ್ರಮುಖ ಎಲ್ಲಾ ಟ್ರೋಫಿಗಳನ್ನು ಗೆದ್ದಿದ್ದರು ನನಗೆ ಗಂಗೂಲಿ ಇಷ್ಟವಾಗುತ್ತಾರೆ ಎಂದು ಪಾರ್ಥಿವ್ ಹೇಳಿದ್ದಾರೆ.

ಇದೇ ವೇಳೆ ಧೋನಿ 2007ರಲ್ಲಿ ಗೆದ್ದ ಟಿ 20 ವಿಶ್ವಕಪ್ ಮತ್ತು 2011ರ ವಿಶ್ವಕಪ್‍ನಲ್ಲಿ ಆಡಿದ ಪ್ರಮುಖ ಆಟಗಾರರು ಗಂಗೂಲಿಯ ಬಳಿ ಟಿಪ್ಸ್ ಪಡೆದು ಗಂಗೂಲಿ ಗರಡಿಯಲ್ಲಿ ಪಳಗಿದ ಆಟಗಾರರು, ಈ ಆಟಗಾರರು ಇದ್ದ ಕಾರಣ ಧೋನಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಯಿತು ಅಂತ ಹೇಳಿದ್ದಾರೆ.

ಈ ಹಿಂದೆ ಕೂಡ ಸಂಸದ ಮತ್ತು ಮಾಜಿ ಟೀಂ ಇಂಡಿಯಾದ ಆಟಗಾರರ ಗೌತಮ್ ಗಂಭೀರ್ ಕೂಡ ಧೋನಿ ವಿಚಾರವಾಗಿ ಮಾತುಗಳನ್ನು ಹೇಳಿದ್ದು, ಧೊನಿಗಿಂತ ಗಂಗೂಲಿ ಉತ್ತಮ ನಾಯಕ, ಧೋನಿಗೆ ಅದೃಷ್ಟವಿತ್ತು ಹಾಗಾಗಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದ್ರೆ ಗಂಗೂಲಿ ಬಲಿಷ್ಠ ತಂಡವನ್ನು ಕಟ್ಟಿದ್ರು,ಜೊತೆಗೆ ಅದ್ಭುತ ಆಟಗಾರರನ್ನು ಹುಟ್ಟುಹಾಕಿದ್ರು, ಆದ್ರೆ ಧೋನಿ ಆ ರೀತಿಯ ಯಾವ ಕೆಲಸವನ್ನು ಮಾಡಲಿಲ್ಲ ಅಂತ ಹೇಳಿದ್ರು.

ಅಂದ ಹಾಗೆ ನಿಮಗೆ ಇಷ್ಟವಾಗುವ ಹಾಗೂ ಬೆಸ್ಟ್ ಕ್ಯಾಪ್ಟನ್ ಯಾರು ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top