ಸಂಚಾರಿ ನಿಯಮ ಹೊಸ ಕಾಯ್ದೆ 17 ಸಾವಿರ ದಂಡ‌ ಕಟ್ಟಿದ ಬೆಂಗಳೂರು ಹುಡುಗ.!

ಹೊಸ ಮೋಟಾರ್ ವಾಹನ ಕಾಯ್ದೆ ಜಾರಿಯಾದ ಕೆಲವೇ ಗಂಟೆಗಳಲ್ಲಿ 17000 ರೂ ದಂಡ ಕಟ್ಟಿದ್ದಾನೆ, ಬೆಂಗಳೂರಿನ ಕುಮಾರಸ್ವಾಮಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ, ಆಕಾಶ್ ಎಂಬ ವ್ಯಕ್ತಿ ಗಾಡಿ ಓಡಿಸಿಕೊಂಡು ಬರುವಾಗ. ಆತನನ್ನು ತಡೆದು ತಪಾಸಣೆಗೆ ಒಳಪಡಿಸಿದ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಆಕಾಶ್ ಕುಡಿದು ಗಾಡಿ ಓಡಿಸುತ್ತಿದ್ದದ್ದು ಬೆಳಕಿಗೆ ಬಂದಿದೆ, ಅಲ್ಲದೇ ಆಕಾಶ್ ಮತ್ತು ಆತನ ಹಿಂಬದಿ ಸವಾರ ಹೆಲ್ಮೆಟ್ ಹಾಕಿರಲ್ಲ ಜೊತೆಗೆ ಆಕಾಶ್ ಬಳಿ ಡಿಎಲ್ ಕೂಡ ಇರಲಿಲ್ಲ ಇದನೆಲ್ಲ ಪರಿಗಣಿಸಿದ ಸಂಚಾರಿ ಪೊಲೀಸರು ಆಕಾಶ್ ಗೆ ಕುಡಿದು ಗಾಡಿ ಓಡಿಸಿದ್ದಕ್ಕೆ 10,000ರೂ, ಹೆಲ್ಮೆಟ್ ಇಲ್ಲದೇ ಸವಾರಿ ಮಾಡಿದಕ್ಕೆ ಇಬ್ಬರಿಗೂ ತಲಾ ಒಂದೊಂದು ಸಾವಿರ ಮತ್ತು ಡಿ.ಎಲ್ ಇಲ್ಲದೇ ವಾಹನ ಚಲಾಯಿಸುತ್ತಿದ್ದ ಕಾರಣ 5000ರೂಪಾಯಿ ದಂಡ ವಿಧಿಸಿದ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಒಟ್ಟು 17,000ರೂ ದಂಡವನ್ನು ಆಕಾಶ್ ಗೆ ವಿಧಿಸಿದ್ದಾರೆ.

ಇನ್ನು ನಿನ್ನೆಯಷ್ಟೆ ಹೊಸ ಕಾಯ್ದೆಯ ಪ್ರತಿ ರಾಜ್ಯ ಸರ್ಕಾರಕ್ಕೆ ಲಭಿಸಿದ್ದು ಕಾಯ್ದೆ ಜಾರಿಯಾದ 24 ಗಂಟೆಯಲ್ಲೇ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ, ಇ‌ನ್ನು ಈ ಹೊಸ ನೀತಿಯಿಂದ ವಾಹನ‌ ಸವಾರರಿಗೆ ತಲೆಬಿಸಿಯಾಗಿದ್ದು, ದೆಹಲಿಯಲ್ಲಿ ದಿನೇಶ್ ಎಂಬ ವ್ಯಕ್ತಿ ತನ್ನ ಗಾಡಿಗೆ 23,000 ದಂಡ ಹಾಕಿದನ್ನು ನೋಡಿ‌ ತನ್ನ 15,000 ಬೆಲೆಬಾಳೋ ಗಾಡಿಯನ್ನು ಪೊಲೀಸರ ಬಳಿಯೇ ಬಿಟ್ಟು ಹೋದ ಘಟನೆಯೂ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top