ಆನೇಕಲ್ ತಾಲ್ಲೂಕಿನ ದೊಡ್ಡಹಾಗಡೆಯಲ್ಲಿ ಮತ್ತೆ ಗಜಪಡೆಯ ಗುಂಪು

anekal elephant ಆನೇಕಲ್ ತಾಲ್ಲೂಕಿನ ದೊಡ್ಡಹಾಗಡೆಯಲ್ಲಿ ಮತ್ತೆ ಗಜಪಡೆಯ ಗುಂಪು

ಕಳೆದೊಂದು ವಾರದಿಂದ ಆನೇಕಲ್ ನಲ್ಲಿ ನಾಪತ್ತೆಯಾಗಿದ್ದ ಕಾಡಾನೆಗಳ ಗುಂಪು ಮತ್ತೆ ಪ್ರತ್ಯಕ್ಷ್ಯವಾಗಿವೆ. ಆನೇಕಲ್ ತಾಲ್ಲೂಕಿನ ದೊಡ್ಡಹಾಗಡೆಯಲ್ಲಿ ಮತ್ತೆ ಗಜಪಡೆಯ ಗುಂಪು ಕಾಣಿಸಿಕೊಂಡಿದೆ, ಕಳೆದ ಒಂದು ವಾರದಿಂದ ಕಾಡಾನೆಗಳ ನಾಪತ್ತೆಯಿಂದ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಮತ್ತೆ ಕಾಡಾನೆಗಳ ಪ್ರತ್ಯಕ್ಷ್ಯದಿಂದ ಆತಂಕ ಶುರುವಾಗಿದೆ. ಕಾಡಿನಿಂದ ಗ್ರಾಮದ ನೀಲಿಗಿರಿ‌ ತೋಪಿನಲ್ಲಿ‌ 3 ಕಾಡಾನೆಗಳು ಬೀಡು ಬಿಟ್ಟಿದ್ದು, ಆನೆಗಳನ್ನು ನೋಡಲು ಇಡೀ ಊರಿನ ಜನರೇ ತೋಪಿನ ಬಳಿ ಠಿಕಾಣಿ ಹೂಡಿದ್ದಾರೆ. ಆನೆಗಳು ಮತ್ತೆ ನಾಡಿಗೆ ಬಂದಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top