ನಿಮ್ಗೂ ಹೀಗ್ ಆಗಿರಬಹದು.. ಹುಷಾರಾಗಿರಿ..!

chukki talkies ashtu

ನೀವೂ ಕನಸಲ್ಲಿ ಕಂಡಿದ್ದು ನಿಜವಾಗಿದ್ಯ.. ರಾತ್ರಿ ಮಲಗಿದ್ದಾಗ ಬಿದ್ದ ಕನಸು ಎದ್ದು ನೋಡಿದಾಗಲು ಅದೇ ನಡೆದ್ರೆ.. ಇನ್ನು ನಿಮಗೆ ಬಿದ್ದ ಕನಸು ನಿಮ್ಮ ಜೊತೆಗೆ ಇದ್ದವರಿಗೂ ಬಿದ್ದಿದ್ದರೆ.. ಇಬ್ಬರಿಗೂ ಬಿದ್ದ ಕನಸು ಒಂದೇ ಆಗಿದ್ದು, ಮುಂದೆ ನಡೆಯೋದು ಒಂದೇ ಆದ್ರೆ ಹೇಗಿರುತ್ತೆ..! ಇಂತಹ ಘಟನೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ, ಆದ್ರೆ ಅಂತಹ ಘಟನೆಯ ಎಳೆಯನ್ನು ಇಟ್ಟುಕೊಂಡು ಇಲ್ಲೊಂದು ಟೀಂ ಅದ್ಭುತವಾದ ಶಾರ್ಟ್ ಫಿಲ್ಮ್ ಒಂದನ್ನು ರೆಡಿಮಾಡಿದೆ.

sushma bharadwaj kannada actress

ಈ ಕಿರುಚಿತ್ರ ನೋಡಿದ್ರೆ, ನೀವೂ ಕೂಡ ಇಂತಹ ಘಟನೆ ನಮ್ ಜೀವನದಲ್ಲಿ ಆದ್ರೆ ಹೆಂಗೆ ಅನ್ನೋದನ್ನ ನೀವೂ ಯೋಚಿಸದೇ ಇರಲಾರಿರಿ. ಚುಕ್ಕಿ ಟಾಕೀಸ್‍ನಲ್ಲಿ ಮೂಡಿ ಬಂದಿರೋ ಈ ಕಿರುಚಿತ್ರಕ್ಕೆ ಆರೂರ್ ರಾಕೇಶ್ ಡೈರೆಕ್ಷನ್ ಹೇಳಿದ್ದು, ಸುಷ್ಮಾ ಭಾರದ್ವಾಜ್ ಅವರ ನಟನೆಯಲ್ಲಿ ಮೂಡಿ ಬಂದಿದೆ.

aroor rakesh  ಆರೂರ್ ರಾಕೇಶ್

ಕೇವಲ ಹತ್ತು ನಿಮಿಷದ ಈ ಕಿರುಚಿತ್ರ ನೀವು ಕುಳಿತಿರೋ ಸೀಟ್ ತುದಿಗೆ ನಿಮ್ಮನ್ನು ಕೂರಿಸೋದು ಗ್ಯಾರಂಟಿ. ಯೂಟ್ಯೂಬ್‍ನಲ್ಲಿ ಸದ್ಯ ಸೌಂಡ್ ಮಾಡೋಕೆ ರೆಡಿಯಾಗಿರೋ ಈ `ಅಸ್ತು’ ಕಿರು ಚಿತ್ರ ದೃಶ್ಯದ ಜೊತೆಯಲ್ಲಿ ಕೊನೆಗೆ ಬರುವ ಸಾಲು ಕೂಡ ಸಖತ್ ಕ್ಯೂರ್ಯಾಸಿಟಿ ಹುಟ್ಟಿಸುತ್ತೆ. ಏನೂ ಆ ಲೈನ್ ಅನ್ನೋದನ್ನ ನೀವೂ ತಿಳಿದುಕೊಳ್ಳಬೇಕಾದ್ರೆ ಖಂಡಿತ ಈ ವಿಡಿಯೋವನ್ನ ಫುಲ್ ನೋಡ್ಲೇ ಬೇಕು. ಆಹಾ ಫುಲ್ ವಿಡಿಯೋ ನೋಡಿದ ನಂತರವೇ ಆ ಕೊನೆ ಸಾಲಿನ ಅರ್ಥ ಸಿಗೋದು ಕೂಡ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top