ಸ್ಯಾಂಡಲ್ವುಡ್ ನಲ್ಲಿ ಅಂದವಾಗಿ ಹಿಟ್ ಆಗ್ತಿದೆ, ಅಂದವಾದ ಚಿತ್ರ..!

ಸ್ಯಾಂಡಲ್ವುಡ್ ನಲ್ಲಿ ಅಂದವಾದ ಸಿನಿಮಾ ಒಂದು ಸೂಪರ್ ಆಗಿ ಹಿಟ್ ಲಿಸ್ಟ್ ಗೆ ಸೇರ್ತಾ ಇದೆ, ಕಳೆದ ವಾರ ರಿಲೀಸ್ ಆದ ಹೊಸಬರ ‘ಅಂದವಾದ’ ಸಿನಿಮಾ ಮನಸ್ಸಿನಲ್ಲಿ ಅಂದವಾಗಿ ಮನಸ್ಸಿನಲ್ಲಿ ಬೇರೂರುತ್ತಿದೆ.

ಹೌದು ತಾಜಾ ಅನ್ನಿಸೋ ಕಥೆ… ಫ್ರೆಶ್ ಫ್ರೆಶ್ ನಿರೂಪಣೆ.. ಕಣ್ಮನ ತಣಿಸೋ ಲೋಕೇಶನ್ಸ್, ಕಿವಿಗೆ ಇಂಪೆನ್ನಿಸೋ ಮ್ಯೂಸಿಕ್ಕು, ಮನಮುಟ್ಟೋ ಮುದ್ದಾದ ಸ್ಟಾರ್ ಕಾಸ್ಟ್ ಇವೆಲ್ಲವೂ ಹದವಾಗಿ ಬೆರೆತು, ಭಾವುಕ, ಪ್ರೇರಕ, ಸಂಮೋಹಕ ಹಾಸ್ಯದ ಜೊತೆಗೆ ಲೇಪವಾಗಿ, ಸಸ್ಪೆನ್ಸ್ ಜೊತೆಗೆ ಕೊನೆಯಾಗೋ ಕಥೆ ಸೋತ ಉದಾಹರಣೆ ಉದ್ಯಮದಲ್ಲೇ ಇಲ್ಲ. ಹಾಗೇ ಸೋಲದೇ.. ಸೂಪರ್ ಹಿಟ್ ಆಗಿ ಸಕ್ಸಸ್ ಫುಲ್ಲಾಗಿ ಮುನ್ನುಗ್ತಿರೋ ಸಿನಿಮಾ ಅಂದವಾದ. ಅಂದವಾದ ಅಪ್ಪಟ ಹೊಸಬರ ತಂಡ ತುಂಬು ಸಿನಿಮೋತ್ಸಾಹದಲ್ಲಿ ಮಾಡಿರೋ ಸಿನಿಮಾ. ಎಲ್ಲಾ ಆಂಗಲ್ ನಿಂದ್ಲೂ ಜಾಗ್ರತೆ ವಹಿಸಿ, ಕನ್ನಡಿಗರ ಮನ ಗೆಲ್ಲಲೇ ಬೇಕು, ಚೊಚ್ಚಲ ಪ್ರಯತ್ನದಲ್ಲೇ ನಿಲ್ಲಲೇ ಬೇಕು ಅಂತ ಶ್ರಮಹಾಕಿರೋ ಸಿನಿಮಾ. ಸೈಲೆಂಟಾಗಿ ಪ್ರೇಕ್ಷಕರೆದುರಿಗೆ ಬಂದಿರೋ ಈ ಸಿನಿಮಾ, ಸೂಪರ್ ಹಿಟ್ ಆಗಿದೆ.. ಹರೆಯದ ಮನಸುಗಳ ಆಕರ್ಷಿಸಿದೆ. ಕಳೆದ ಶುಕ್ರವಾರ ಪ್ರೇಕ್ಷಕರೆದುರಿಗೆ ಬಂದಿರೋ ಅಂದವಾಗ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನ ಥಿಯೇಟರ್ ಗೆ ಕರೆಸಿಕೊಳ್ತಿದೆ.


