ರಾತ್ರಿ ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನಾಗುತ್ತೆ ಗೊತ್ತಾ..?

ಕನಸು ಯಾರಿಗೆ ತಾನೇ ಬೀಳಲ್ಲ ಹೇಳಿ ಪ್ರತಿಯೊಬ್ಬರು ರಾತ್ರಿ ಮಲಗುವಾಗ ಒಂದೊಳ್ಳೇ ಕನಸು ಬೀಳಲಿ ಅಂತ ಪ್ರಾರ್ಥನೆ ಮಾಡಿಕೊಂಡು ಮಲಗುತ್ತಾರೆ. ಇನ್ನು ಕನಸಿನಲ್ಲಿ ಒಳ್ಳೇ ಕನಸು, ಕೆಟ್ಟ ಕನಸು ಬೀಳುತ್ತದೆ ಅನ್ನೋ ಮಾತಿದೆ, ಅದರಲ್ಲೂ ಈ ಕೆಳಗಿನ ಕೆಲವು ಪ್ರಾಣಿಗಳು ನಿಮ್ಮ ಕನಸಿನಲ್ಲಿ ಬಿದ್ದರೆ ಏನೆಲ್ಲಾ ಆಗುತ್ತದೆ ಅನ್ನೋ ವಿಷಯ ಇವತ್ತು ನಾವ್ ಹೇಳ್ತೀವಿ ನೋಡಿ.

ನಾಯಿ
ನಾಯಿ ಕನಸಿನಲ್ಲಿ ಬಂದರೆ ನಾವು ನಮ್ಮ ಕಾಂಪಿಟೇಟರ್ ಜೊತೆ ಕಾಂಪಿಟ್ ಮಾಡಿ ಅವನ ವಿರುದ್ಧ ಗೆಲುವು ಸಾಧಿಸುತ್ತೇವೆ, ನಾಯಿ ಸಿಟ್ಟಿನಲ್ಲಿ ಇರುವ ರೀತಿ ಕಂಡರೆ ಅದು ನಮ್ಮಲ್ಲಿ ಸಂಘರ್ಷಕ್ಕೆ ಪ್ರಚೋದಿಸು ಸಂಕೇತವಂತೆ, ನಾಯಿಯ ಮರಣವಾದ ಕನಸು ಕಂಡರೆ ಒಂದೊಳ್ಳೇ ಸ್ನೇಹಿತನ ಮರಣದ ಸುದ್ದಿ ಬರುತ್ತದೆ ಅನ್ನೋದು ನಂಬಿಕೆ.

ಕುದುರೆ
ಕುದುರೆ ಕನಸು ಕಂಡರೆ ನೀವೂ ಬಲದಲ್ಲಿ ಸಧೃಡರಾಗುತ್ತೀರ ಅನ್ನೋದು ಸೂಚನೆ, ಇನ್ನು ಕಪ್ಪು ಕುದುರೆಯ ಕನಸು ಕಂಡರೆ ಹಿಂಸೆ ಮತ್ತು ದುಷ್ಟ ಶಕ್ತಿಗಳು ನಿಮ್ಮ ಜೀವನವನ್ನು ಪ್ರವೇಶ ಮಾಡುವ ಸೂಚನೆ ನೀಡುತ್ತದೆ, ಇನ್ನು ಬಿಳಿ ಕುದುರೆಯನ್ನು ಕಂಡರೆ ನಿಮಗೆ ಯಶಸ್ಸು, ಶುದ್ಧ ಮನಸ್ಸು ನಿಮ್ಮದಾಗುತ್ತದೆ ಅನ್ನೋದು ನಂಬಿಕೆ.

