ಐಸಿಸಿ ವಿರುದ್ಧ ಅಸಮಧಾನ ಹೊರ ಹಾಕಿದ ಬಿಸಿಸಿಐ..!

ಕೊರೊನಾ ಹಾವಳಿಯಿಂದಾಗಿ ಈಗಾಗಲೇ ನಡೆಯ ಬೇಕಾಗಿದ್ದ ಅದೆಷ್ಟೋ ಕ್ರಿಕೆಟ್ ಟೂರ್ನಿಗಳು ರದ್ದಾಗಿದ್ದು, ಅದರಲ್ಲಿ ಪ್ರಮುಖವಾಗಿ ವಿಶ್ವಕಪ್ ಟಿ 20 ಟೂರ್ನಿ ಕೂಡ ಕೊರೊನಾ ಎಫೆಕ್ಟ್‍ಗೆ ಬಲಿಯಾಗಿದೆ, ಇನ್ನು ಮೂರು ನಾಲ್ಕು ಬಾರಿ ಐಸಿಸಿ ಟಿ20 ವಿಶ್ವಕಪ್ ವಿಚಾರವಾಗಿ ಮೀಟಿಂಗ್‍ಗಳನ್ನು ಮಾಡಿದ್ರು ಯಾವುದೇ ಪ್ರಯೋಜನಗಳೂ ಕೂಡ ಆಗಿಲ್ಲ, ಅಷ್ಟೇ ಅಲ್ಲದೇ ಜುಲೈ ಮಧ್ಯಭಾಗದ ವರೆಗೆ ಮೀಟಿಂಗ್ ಅನ್ನೂ ಕೂಡ ಮುಂದೂಡಿದೆ, ಹೀಗಿರುವಾಗ ಬಿಸಿಸಿಐ ಐಸಿಸಿಗೆ ಪ್ರಶ್ನೆಯನ್ನು ಹಾಕುವ ಮೂಲಕ ಅಸಮಾಧಾನವನ್ನು ಹೊರಹಾಕಿದೆ.
ಹೌದು ಟಿ20 ವಿಶ್ವಕಪ್ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಬೇಕಾಗಿದ್ದು, ಆದ್ರೆ ಟಿ20 ವಿಶ್ವಕಪ್ ನಡೆಸಬೇಕೋ ಬೇಡವೋ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ, ಇದೇ ವೇಳೆ ಈ ಬಾರಿಯ ವಿಶ್ವಕಪ್ ಆತಿಥ್ಯ ವಹಿಸಿದ್ದ ಆಸ್ಟ್ರೇಲಿಯಾ ಟೂರ್ನಿ ನಡೆಸೋದು ಅಸಾಧ್ಯ,ಕೊರೊನಾ ಹಾವಳಿಯಿಂದಾಗಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹೀಗಾಗಿ ಟೂರ್ನಿ ನಡೆಸೋದು ಅಸಾಧ್ಯ ಎಂದು ಹೇಳಿದೆ, ಹೀಗಿದ್ದರು ಐಸಿಸಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳದೇ ಇರುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿಚಾರವಾಗಿ ಐಸಿಸಿಗೆ ಪ್ರಶ್ನೆಯನ್ನು ಹಾಕಿದೆ.

ಟಿ20 ವಿಶ್ವಕಪ್ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಯಾಕೆ ತಡಮಾಡುತ್ತಿದೆ ಅನ್ನೋದನ್ನ ತಿಳಿಸಬೇಕು ಅನ್ನೋ ಒತ್ತಾಯವನ್ನು ಬಿಸಿಸಿಐ ಮಾಡಿದೆ.ಇನ್ನು ಕೊರೋನಾ ಎಫೆಕ್ಟ್‍ನಿಂದಾಗಿ ಐಪಿಎಲ್ ಕೂಡ ರದ್ದಾಗಿದ್ದು, ಒಂದು ವೇಳೆ ಟಿ20 ವಿಶ್ವಕಪ್ ಟೂರ್ನಿ ರದ್ದಾದರೆ ಆ ವೇಳಾ ಪಟ್ಟಿಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನವನ್ನು ಸಹ ತೆಗೆದುಕೊಂಡಿದೆ.

ಒಟ್ಟಿನಲ್ಲಿ ಒಂದು ಕಡೆ ಕೊರೋನಾ ಹಾವಳಿಯಿಂದಾಗಿ ವಿಶ್ವಕಪ್ ಟಿ20 ನಡೆಯುತ್ತಿಲ್ಲ, ಇತ್ತ ಐಸಿಸಿ ಯಾವ ತೀರ್ಮಾನವನ್ನು ತೆಗೆದುಕೊಳ್ಳದ ಹಿನ್ನೆಲೆ ಬಿಸಿಸಿಐಗೂ ತುಂಬಲಾರದ ನಷ್ಟ ಉಂಟಾಗುವ ಭೀತಿಯಲ್ಲೂ ಸಹ ಇದೆ.

ಇನ್ನು ಇದೇ ವೇಳೆ ಸ್ಟಾರ್ ಸ್ಪೋರ್ಸ್ ನೆಟ್‍ವರ್ಕ್ ಕೂಡ ಐಸಿಸಿಗೆ ಪತ್ರಬರೆದಿದ್ದು, ಐಸಿಸಿ ಆಯೋಜನೆಯಡಿಯಲ್ಲಿ ನಡೆಯುವ ಟೂರ್ನಿಗಳ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋಟ್ಸ್ ನೆಟ್‍ವರ್ಕ್ ಪಡೆದುಕೊಂಡಿರುವುದರಿಂದ ಯಾವಾಗ ಟೂರ್ನಿಗಳ ಆಯೋಜನೆ ಮಾಡಲಿದ್ದೀರಿ ಮತ್ತು ನಾವು ಟಿವಿ ಶೆಡ್ಯೂಲ್‍ಗಳನ್ನು ರೆಡಿಮಾಡಿಕೊಳ್ಳ ಬೇಕು ಮತ್ತು ವ್ಯವಹಾರಿಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು ಅನ್ನೋದನ್ನು ಹೇಳಿದೆ, ಇನ್ನು ಬಿಸಿಸಿಐ ಜೊತೆಗೂ 2023ರ ವರೆಗೆ ಭಾರತದಲ್ಲಿ ನಡೆಯುವ ಎಲ್ಲಾ ಟೂರ್ನಿಗಳು ಮತ್ತು ಐಪಿಎಲ್ ಪ್ರಸಾರದ ಹಕ್ಕನ್ನು ಸಹ ಸ್ಟಾರ್ ಸ್ಪೋರ್ಟ್ ನೆಟ್‍ವಕ್ ಪಡೆದುಕೊಂಡಿದ್ದು, ಹೀಗಾಗಿ ಇದು ಸಹ ಬಿಸಿಸಿಐ ಮತ್ತು ಐಸಿಸಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top