ಬಡವ ರಾಸ್ಕಲ್ ಮೇಲೆ ಡಾಲಿ ಅಭಿಮಾನಿಗಳಿಂದ ಬೇಸರ!

badava rascal

ನವೆಂಬರ್ ಒಂದನೇ ತಾರೀಕು ರಿಷಭ್ ಶೆಟ್ಟಿ ಕನ್ನಡ ಬರದವರಿಗೆ ಹಾಡಿರೋ ಏನೋ ಬಡವ ರಾಸ್ಕಲ್ ಕನ್ನಡ ಬರಲ್ವಾ ಅಂತ ಹಾಡು ಹೇಳಿದ್ರು.. ಆದ್ರೆ ಈ ಹಾಡು ಕೇಳಿದ ಡಾಲಿ ಧನಂಜಯ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.. ಕಾರಣ ಇಷ್ಟೇ ಡಾಲಿ ಧನಂಜಯ್ ಬಡವ ರಾಸ್ಕಲ್ ಅನ್ನೋ ಸಿನಿಮಾದಲ್ಲಿ ನಟಿಸ್ತಾ ಇದ್ದು ಈ ಟೈಟಲ್ ಅನ್ನು ಹಾಡಾಗಿ ಮಾಡಿದ್ದು ಡಾಲಿ ಅಭಿಮಾನಿಗಳಿಗೆ ಬೇಸರ ತರಿಸಿದೆ,

ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರೋ ಡಾಲಿ ಅವರ ಅಭಿಮಾನಿಗಳು ಯಾವ ಪದದ ಮೇಲು ಅಥವಾ ಯಾವ ಅಕ್ಷರದ‌ ಮೇಲು ಯಾರಿಗೂ ಪೇಟೆಂಟ್ ಇರುವುದಿಲ್ಲ..ಒಂದು ವೃತ್ತಿ ಧರ್ಮ ಅಂತ ಇರುತ್ತೆ .. ಬಡವ ರಾಸ್ಕಲ್ ಅನ್ನೋ ಸಿನಿಮಾ ಮಾಡೋ ವಿಷಯ ಗೊತ್ತಿದ್ದು ಈ ರೀತಿ ಹಾಡು ಮಾಡಿದ್ದು ಎಷ್ಟು ಸರಿ.. ಕನ್ನಡ ಬರದವರಿಗೆ ತಾನೇ ಈ ಹಾಡು ಮಾಡಿರೋದು ಆದ್ರೆ ಕನ್ನಡ ಗೊತ್ತಿಲ್ಲ ಅಂದ್ರೆ ಅವರಿಗೆ ಹೇಗೆ ಅರ್ಥವಾಗುತ್ತೆ ಹೇಳಿ ಎಂದಿದ್ದಾರೆ.

ಡಾಲಿ‌ ಧನಂಜಯ ಟ್ವೀಟ್….!!!

ಇನ್ನು ಟ್ವಿಟರ್ ನಲ್ಲಿ ನನ್ನ ಬಡವ ರಾಸ್ಕಲ್ ಸಿನಿಮಾಗೂ ನಿರ್ದೇಶಕ ರಿಷಭ್ ಹಾಡಿರೋ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ, ಇದು ಯಾವ ಸಿನಿಮಾದ ಹಾಡು ಅನ್ನೋದು ನನಗೆ ಗೊತ್ತಿಲ್ಲ ಈ ತಂಡಕ್ಕೆ ಗುಡ್ ಲಕ್ ಹೇಳ್ತೀನಿ..ನನ್ನ ಸಿನಿಮಾ ಪ್ರಮೋಟ್ ಮಾಡಿರೋದಕ್ಕೆ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top