ಇದು ವಿಶಿಷ್ಟದಲ್ಲಿ ವಿಶಿಷ್ಟ ಮದುವೆ – ಗಂಡನಿಗೆ ತಾಳಿ ಕಟ್ಟಿದ ಹೆಂಡತಿ.!

basavanna followers marriage.

ಪ್ರಪಂಚದಲ್ಲಿ ಒಂದು ಗಂಡು, ಒಂದು ಹೆಣ್ಣು ತನ್ನ ಮದುವೆಯ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ, ತನ್ನ ಮದುವೆ ಆಗಸದಲ್ಲಿ ಆಗಬೇಕು, ನೀರಿನ ಒಳಗೆ ಆಗಬೇಕು, ಒಬ್ಬೊಬ್ಬರಿಗೆ ಒಂದು ರೀತಿಯ ಕನಸಿರುತ್ತೆ ತಮ್ಮ ಮದುವೆಗಳ ಬಗ್ಗೆ, ಇನ್ನು ಕೆಲವರು ತಮ್ಮ ಮದುವೆಯನ್ನು ಆಡಂಬರದಿಂದ ಮಾಡಿಕೊಂಡರೆ ಇನ್ನು ಕೆಲವರು ತಮ್ಮ ಮದುವೆಯನ್ನು ಕೆಲವರಿಗೆ ಮಾದರಿಯಾಗುವ ರೀತಿ ಮದುವೆಯಾಗ್ತಾರೆ, ಆದ್ರೆ ಇಲ್ಲೊಂದು ಮದುವೆ ನಡೆದಿದೆ ಈ ವಿವಾಹ ಮಹೋತ್ಸವ ಉಳಿದೆಲ್ಲದಕ್ಕಿಂತ ಭಿನ್ನ ವಾದಂತಹದ್ದು, ಹೌದು ಇಲ್ಲಿ ಪತಿಗೆ ತಾಳಿಯನ್ನ ಪತ್ನಿ ಕಟ್ಟಿರೋ ವಿಭಿನ್ನ ಮದುವೆ ನಡೆದಿದೆ. ಹೌದು ಈ ವಿಭಿನ್ನ ವಿವಾಹ ಮಹೋತ್ಸವ ನಡೆದಿರೋದು ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಲತಾವಾಡ ಪಟ್ಟಣದಲ್ಲಿ. ಬರಗುಂಡಿ ವಂಶಸ್ಥರ ವಿವಾಹ ಮಹೋತ್ಸವಾಗಿದ್ದು, ಪ್ರಭುರಾಜ ಮತ್ತು ಅಂಕಿತಾ ಹಾಗೂ ಅಮಿತ್ ಮತ್ತು ಪ್ರಿಯಾ ವಿವಾಹ ಜೋಡಿಯಾಗಿದ್ದು, ಪ್ರಭುರಾಜಗೆ ಅಂಕಿತಾ ,ಹಾಗೂ ಅಮಿತ್ ಗೆ ಪ್ರಿಯಾ ಮಾಂಗಲ್ಯ ಧಾರಣೆ ಮಾಡುವ ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಈ ಹೊಸ ಜೋಡಿಗಳು.

ಪತಿಗೆ ತಾಳಿಯನ್ನ ಪತ್ನಿ ಕಟ್ಟಿರೋ ವಿಭಿನ್ನ ಮದುವೆ ನಡೆದಿದೆ


ಇನ್ನು 12ನೇ ಶತಮಾನದ ಕಲ್ಯಾಣ ಕಾಂತ್ರಿಗೆ ಮುನ್ನುಡಿ ಬರೆದ ಈ ಹೊಸ ಜೋಡಿಗಳು ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿರೋದು ವಿಶೇಷವಾಗಿತ್ತು, ಇನ್ನು ಅಪ್ಪಟ ಬಸವ ಧರ್ಮದ ಅಡಿಯಲ್ಲಿ ಮದುವೆ ನಡೆದಿದ್ದು ಮದುವೆಗೆ ಯಾವ ಶುಭಮೂಹೂರ್ತವನ್ನು ನೋಡಿಲ್ಲ, ವಧುವರರಿಗೆ ಅಕ್ಷತೆ ಬದಲು ಹೂವಿನಿಂದ ಆಶೀರ್ವಾದ ಮಾಡಲಾಯಿತು, ಇನ್ನು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಬಸವಣ್ಣನ ವಚನ ಸಾರುವ ಪುಸ್ತಕಗಳನ್ನು ನೀಡಿದ್ದು ವಿಶೇಷವಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top