ಬೆಲ್ಲದಲ್ಲಿ ಇದೆ ನೂರೈವತ್ತಕ್ಕೂ ಹೆಚ್ಚು ಆರೋಗ್ಯಕಾರಿ ಅಂಶ..

ಬೆಲ್ಲ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಬೆಲ್ಲ ಅಂದಾಕ್ಷಣ ಬಾಯಲ್ಲಿ ನೀರು ಸುರಿಯೋದು ಗ್ಯಾರಂಟಿ, ಹಾಗೆ ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು.. ನೀವೂ ಹಳ್ಳಿಗಳಲ್ಲಿ ಮನೆಗೆ ಯಾರಾದರೂ ಬಂದರೆ ಅವರಿಗೆ ನೀರಿನ ಜೊತೆ ಬೆಲ್ಲವನ್ನು ಸಹ ನೀಡುತ್ತಾರೆ, ಅದಕ್ಕೆ ಕಾರಣ ಬೆಲ್ಲದ ಜೊತೆ ನೀರು ಕುಡಿದರೆ ಅದು ದಣಿವನ್ನು ಆದಷ್ಟು ಕಮ್ಮಿಗೊಳಿಸುತ್ತದೆ ಜೊತೆಗೆ ಅದನ್ನು ಇನ್ನಷ್ಟು ನೀರನ್ನು ಕುಡಿಯಲು ಮನಸ್ಸು ಕೊಡುತ್ತದೆ.. ಇಷ್ಟೇ ಅಲ್ಲದೇ ಬೆಲ್ಲದಿಂದ ಅನೇಕ ಸಮಸ್ಯೆಗಳನ್ನು ಸಹ ಬಗೆಹರಿಸಿಕೊಳ್ಳ ಬಹುದು ಅವುಗಳ ಮಾಹಿತಿಯನ್ನು ಇವತ್ತು ನಾವ್‌ ನಿಮಗೆ ತಿಳಿಸ್ತೇವೆ.

1. ಬೆಲ್ಲವನ್ನು ಪ್ರತಿ ದಿನ ನಿಯಮಿತವಾಗಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ಇದು ನಮ್ಮ ಲಿವರ್‌ನಲ್ಲಿ ಇರುವ ಬೇಡವಾದ ಅಂಶಗಳನ್ನು ಅಂದರೆ ಗಲೀಜನ್ನು ಹೊರ ಹಾಕಲು ಇದು ಸಹಕಾರಿಸುತ್ತದೆ.

2. ಊಟ ಮಾಡಿದ ಮೇಲೆ ಒಂದು ತುಂಡು ಬೆಲ್ಲವನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಅದು ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುತ್ತದೆ ಜೊತೆಗೆ ಮಲಬದ್ಧತೆಯನ್ನು ದೂರ ಮಾಡುತ್ತದೆ.

3. ಬೆಲ್ಲವನ್ನು ಪ್ರತಿದಿನ ನಿಯಮಿತವಾಗಿ ಸೇವಿಸೋ ಅಭ್ಯಾಸ ಮಾಡಿಕೊಂಡರೆ ಅದು ನಿಮ್ಮ ದೇಹದಲ್ಲಿ ರಕ್ತಹೀನತೆ ಸಮಸ್ಯೆಯನ್ನು ದೂರಮಾಡುತ್ತದೆ.

4. ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಐರನ್‌ ಅಂಶಗಳು ಇರುವುದರಿಂದ ಅದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದ ವಿಟಮಿನ್‌ ಅಂಶಗಳನ್ನು ಇದು ಒದಗಿಸುತ್ತದೆ.

5. ಪ್ರತಿದಿನ ಒಂದು ತುಂಡು ಬೆಲ್ಲವನ್ನು ಊಟ ಮಾಡಿದ ನಂತರ ಸೇವನೆ ಮಾಡುವುದರಿಂದ ಅದು ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್‌ ಅಂಶವನ್ನು ಹೆಚ್ಚಿಸುವಲ್ಲಿ ಮತ್ತು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿರುತ್ತದೆ.

6. ಬೆಲ್ಲದಲ್ಲಿ ಐರನ್‌ ಅಂಶ ಇರುವುದರಿಂದ ಅದನ್ನು ಗರ್ಭೀಣಿಯರು ತಿನ್ನುವುದರಿಂದ ಅವರ ಆರೋಗ್ಯವೂ ಉತ್ತಮವಾಗಿರುತ್ತದೆ.

ಇದಕ್ಕಾಗೆ ನಮ್ಮ ಪೂರ್ವಜರು ಆದಷ್ಟು ಬೆಲ್ಲದ ಟೀ ಮತ್ತು ಬೆಲ್ಲದ ಕಾಫಿಯನ್ನು ಸೇವನೆ ಮಾಡುತ್ತಿದ್ದು. ಆದ್ದರಿಂದ ನಿಮ್ಮ ದಿನ ನಿತ್ಯದ ಜೀವನದಲ್ಲಿ ಆಹಾರದ ಗುಣಗಳಲ್ಲಿ ಬೆಲ್ಲವನ್ನು ಸಹ ಊಟವಾದ ನಂತರ ಒಂದು ಚೂರು ಸೇವನೆ ಮಾಡೋ ಅಭ್ಯಾಸವನ್ನು ಮಾಡಿಕೊಳ್ಳಿ, ಅಲ್ಲದೇ ಈಗಿನ ಕಾಲದಲ್ಲಿ ಕಲಬೆರಕೆ ವಸ್ತುಗಳ ಸಂಖ್ಯೆ ಹೆಚ್ಚಾಗಿದ್ದು ಬೆಲ್ಲದಲ್ಲೂ ಸಹ ಕಲಬೆರಕೆ ಶುರುವಾಗಿದೆ ಹಾಗಾಗಿ ಆದಷ್ಟು ಉತ್ತಮ ಗುಣದ ಬೆಲ್ಲವನ್ನು ಸೇವನೆ ಮಾಡುವುದು ಉತ್ತಮ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top