ಒಂಟೆ
ಕನಸಿನಲ್ಲಿ ಒಂಟೆಯನ್ನು ನಾವು ಕಂಡರೆ ಜೀವನದಲ್ಲಿ ಅತೀ ಹೆಚ್ಚು ಭಾರವನ್ನು ಅಂದರೆ ಜೀವನದ ಭಾರವನ್ನು ಹೊರುತ್ತೇವೆ ಅನ್ನೋ ಸಂಕೇತವನ್ನು ತೋರಿಸುತ್ತದೆಯಂತೆ, ಮನಸ್ಸಿನಲ್ಲಿ ಯಾವಾಗಲೂ ಆತಂಕದ ವಾತಾವರಣ ಮನೆ ಮಾಡುತ್ತದೆಯಂತೆ,

ಗೂಬೆ
ಗೂಬೆ ಕನಸಿನಲ್ಲಿ ಬಂದರೆ ಅದು ಅಪಶಕುನದ ಸಂಕೇತವಂತೆ, ಗೂಬೆ ಕನಸಿನಲ್ಲಿ ಬಂದರೆ ಆ ದಿನ ಮರಣದ ಸುದ್ದಿಯನ್ನು ನಾವು ಕೇಳಿಸಿಕೊಳ್ಳುತ್ತೇವೆ, ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆಯಂತೆ.

ಮೊಸಳೆ
ಇನ್ನು ನಿಮ್ಮ ಕನಸಿನಲ್ಲಿ ಮೊಸಳೆ ಬಂತೆಂದರೆ ನಮ್ಮ ಹತ್ತಿರದವರೆ ನಮಗೆ ಮೋಸ ಮಾಡುವ ಸೂಚನೆಯನ್ನು ಅದು ನೀಡುತ್ತದೆಯಂತೆ, ವ್ಯಾಪಾರದಲ್ಲಿ ನಷ್ಟವನ್ನು ಉಂಟುಮಾಡುತ್ತದೆಯಂತೆ.

ಜಿಂಕೆ
ನಿಮ್ಮ ಕನಸಿನಲ್ಲಿ ಏನಾದ್ರೂ ಜಿಂಕೆ ಬಂದರೆ ನೀವೂ ಉನ್ನತ ಸ್ಥಾನಕ್ಕೆ ಏರುತ್ತೀರಿ ಅನ್ನೋದು ನಂಬಿಕೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ, ಇನ್ನು ಜಿಂಕೆ ಸತ್ತ ಅವಸ್ಥೆಯಲ್ಲಿ ಕನಸು ಕಂಡ ಪ್ರೀತಿ ಪ್ರೇಮದಲ್ಲಿ ವೈಫಲ್ಯ ಕಾಣ್ತೀವಿ ಅನ್ನೋದು ನಂಬಿಕೆ.

ಬೆಕ್ಕು
ಇನ್ನು ಬೆಕ್ಕು ಅಡ್ಡ ಹೋದ್ರೆನೆ ನಾವು ಒಂದು ಕ್ಷಣಕ್ಕಾದರೂ ಯಾವುದಾದರು ಕೆಲಸಕ್ಕೆ ಹೋಗ್ತಾ ಇದ್ರೆ ಅಲ್ಲೇ ನಿಂತು ಆ ನಂತರ ಮುಂದುವರೆಯುತ್ತೇವೆ. ಇನ್ನು ಬೆಕ್ಕು ಕನಸಿನಲ್ಲಿ ಬಂದ್ರೆ ಅದು ಸಹ ಒಂದು ಕೆಡುಕಂತೆ, ಅದರಲ್ಲೂ ಬಿಳಿ ಬೆಕ್ಕನ್ನು ಕನಸಿನಲ್ಲಿ ಕಂಡರೆ ಕಷ್ಟಗಳು ಹೆಚ್ಚಾಗುತ್ತವಂತೆ, ಕರಿ ಬೆಕ್ಕನ್ನು ಕನಸಿನಲ್ಲಿ ಕಂಡರೆ ನಾವು ನಮ್ಮ ಸಾಮರ್ಥ್ಯವನ್ನು ತೋರಿಸಲು ಸಹ ಭಯ ಪಡುತ್ತೇವೆ ಅನ್ನುತ್ತಾರೆ.

ಈ ರೀತಿ ಪ್ರತಿಯೊಂದು ಪ್ರಾಣಿಗಳ ಕನಸು ಕಂಡರೆ ಅದಕ್ಕೆ ಈ ರೀತಿಯ ಅರ್ಥಗಳು ಇರುತ್ತವೆ ಅನ್ನೋದು ಅನಾದಿಕಾಲದಿಂದಲ್ಲೂ ಇರುವ ನಂಬಿಕೆ ಅಂತಾನೇ ಹೇಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top