ಅವನೇ ಶ್ರೀಮನ್‌ ನಾರಾಯಣನಿಗೆ ಧನುಷ್‌, ನಾನಿ,ನಿವಿನ್‌ ಪೌಲಿ ಸಾಥ್‌..!

Avane Srimannarayana

ಸ್ಯಾಂಡಲ್‌ವುಡ್‌ನ ಮತ್ತೊಂದು ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಸಿನಿಮಾ ʻಅವನೇ ಶ್ರೀಮನ್‌ ನಾರಾಯಣʼ ರಕ್ಷಿತ್‌ ಶೆಟ್ಟಿ ಅಭಿನಯದ ಈ ಸಿನಿಮಾ ಈಗಾಗಲೇ ಸಖತ್‌ ಸೌಂಡ್‌ ಮಾಡ್ತಾ ಇದ್ದು ಮುಂದಿನ ತಿಂಗಳು ತನ್ನ ಅವತಾರವನ್ನು ತೋರಿಸಲು ಬರ್ತಾ ಇದೆ. ಇನ್ನು ಇದೇ ವೇಳೆ ಐದು ಭಾಷೆಯಲ್ಲಿ ತೆರೆಗೆ ತರಲು ಸಿದ್ಧವಾಗಿರೋ ಚಿತ್ರತಂಡ , ಚಿತ್ರದಲ್ಲಿ ಏನೇನೂ ಇರಲಿದೆ ಅನ್ನೋ ಮಾಹಿತಿಯನ್ನು ನೀಡುವ ಸಲುವಾಗಿ ಟ್ರೈಲರ್‌ ಕೂಡ ನಾಳೇ ರಿಲೀಸ್‌ ಮಾಡಲು ರೆಡಿಯಾಗಿದೆ. ಇದೇ ವೇಳೆ ಐದು ಭಾಷೆಯಲ್ಲಿ ಟ್ರೈಲರ್‌ ರಿಲೀಸ್‌ ಮಾಡಲು ರೆಡಿಯಾಗಿರೋ ಚಿತ್ರತಂಡ ಟ್ರೈಲರ್‌ ಅನ್ನೂ ಆಯಾ ಭಾಷೆಯ ಸ್ಟಾರ್‌ನಟರ ಕೈಲಿ ಟ್ರೈಲರ್‌ ರಿಲೀಸ್‌ ಮಾಡಿಸಲು ಸಿದ್ಧತೆ ಮಾಡಿಕೊಂಡಿದೆ. ಅದರಂತೆ ತಮಿಳಿನಲ್ಲಿ ಅವನೇ ಶ್ರೀಮನ್‌ ನಾರಾಯಣ ಟ್ರೈಲರ್‌ ಅನ್ನು ಧನುಷ್‌ ರಿಲೀಸ್‌ ಮಾಡಿದ್ರೆ ತೆಲುಗಿನಲ್ಲಿ ನ್ಯಾಚುರಲ್‌ ಸ್ಟಾರ್‌ ನಾನಿ ರಿಲೀಸ್‌ ಮಾಡಲಿದ್ದಾರೆ.

ಇನ್ನು ಮಲೆಯಾಳಂನಲ್ಲಿ ರಕ್ಷಿತ್‌ ಶೆಟ್ಟಿ ಸ್ನೇಹಿತ ಮಲೆಯಾಳಂ ಸ್ಟಾರ್‌ ನಟ ನಿವಿನ್‌ ಪೌಲಿ ಟ್ರೈಲರ್‌ ಅನ್ನು ರಿಲೀಸ್‌ ಮಾಡಲಿದ್ದಾರೆ. ಇನ್ನು ಕನ್ನಡ ಮತ್ತು ಹಿಂದಿ ಟ್ರೈಲರ್‌ ಅನ್ನು ರಕ್ಷಿತ್‌ ಶೆಟ್ಟಿ ರಿಲೀಸ್‌ ಮಾಡ್ತಾ ಇದ್ದಾರೆ. ಸದ್ಯ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದ್ದು, ಐದು ಭಾಷೆಯಲ್ಲಿ ತೆರೆಗೆ ಬಾರ್ತಾ ಇರೋ ಈ ಚಿತ್ರ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ಕಡೆ ತಿರುಗಿ ನೋಡುವಂತೆ ಮಾಡುವ ಸಿನಿಮಾವಾಗಲಿದೆ ಅಂತ ಸಿನಿರಸಿಕ ಹೇಳ್ತಾ ಇದ್ದಾನೆ.

Avane Srimannarayana Trailer on Nov 28

"Hands Up" – Narayana's Weapon; More about it in the trailer! #ASNTrailerNov28Rakshit Shetty Pushkara Mallikarjunaiah Shanvi Srivastava Sachin Ravi H K Prakash Gowda Pushkar FILMS ShreeDevi Entertainers

Posted by Avane Srimannarayana on Tuesday, 26 November 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top