ಡಿ. 27ಕ್ಕೆ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗ್ತಿದೆ ʻಅವನೇ ಶ್ರೀಮನ್ನಾರಾಯಣʼ..!

ಕನ್ನಡದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಅಂತಾನೇ ಕರೆಸಿಕೊಳ್ತಾ ಇರೋ ರಕ್ಷಿತ್‌ ಶೆಟ್ಟಿ ಅಭಿನಯದ ʻಅವನೇ ಶ್ರೀಮನ್ನಾರಾಯಣʼ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡದಿಂದ ಹೊಸದೊಂದು ಸುದ್ದಿ ಹೊರಬಿಂದಿದೆ. ಡಿಸೆಂಬರ್‌ 27ರಂದು ʻಎಎಸ್‌ಎನ್‌ʼ ಚಿತ್ರ ಐದು ಭಾಷೆಯಲ್ಲಿ ತೆರೆಕಾಣಲಿದೆ ಅನ್ನೋ ಮಾಹಿತಿಯನ್ನ ಚಿತ್ರತಂಡ ಹೊರಹಾಕಿತ್ತು. ಆದ್ರೀಗ ಚಿತ್ರತಂಡ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಸಿನಿಮಾ ರಿಲೀಸ್‌ ಮಾಡೋದಾಗಿ ಹೇಳಿದ್ದು. ಉಳಿದ ಭಾಷೆಯ ರಿಲೀಸ್‌ ಡೇಟ್‌ನಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡಿದ್ಯಂತೆ ಇದರಿಂದಾಗಿ ಏಕಕಾಲದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಅನ್ನೋ ಖುಷಿಯಲಿದ್ದ ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಕೊಂಚ ನಿರಾಸೆಯುಂಟಾಗಿದೆ. ಇನ್ನು ಕನ್ನಡದಲ್ಲಿ ಡಿಸೆಂಬರ್‌ 27ಕ್ಕೆ ರಿಲೀಸ್‌ ಆದ್ರೆ , ತೆಲುಗಿನಲ್ಲಿ ಹೊಸವರ್ಷದಂದು ಅಂದ್ರೆ ಜನವರಿ 1 ರಂದು ಚಿತ್ರ ರಿಲೀಸ್‌ ಆಗಲಿದೆ. ಇನ್ನು ತಮಿಳು ಮತ್ತು ಮಲೆಯಾಳಂನಲ್ಲಿ ಜನವರಿ 3ರಂದು ಚಿತ್ರ ಬಿಡುಗಡೆಯಾಗುತ್ತಿದ್ರೆ. ಹಿಂದಿಯಲ್ಲಿ ʻಅಡ್ವೆಂಚರ್ಸ್‌ ಆಫ್‌ ಶ್ರೀಮನ್ನಾರಾಯಣʼ ಟೈಟಲ್‌ ಮೂಲಕ ಜನವರಿ 17ರಂದು ಚಿತ್ರ ಬಿಡುಗಡೆಯಾಗಲಿದೆ. ಅಲ್ಲದೇ ಚಿತ್ರ ಹಕ್ಕುಗಳನ್ನು ತೆಲುಗಿನಲ್ಲಿ ʻದಿಲ್‌ ರಾಜʼ ಸಂಸ್ಥೆ ತೆಗೆದುಕೊಂಡಿದ್ರೆ, ತಮಿಳಿನಲ್ಲಿ ʻಸೀನ್‌ ಸ್ಕ್ರೀನ್‌ʼ ಸಂಸ್ಥೆ ಪಡೆದುಕೊಂಡಿದೆ.

#ASNತಮಿಳ್ ಪ್ರಮೋಷನ್ಸ್ನಲ್ಲಿ "ಲಕ್ಷ್ಮಿ" ಪ್ರತ್ಯಕ್ಷ!!!#handsupchallenge#ASN #AvaneSrimannarayana#RakshitShetty #Pushkarfilms #Shanvi #Sachin #PushkaraMallikarjunaiah #kannadafilms #kannadafilm #sandalwood #kannadamovies #kannadamovie#tamilmovies

Posted by Avane Srimannarayana on Tuesday, 17 December 2019

ಇನ್ನ ರಕ್ಷಿತ್‌ ಶೆಟ್ಟಿ ಹಾಗೂ ಶಾನ್ವಿ ಶ್ರೀವತ್ಸವ್‌ ಅಭಿನಯದ ʻಅವನೇ ಶ್ರೀಮನ್ನಾರಾಯಣʼ ಚಿತ್ರಕ್ಕೆ ಸಚಿನ್‌ ನಿರ್ದೇಶನ ಮಾಡಿದ್ದು. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿಬಂದಿರೋ ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಇದೆ.

"ಟ್ರೈನ್" ಒಳಗು – ಹೊರಗು ಎಲ್ಲೆಲ್ಲೂ "ನಾರಾಯಣ"Dec 27 10 days to go….#ASN #AvaneSrimannarayana#RakshitShetty #Pushkarfilms #Shanvi #Sachin #PushkaraMallikarjunaiah #hkprakash#shreedevientertainers#kannadafilms #kannadafilm #sandalwood #kannadamovies #kannadamovie

Posted by Avane Srimannarayana on Monday, 16 December 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top