ಕೂದಲೆಳೆಯಲ್ಲಿ ಪಾರಾದ ಬಾಂಗ್ಲಾ ಕ್ರಿಕೆಟ್ ಟೀಂ.!

ನ್ಯೂಜಿಲೆಂಡ್ ನ ಎರಡು ಮಸೀದಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಹಲವರು ಸಾವನ್ನಪ್ಪಿದ್ದಾರೆ, ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದಲ್ಲಿರೋ ಎರಡು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದಿದ್ದವರ ಮೇಲೆ ಗುಂಡಿನ ದಾಳಿ ನಡೆದಿದೆ, ಮಿಲಿಟರಿ ಡ್ರಸ್ ಧರಿಸಿ ರೈಫಲ್ ಹಿಡಿದು ಬಂದಿದ್ದ ವ್ಯಕ್ತಿ ಅಲ್ ನೂರ್ ಮಸೀದಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ, ಈ ವೇಳೆ ಇದೇ ಮಸೀದಿಗೆ ಪ್ರಾರ್ಥನೆಗೆಂದು ಬರುತ್ತಿದ್ದ ಬಾಂಗ್ಲಾ ಕ್ರಿಕೆಟ್ ಟೀಂ ಕೂದಲೆಳೆಯಲ್ಲಿ ಪಾರಾಗಿದ್ದಾರೆ ಎಲ್ಲರೂ ಸುರಕ್ಷಿತವಾಗಿದ್ದೇವೆ ಅಂತ ಬಾಂಗ್ಲಾ ಕೋಚ್ ಹೇಳಿದ್ದಾರೆ, ಇನ್ನು ನ್ಯೂಜಿಲೆಂಡ್ ಪೋಲಿಸರು ಒಬ್ಬನನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ, ಸದ್ಯ ನ್ಯೂಜಿಲೆಂಡ್ ಜನತೆಗೆ ಮಸೀದಿಗೆ ಸದ್ಯ ಹೋಗಬೇಡಿ ಅಂತ ಪೋಲಿಸರು ಸೂಚಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top