ಅವನೇ ಶ್ರೀಮನ್ನಾರಾಯಣ ತೆಲುಗು ಅವತರಣಿಕೆಗೆ ರಾಮಜೋಗಯ್ಯಶಾಸ್ತ್ರಿ ಗೀತರಚನೆ

ರಕ್ಷಿತ್ ಅವನೇ ಶ್ರೀಮನ್ನಾರಾಯಣ

ರಾಮಜೋಗಯ್ಯ ಶಾಸ್ತ್ರಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸ್ರು. ಚಿತ್ರಸಾಹಿತ್ಯಕ್ಕೆ ಜನಪ್ರಿಯರಾಗಿರೋರು. ತೆಲುಗಿನ ಯಾವುದೇ ಸ್ಟಾರ್ ಸಿನಿಮಾ ಬರಲಿ ಅದ್ರಲ್ಲಿ ಶಾಸ್ತ್ರಿಯವರ ಸಾಹಿತ್ಯದ ಸೊಬಗು ಮೇಳೈಸಿರುತ್ತೆ. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯವಿದೆ ಅಂದ್ರೆ ಆ ಹಾಡು ಗ್ಯಾರೆಂಟಿ ಸೂಪರ್ ಹಿಟ್ಟೇ.. ಅಂತ ಚಾರ್ಮ್ ಇರೋ ಗೀತ ರಚನೆಕಾರರಾದ ರಾಮಜೋಗಯ್ಯ ಶಾಸ್ತ್ರಿಯವರು ಕನ್ನಡದ ಹೆಮ್ಮೆಯ ಚಿತ್ರಗಳಾದ ಅತಿ ಹೆಚ್ಚು ಬಜೆಟ್ನ ದೇಶಾದಾದ್ಯಂತ ಸದ್ದು ಸುದ್ದಿ ಮಾಡಿದ ಕೆ.ಜಿ.ಎಫ್, ಪೈಲ್ವಾನ್ ಚಿತ್ರಗಳ ತೆಲುಗು ಅವತರಣಿಕೆಯ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ಕನ್ನಡದಲ್ಲಿ ಜನಪ್ರಿಯವಾದಂತೆ ತೆಲುಗಿನ ಈ ಚಿತ್ರದ ಹಾಡುಗಳು ಜನಪ್ರಿಯವಾಗಿದ್ವು. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ ನಾರಾಯಣ ಸಿನಿಮಾ ಕೂಡ ಪಂಚಭಾಷೆಯಲ್ಲಿ ಸಿದ್ದವಾಗ್ತಿದ್ದು, ಈ ಚಿತ್ರದ ತೆಲುಗು ವರ್ಶನ್ ಗೆ ರಾಮ ಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆಯುತ್ತಿದ್ದಾರೆ.

ಈ ಚಿತ್ರದ ಕಥಾವಸ್ತು ಹಾಗೂ ಮೇಕಿಂಗ್ ನೋಡಿ ಥ್ರಿಲ್ ಆಗಿರೋ ಅವ್ರು ತುಂಬು ಖುಷಿಯಿಂದ ಕೆಲಸ ಶುರುಮಾಡಿದ್ದಾರಂತೆ. ಈ ಕುರಿತು ಸ್ವತಃ ಶಾಸ್ತ್ರಿಗಳು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ..

ಡಿಸೆಂಬರ್ ಗೆ ಅವನೇ ಶ್ರೀಮನ್ನಾರಾಯಣ ರಿಲೀಸ್

.Avane Srimannarayana | Making

The grandeur of Avane Srimannarayana is because of his vision and his go-getter attitude; wishing our producer Pushkara Mallikarjunaiah a very happy birthday from all of us. Here is a sneak peek inside Narayana’s Amaravati! #BehindTheScenes

Posted by Avane Srimannarayana on Wednesday, September 11, 2019

ಅಂದ್ಹಾಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಇನ್ನೂ ಎಪ್ಪತ್ತು ದಿನಗಳಲ್ಲಿ ಅಂದ್ರೆ ಡಿಸೆಂಬರ್ ಗೆ ಪ್ರೇಕ್ಷಕರೆದರಿಗೆ ಬರಲಿದ್ದು, ಈ ಕುರಿತು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಿಂಟ್ ಕೊಟ್ಟಿದ್ದಾರೆ. ಸಚಿನ್ ರವಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ , ಬಾಲಾಜಿ ಮೋಹನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅಜನೀಶ್ ಲೋಕನಾಥ್ ಹಾಗೂ ಚರಣ್ ರಾಜ್ ಚಿತ್ರಕ್ಕೆ ಸಂಗೀತ ಸಂಯೋಜಿಸ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top