ಟ್ರೈನ್‌ನಲ್ಲೂ ʻಅವನೇ ಶ್ರೀಮನ್‌ ನಾರಾಯಣನʼ ಹವಾ..!

ಅವನೇ ಶ್ರೀಮನ್‌ ನಾರಾಯಣ ಸದ್ಯ ಸೆನ್ಸ್‌ಸೇಷನ್‌ ಕ್ರಿಯೇಟ್‌ ಮಾಡಿರೋ ಇಂಡಿಯನ್‌ ಸಿನಿಮಾ.. ಈಗಾಗಲೇ ಟ್ರೈಲರ್‌ ಮೂಲಕ ಮೋಡಿ ಮಾಡಿರೋ ಈ ಸಿನಿಮಾ ಇದೇ ಡಿಸೆಂಬರ್‌ 27ರಂದು ತೆರೆ ಮೇಲೆ ಬರಲು ರೆಡಿಯಾಗಿದ್ದು, ಈಗಾಗಲೇ ಚಿತ್ರದ ಬಗ್ಗೆ ಸಖತ್‌ ಟಾಕ್‌ ಕೂಡ ಶುರುವಾಗಿದೆ. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್‌ ಅಭಿನಯಿಸಿರೋ ಈ ಚಿತ್ರದ ಹ್ಯಾಂಡ್ಸಪ್‌ ಹಾಡು ಈಗಾಗಲೇ ವೈರಲ್‌ ಆಗಿದ್ದು. ಚಿತ್ರದ ಪ್ರಮೋಷನ್‌ ವರ್ಕ್‌ ಶುರುವಾಗಿದ್ದು. ಬಹುತೇಕ ಎಲ್ಲಾ ಕಡೆ ಅವನೇ ಶ್ರೀಮನ್‌ ನಾರಾಯಣ ಸಿನಿಮಾದ ಪೋಸ್ಟರ್‌ಗಳು ಕಾಣಸಿಗುತ್ತಿದ್ದು, ಈಗ ಟ್ರೈನ್‌ನಲ್ಲೂ ಅವನೇ ಶ್ರೀಮನ್‌ ನಾರಾಯಣ ಸಿನಿಮಾದ ಪೋಸ್ಟರ್‌ ರಾರಾಜಿಸೋಕೆ ಶುರುವಾಗಿದೆ. ಮೈಸೂರು -ಯಶವಂತಪುರ ಟ್ರೈನಿನಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಭೋಗಿಗಳಿಗೆ ಹಾಕುವುದರ ಮೂಲಕ ಚಿತ್ರದ ಪ್ರಮೋಷನ್‌ನಲ್ಲಿ ತೊಡಗಿಕೊಂಡಿರೋ ಚಿತ್ರತಂಡ, ನೀವೂ ಸಂಚರಿಸುವ ಅನೇಕ ಟ್ರೈನ್‌ಗಳಲ್ಲೂ ಈ ಶ್ರೀಮನ್‌ ನಾರಾಯಣ ಚಿತ್ರದ ಪೋಸ್ಟರ್‌ಗಳನ್ನು ಕಾಣಬಹುದಾಗಿದೆ.

ಐದು ಭಾಷೆಯಲ್ಲಿ ತೆರೆಕಾಣುತ್ತಿರುವ ಈ ಸಿನಿಮಾ ಬಗ್ಗೆ ಈಗಾಗಲೇ ಹೈಪ್‌ ಕ್ರಿಯೆಟ್‌ ಆಗಿದ್ದು ಯಾವ ಮಟ್ಟದಲ್ಲಿ ಚಿತ್ರ ಸೌಂಡ್‌ ಮಾಡಲಿದೆ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top