ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದ್ರೆ ಏನೆಲ್ಲಾ ಉಪಯೋಗ ಗೊತ್ತಾ.?

ಬೆಳ್ಳುಳ್ಳಿ ಸಾಮಾನ್ಯವಾಗಿ ಅಡುಗೆಗೆ ಪ್ರಮುಖವಾಗಿ ಬೇಕಾಗಿರುವ ಸಾಂಬಾರ್ ಪದಾರ್ಥ, ಬೆಳ್ಳುಳ್ಳಿ ಕೇವಲ ಅಡುಗೆಗೆ ಸೀಮಿತವಾಗಿರದೇ, ಅದು ನಮ್ಮ ಆರೋಗ್ಯಕ್ಕೂ ಕೂಡ ಒಂದು ಪ್ರಮುಖವಾದ ವಸ್ತುವಾಗಿದೆ, ಇನ್ನು ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನೆಲ್ಲಾ ಉಪಯೋಗಳಿವೆ ಗೊತ್ತಾ.

ಪ್ರತಿದಿನ ಬೆಳ್ಳುಳ್ಳಿ ಬಳಸಿ ದೇಹದ ಆರೋಗ್ಯವನ್ನು ಸಧೃಡವಾಗಿಡಿ ಎಂದು ಹೇಳುತ್ತದೆ ಮನೆ ಮದ್ದು. ಇನ್ನು ಕೆಲವರಿಗೆ ಬೆಳ್ಳುಳ್ಳಿಯ ವಾಸನೆ ಬಂದ ಕ್ಷಣವೇ ಒಂದು ರೀತಿಯ ಇರುಸು ಮುರುಸು ಆಗುತ್ತದೆ,

Read : ಮುಖದಲ್ಲಿ ಮೊಡವೆಯೇ.? ಒಂದೇ ವಾರದಲ್ಲಿ ಸಿಗಲಿದೆ ಪರಿಹಾರ.! ಹೀಗೆ ಮಾಡಿ ಅಷ್ಟೇ..!

ಪ್ರತಿದಿನ ಒಂದೆರಡು ಬೆಳ್ಳುಳ್ಳಿ ಎಸಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆಯೆಂದು ತಿಳಿದುಕೊಳ್ಳೋಣ ಬನ್ನಿ.

  1. ಪ್ರತಿದಿನ ಒಂದೆರಡು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಮಲಬದ್ಧತೆ ಇಲ್ಲದಂತಾಗುತ್ತದೆ, ಜೊತೆಗೆ ನಿಮಗೆ ಮಂಡಿನೋವು, ಕೀಲು ನೋವಿದ್ದರೆ ಅದು ಶಮನವಾಗುತ್ತದೆ, ಜೊತೆಗೆ ಇದು ರಕ್ತದ ಒತ್ತಡವನ್ನು ಸಹ ಇದು ಹತೋಟಿಯಲ್ಲಿಡುತ್ತದೆ.
  2. ಬೆಳ್ಳುಳ್ಳಿ ಸೇವಿಸುವುದರಿಂದ ನಿಮಗೆ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅದು ನಿಮ್ಮಲ್ಲಿ ಹಸಿವನ್ನು ಸಹ ಹೆಚ್ಚಿಸುತ್ತದೆ.
  3. ಬೆಳಗ್ಗೆ ನೀವೂ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅದು ನಿಮ್ಮಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಮ್ಮಿ ಮಾಡುವ ಜೊತೆಗೆ ನಿಮ್ಮ ದೇಹದಲ್ಲಿರುವ ವಿಷ ಪದಾರ್ಥಗಳನ್ನು ಮಲ ಮತ್ತು ಮೂತ್ರದ ಮೂಲಕ ಹೊರ ಹಾಕುತ್ತದೆ.
  4. ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ದೇಹದ ಬೊಜ್ಜು ಕರಗಿಸುವ ಜೊತೆಗೆ ಇದು ದೇಹದಲ್ಲಿರುವ ಕ್ಯಾನ್ಸರ್ ಜೀವಾಣುಗಳು ಶಕ್ತಿ ಕಳೆದುವಂತೆ ಮಾಡುತ್ತದೆ.
  5. ಬೆಳ್ಳುಳ್ಳಿ ಸೇವನೆಯಿಂದ ಅಸ್ತಮ, ಕೆಮ್ಮು, ಕಫ, ನರವ್ಯಾಧಿ, ಬಿಕ್ಕಳಿಕೆ, ಮುಖದ ಮೇಲಿನ ಮೊಡವೆ ಕೂಡ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.

ಈ ರೀತಿ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top