ಪ್ರತಿದಿನ ಒಂದು ಲೋಟ ಬಾರ್ಲಿ ನೀರು ಕುಡಿಯಿರಿ ನಿಮ್ಮ ಆರೋಗ್ಯ ಹೇಗಿರುತ್ತೆ ನೋಡಿ.!

ಪ್ರತಿದಿನ ಒಂದು ಲೋಟ ಬಾರ್ಲಿ ನೀರು ಕುಡಿದ್ರೆ ನಿಮ್ಮ ಆರೋಗ್ಯದಲ್ಲಿ ಬಹಳ ಬದಲಾವಣೆಗಳಾಗುತ್ತೆ, ಬಾರ್ಲಿ ನೀರನ್ನು ಕುಡಿಯುವುದರಿಂದ ಹಲವು ಸಮಸ್ಯೆಗಳು ಪರಿಹಾರ ಸಿಗುತ್ತೆ, ಪ್ರತಿದಿನ ರಾತ್ರಿ ಬಾರ್ಲಿಯನ್ನು ನೀರಿನಲ್ಲಿ ನೆನೆಸಿ ಅದನ್ನು ಬೆಳಗ್ಗೆ ಕುದಿಸಿ ಆರಿಸಿ ಈ ಕೆಳಕಂಡ ರೀತಿ ಮಾಡಿದರೆ ನಿಮ್ಮ ಆರೋಗ್ಯ ಸುಧಾರಿಸುತ್ತೆ.

health-water
  1. ಪ್ರತಿ ದಿನ ಬಾರ್ಲಿಯ ನೀರಿನ್ನು ಸಕ್ಕರೆ ಕಾಯಿಲೆ ಇರುವವರು ಕುಡಿಯುವದನ್ನು ಅಭ್ಯಾಸ ಮಾಡಿಕೊಂಡರೆ ಈ ನೀರಿನ ಅಂಶ ನಿಮ್ಮ ಆಹಾರದಲ್ಲಿರುವ ಗ್ಲುಕೋಸ್ ಮತ್ತು ಸಕ್ಕರೆ ಅಂಶವನ್ನು ರಕ್ತಕ್ಕೆ ಸೇರಿಸುವ ಪ್ರಮಾಣವನ್ನು ಕಡಿಮೆಮಾಡುತ್ತದೆ ಅಲ್ಲದೇ ಅದನ್ನು ನಿಮ್ಮ ರಕ್ತದಲ್ಲಿ ನಿಧಾನವಾಗಿ ಸೇರಿಸುತ್ತದೆ ಆದ್ದರಿಂದ ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
  2. ದಿನಕ್ಕೆ ಒಂದು ಲೋಟ ಬಾರ್ಲಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಮೂತ್ರದ ಸಮಸ್ಯೆ ಉಂಟಾಗುವುದಿಲ್ಲ, ಜೊತೆಗೆ ದೇಹವು ತಂಪಾಗಿರುತ್ತದೆ ಅಲ್ಲದೇ ಬೆವರು ಗುಳ್ಳೇ, ಹೊಟ್ಟೆಹುರಿ ಈ ರೀತಿಯ ಸಮಸ್ಯೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ.
  3. ಬಾರ್ಲಿಯಲ್ಲಿ ನಾರಿನ ಅಂಶ ಇರುವುದರಿಂದ ದೇಹದಲ್ಲಿ ಪಚನಕ್ರಿಯೆ ಸುಲಭವಾಗಿ ಆಗುತ್ತದೆ ಅಲ್ಲದೇ ರಕ್ತ ಸಂಚಾರವೂ ಸಹ ಸುಗಮವಾಗಿ ಆಗುತ್ತದೆ, ಅಲ್ಲದೇ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗಿ ಹೃದಯದ ಒತ್ತಡವು ಕಡಿಮೆಯಾಗುತ್ತದೆ ಅಲ್ಲದೇ ದೇಹದ ತೂಕ ಇಳಿಯುತ್ತದೆ.
  4. ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಯಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದು ಪ್ರಮುಖವಾದ ಸಮಸ್ಯೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಅದೆಷ್ಟೋ ಜನ ಹಾಗಾಗಿ ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲು ನಿಧಾನವಾಗಿ ಕರಗುತ್ತದೆ.
  5. ಇನ್ನು ನಿಮಗೇನಾದರೂ ಲೂಸ್‍ಮೋಷನ್ ಉಂಟಾದಲ್ಲಿ ತಕ್ಷಣ ಬಾರ್ಲಿ ನೀರನ್ನು ಸೇವಿಸುವುದರಿಂದ ದೇಹಕ್ಕೆ ನೀರಿನ ಅಂಶವನ್ನು ಕೊಡುವ ಜೊತೆಯಲ್ಲಿ ಅದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಅಲ್ಲದೇ ಲೂಸ್‍ಮೋಷನ್ ತಕ್ಷಣ ನಿಲ್ಲಿಸುವ ಶಕ್ತಿ ಬಾರ್ಲಿಯಲ್ಲಿದೆ.
  6. ಬಾರ್ಲಿಯನ್ನು ನೀರಿನಲ್ಲಿ ಬೇಯಿಸಿ ನಂತರ ಆ ನೀರನ್ನು ಸೋಸಿ ಅದರಿಂದ ಮುಖವನ್ನು ತೊಳೆದುಕೊಳ್ಳುವುದರಿಂದ ಮುಖದ ಕಾಂತಿಕೂಡ ಹೆಚ್ಚಾಗುತ್ತದೆ.

ಪ್ರತಿ ದಿನ ಬಾರ್ಲಿಯನ್ನು ಉಪಯೋಗಿಸುವುದರಿಂದ ನಿಮ್ಮ ಆರೋಗ್ಯ ಯಾವಾಗಲೂ ಉತ್ತಮ ಮತ್ತು ಸಧೃಡವಾಗಿರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top