ಈ ಮರದ ಒಂದು ಎಲೆ ನಿಮ್ಮನ್ನು ಶತಾಯುಷಿಯನ್ನಾಗಿರಿಸುತ್ತದೆ..!

ಅರಳಿ ಮರ, ಈ ಮರದಲ್ಲಿ ದೇವಾನೂ ದೇವತೆಗಳು ನೆಲೆಸಿರ್ತಾರೆ ಅನ್ನೋ ಮಾತುಗಳಿವೆ, ಇನ್ನು ಅರಳಿ ಮರವನ್ನು ಸುತ್ತಿದರೆ ನಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಅನ್ನೋದು ಪ್ರತೀತಿ, ಆದ್ರೆ ಇದು ಕೇವಲ ಪೂಜೆಗೆ ಮಾತ್ರ ಸೀಮಿತವಲ್ಲ ಇದರಲ್ಲಿ ಅತೀ ಹೆಚ್ಚು ಔಷಧಿ ಗುಣಗಳಿವೆ,ಇದು ಆಮ್ಲಜನಕವನ್ನು ಹೆಚ್ಚಾಗಿ ಹೊರ ಹಾಕುವ ಮರವಾಗಿದ್ದು, ಈ ಮರದಲ್ಲಿ ಒಂದಿಲ್ಲೊಂದು ಔಷಧಿ ಗುಣಗಳು ಇವೆ.

  1. ಅರಳಿ ಮರದ ಎಲೆಗಳು ಅಂದರೆ ಒಣ ಎಲೆ ಅಥವಾ ಎಳೆಯಾದ ಎಲೆಗಳನ್ನು ಪುಡಿಮಾಡಿ ಅದನ್ನು ಹಾಲಿನ ಜೊತೆ ಬೆರೆಸಿ ಕುದಿಸಿ ಕುಡಿಯುವುದರಿಂದ ಅಸ್ತಮ ಕಾಯಿಲೆ ಇನ್ನಿಲ್ಲದಂತೆ ದೂರವಾಗಿ ಹೋಗುತ್ತದೆ.
  2. ಅರಳಿ ಮರದ ಬೇರುಗಳನ್ನು ಚೆನ್ನಾಗಿ ಜೆಜ್ಜಿ ಅದನ್ನು ನಾವು ಹಲ್ಲು ಉಜ್ಜಲು ಸಹ ಬಳಸಿಕೊಳ್ಳಬಹುದು. ಇದು ನಮ್ಮ ಹಲ್ಲಿನ ಕಾಂತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಹಲ್ಲಿನ ವಸಡುಗಳನ್ನು ಗಟ್ಟಿಗೊಳಿಸುತ್ತದೆ.
  3. ನಿಮಗೆ ಮೂಗಿನಲ್ಲಿ ರಕ್ತ ಸೋರುವ ಸಮಸ್ಯೆಯಿದ್ದರೆ ಅರಳಿ ಮರದ ಎಲೆಯನ್ನು ಅರೆದು ಅದರ ರಸವನ್ನು ಮೂಗಿನ ಒಳಗೆ ಒಂದೆರಡು ಹನಿಗಳನ್ನು ಹಾಕುವುದರಿಂದ ಮೂಗಿನಲ್ಲಿ ರಕ್ತ ಸೋರುವುದನ್ನು ತಡೆಗಟ್ಟಬಹುದು.
  4. ಅರಳಿ ಮರದ ಎಲೆಯನ್ನು ಅರೆದು ಅದರ ರಸವನ್ನು ನೀರು ಮತ್ತು ಸಕ್ಕರೆಯನ್ನು ಮಿತವಾಗಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಕಾಮಾಲೆ ರೋಗವೂ ಗುಣ ಮುಖವಾಗುತ್ತದೆ.
  5. ಇದರ ಎಲೆಯನ್ನು ಹಾಲಿನಲ್ಲಿ ಸಕ್ಕರೆ ಜೊತೆ ಬೆರೆಸಿ ಕುಡಿಯುವುದರಿಂದ ಜ್ವರ, ಶೀತ ಜೊತೆಗೆ ಈ ಎಲೆಗಳನ್ನು ಸೇವನೆ ಮಾಡೋದ್ರಿಂದ ಸಕ್ಕರೆ ಕಾಯಿಲೆಯೂ ಗುಣ ಮುಖವಾಗುತ್ತದೆ.
  6. ಅರಳಿ ಮರದ ಒಣಗಿದ ಎಲೆಯನ್ನು ಪುಡಿಮಾಡಿ ಜೀರಿಗೆಪುಡಿ ಮತ್ತು ಬೆಲ್ಲವನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಮಲಬದ್ಧತೆ ದೂರವಾಗುತ್ತದೆ.

ಈ ರೀತಿ ಅರಳಿ ಮರ ಕೇವಲ ಬೇಡಿದ್ದನ್ನು ವರ ಕೊಡೋ ಮರವಲ್ಲ ಜೊತೆಗೆ ಅದು ನಮಗೆ ಅತೀ ಹೆಚ್ಚು ಆಮ್ಲಜನಕವನ್ನು ನೀಡೋ ಜೊತೆಯಲ್ಲಿ ಅದು ನಮಗೆ ಉತ್ತಮ ಆರೋಗ್ಯಕ್ಕಾಗಿ ಇರೋ ಔಷಧಿ ಮರವೂ ಹೌದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top