ಕೊನೆಗೂ ಬೆಂಗಳೂರಿಗೆ ಬಂದೇ ಬಿಡ್ತು ಪ್ರೀಪೇಡ್ ಕರೆಂಟ್ ವ್ಯವಸ್ಥೆ!

prepaid electric bescom

ಇನ್ಮುಂದೆ ಏನಿದ್ರು ಫಸ್ಟ್ ದುಡ್ಡು ಕಟ್ಟಿ ಆಮೇಲೆ ಕರೆಂಟ್ ಉಪಯೋಗಿಸಿ ಅನ್ನೋ ಪಾಲಿಸಿ ಅಂಡ್ ಎಲ್ಲವೂ ಡಿಜಿಟಲ್ ಮಯವಾಗಲಿದೆ.

ಹೌದು ಬಹಳ ದಿನಗಳಿಂದ ಹೇಳಲಾಗುತ್ತಿದ್ದ ಪ್ರೀಪೇಯ್ಡ್ ವಿದ್ಯುತ್ ಸರ್ವೀಸ್ ಕೊನೆಗೂ ಬೆಸ್ಕಾಂ ಜಾರಿಗೆ ತರುತ್ತಿದೆ. ಸದ್ಯಕೆ ಹೊಸ ಕನೆಕ್ಷನ್‍ಗೆ ಮಾತ್ರ ಪ್ರೀಯೇಯ್ಡ್ ವ್ಯವಸ್ಥೆ ಜಾರಿಗೆ ಬರಲಿದ್ದು, ನಂತರ ಎಲ್ಲೆಡೆ ಈ ಪ್ರೀಪೇಯ್ಡ್ ವಿದ್ಯುತ್ ಬರಲಿದೆ. ಇಷ್ಟು ದಿನ ಪ್ರತಿ ತಿಂಗಳು ನಾವು ಬಳಸಿದ ಯುನಿಟ್‍ಗಳ ಆಧಾರದ ಮೇಲೆ ಕರೆಂಟ್ ಬಿಲ್ ಬರುತ್ತಿತ್ತು ನಂತರ ಆ ಬಿಲ್ ಪಾವತಿಸುತ್ತಿದ್ದೆವು, ಆದರೆ ಇನ್ಮುಂದೆ ಮೊಬೈಲ್ ಕರೆನ್ಸಿಯ ರೀತಿ ಮೊದಲಿಗೆ ರೀಚಾರ್ಜ್ ಮಾಡಿಕೊಂಡು ಕರೆಂಟ್ ಉಪಯೋಗಿಸಬೇಕು.

ಹೌದು ಬೆಸ್ಕಾಂ ಇದಕ್ಕೆ ಆ್ಯಪ್‍ನ್ನು ಬಿಡುಗಡೆ ಮಾಡಲಿದೆ ಅದರಲ್ಲಿ ಲಾಗಿನ್ ಆಗಿ ಎಷ್ಟು ಬೇಕಾದರೂ ರೀಚಾರ್ಜ್ ಮಾಡಿಕೊಳ್ಳಬಹುದು. ಕರೆನ್ಸಿ ಖಾಲಿ ಆದ ತಕ್ಷಣ ನಿಮ್ಮ ಮನೆಯ ಕರೆಂಟ್ ಆಫ್ ಆಗಲಿದೆ. ನಿಮ್ಮ ಕರೆನ್ಸಿ ಬ್ಯಾಲೆನ್ಸ್ ನ್ನು ಆಪ್‍ನಲ್ಲಿ ನೋಡಬಹುದು. ನಿಮ್ಮ ಬಳಕೆಗೆ ತಕ್ಕಂತೆ ಎಷ್ಟು ಬೇಕಾದರೂ ರೀಚಾರ್ಜ್ ಮಾಡಿ ಕರೆಂಟ್ ಬಳಸಬಹುದು.

ಇನ್ಮುಂದೆ ಬೆಸ್ಕಾಂ ಸಿಬ್ಬಂಧಿಗಳಿಗೆ ಪ್ರತಿ ತಿಂಗಳು ಕೊನೆಯ ದಿನಾಂಕ ಮುಗಿದ ತಕ್ಷಣ ಯಾರ್ಯಾರು ಬಿಲ್ ಕಟ್ಟಿಲ್ಲ ಅವರ ಮನೆಗೆ ಹೋಗಿ ತಿಳಿಸುವುದು, ಕರೆಂಟ್ ಸಪ್ಲೈ ಕಟ್ ಮಾಡುವ ಕಿರಿ ಕಿರಿ ಇಲ್ಲ. ಎಲ್ಲವೂ ಅಟೋಮ್ಯಾಟಿಕ್ ವ್ಯವಸ್ಥೆ ಇರಲಿದೆ.
ಈ ಪ್ರೀಪೇಯ್ಡ್ ಕರೆಂಟ್ ಬಗ್ಗೆ ನೀವು ಏನ್ ಹೇಳ್ತೀರ ಕಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top