ಅಂದವಾದ ಅಪ್ಪಟ ಹಸಿರು, ಮಳೆ ಹಿನ್ನೆಲೆಯಲ್ಲಿ ಚಿತ್ರಿಸಿರೋ ಮುದ್ದಾದ ಪ್ರೇಮಕಥೆ. ಜೈ ಅನ್ನೋ ಹ್ಯಾಡ್ಸಂ ಹುಡುಗ ಮತ್ತು ಅನುಷ್ ರಂಗನಾಥ್ ಅನ್ನೋ ಬ್ಯೂಟಿಫುಲ್ ಹುಡುಗಿಯ ಕಾಂಬೋ ಈ ಸಿನಿಮಾಗೆ ದೊಡ್ಡ ಪ್ಲಸ್ ಆಗಿದೆ. ಸುಳ್ಳುಗಳನ್ನ ಹೇಳಿಕೊಂಡು, ಪ್ರೀತಿಸೋ ಹುಡುಗಿಯೊಬ್ಬಳ ಸ್ಟೋರಿಯಿದು. ಆ ಸುಳ್ಳುಗಳೆಲ್ಲಾ ನಾಯಕನಿಗೆ ಗೊತ್ತಾದಾಗ ಏನಾಗುತ್ತೆ ಅನ್ನೋದೇ ಈ ಸಿನಿಮಾದ ಒನ್ ಲೈನ್ ಸ್ಟೋರಿ.
ಇಂತಹ ಸ್ಟೋರಿ ಲೈನ್ ಇಟ್ಟುಕೊಂಡು ಕ್ವಾಲಿಟಿ ತಂತ್ರಜ್ಞರ ತಂಡವನ್ನ ಕಟ್ಟಿಕೊಂಡು, ಮಾಡಿರೋ ಈ ಸಿನಿಮಾ ಕನ್ನಡ ಸಿನಿಪ್ರಿಯರಿಗೆ ಫ್ರೆಶ್ ಫೀಲ್ ಕೊಡ್ತಿದೆ. ಅಪ್ಪಟ ಸ್ವಮೇಕ್ ಆಗಿರೋ ಈ ಸಿನಿಮಾದಲ್ಲಿ ಸೀನ್ ಟು ಸೀನ್ ಫ್ರೆಶ್ ನೆಸ್ ಎದ್ದು ಕಾಣ್ತಿದೆ. ವಿಶೇಷ ಅಂದ್ರೆ, ದೀಪಾವಳಿ ಪ್ರಯುಕ್ತ ರಿಲೀಸ್ ಆಗಿರೋ ಅಂದವಾದ ಸಿನಿಮಾ ಹೊಸಬರದ್ದೇ ಆದ್ರೂ ಐಎಮ್ ಡಿಬಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಪರಭಾಷಾ ದೊಡ್ಡ ಸಿನಿಮಾಗಳ ಹಾವಳಿಯ ನಡುವೆಯ ಕನ್ನಡದ ಈ ಸಿನಿಮಾ ಗಮನ ಸೆಳೆತಿರೋದು, ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಹೊಸ ಚೈತನ್ಯ ತಂದೊಡ್ಡಿದೆ. ಚೊಚ್ಚಲ ನಿರ್ದೇಶನ ಮಾಡಿರೋ ಚಲ, ಅಂದವಾದ ಮೂಲಕ ಮೊದಲ ಪ್ರಯತ್ನದಲ್ಲೇ ದೊಡ್ಡದಾಗಿ ಗಮನ ಸೆಳೆದಿದ್ದಾರೆ.

ಅಂದವಾದ ಸಿನಿಮಾಗೆ ಕನ್ನಡ ಸಿನಿಪ್ರಿಯರು ಇದೇ ಪ್ರೀತಿ ವಿಶ್ವಾಸ ಪ್ರೋತ್ಸಾಹವನ್ನ ಮುಂದುವರೆಸಿದರೆ. ಖಂಡಿತ ಇದು ಮತ್ತೊಂದು ಮುಂಗಾರು ಮಳೆಯಾಗೋದ್ರಲ್ಲಿ ದೂಸ್ರಾ ಮಾತೇ ಇಲ್ಲ. ಹೌದು, ಮುಂಗಾರು ಮಳೆ ಸಿನಿಮಾ ಕೂಡ ಇದೇ ರೀತಿ ಮೊದಲವಾರ ಒಳ್ಳೆಯ ಪ್ರತಿಕ್ರಿಯೆ ಗಳಿಸಿತ್ತಾದ್ರೂ, ಜನ ಥಿಯೇಟರ್ಗೆ ನುಗ್ಗಿ ಬಂದಿದ್ದು, ಮೊದಲ ಮೂರು ದಿನಗಳ ನಂತ್ರ.ಅದ್ರಲ್ಲೂ ಎರಡನೇ ವಾರದಿಂದ ಮುಂಗಾರು ಮಳೆ ಮಾಡಿದ್ದು ರಿಯಲ್ ಲವ್ ಮ್ಯಾಜಿಕ್, ಮ್ಯೂಸಿಕ್ ಮ್ಯಾಜಿಕ್ , ಮಳೆ ಮ್ಯಾಜಿಕ್ ಇಡೀ ಕರ್ನಾಟಕವನ್ನೇ ಆ ಗುಂಗಲ್ಲಿ ಮುಳುಗಿಸಿ ಬಿಡ್ತು..

ಇದೀಗ ಅಂದವಾದ ಒಂದು ರೀತಿ ಅದೇ ಹಾದಿಯಲ್ಲಿದೆ. ಈ ಚಿತ್ರಕ್ಕೆ ಆ ಚಿತ್ರಕ್ಕೆ ಸಿಕ್ಕಷ್ಟು ಪ್ರೋತ್ಸಾಹ ಸಿಕ್ಕಿ ಬಿಟ್ರೆ, ಖಂಡಿತವಾಗಿಯೂ ಈ ಸಿನಿಮಾ ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಂದು ಎವರ್ ಗ್ರೀನ್ ಲವ್ ಸಿನಿಮಾ ಆಗಿ ಉಳಿದುಕೊಳ್ಳುತ್ತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top