ಅಕ್ಟೋಬರ್ 25ರಂದು ಥಿಯೇಟರ್ ಗೆ ಬರ್ತಾ ಇದೆ `ಅಂದವಾದ’ ಚಿತ್ರ

ಪ್ರೇಮಿಗಳಿಗಾಗಿ ಬರ್ತಿದೆ ಪರಿಶುದ್ಧ ಪ್ರೀತಿಯ ಕಥೆ ಅಂದವಾದ

ಅಕ್ಟೋಬರ್ 25ರಂದು ಎಲ್ಲಾ ಪ್ರೇಮಿಗಳಿಗೂ ಸ್ಯಾಂಡಲ್‍ವುಡ್‍ನಿಂದ ಒಂದೊಳ್ಳೇ ಸಿನಿಮಾ ಬರ್ತಾ ಇದೆ, ದೀಪಾವಳಿ ಹಬ್ಬದಂದು ರೊಮ್ಯಾಂಟಿಕ್ ಮೂಡ್‍ನಲ್ಲಿ ಥಿಯೇಟರ್ ಗೆ ಹೋಗಬಹುದು, ಈಗಾಗ್ಲೇ ಟ್ರೈಲರ್ ಮೂಲಕ ಸುದ್ದಿ ಮಾಡಿರೋ ಅಂದವಾದ ಚಿತ್ರ ಒಂದೊಳ್ಳೇ ರೊಮ್ಯಾಂಟಿಕ್ ಫೀಲ್ ಕೊಡೋ ಸಿನಿಮಾ, ಈಗಾಗ್ಲೇ ಚಿತ್ರದ ಮೆಲೋಡಿ ಹಾಡುಗಳು ಪ್ರೇಮಿಗಳ ಮನಸ್ಸನ್ನು ಕದ್ದಿದ್ದು.

ಇದೇ 25ರಂದು ಚಿತ್ರಮಂದಿರದಲ್ಲಿ ಸಿನಿರಸಿಕರ ಮನಸ್ಸು ಗೆಲ್ಲಲು ಬರ್ತಾ ಇದೆ.ಇನ್ನು ಅಂದವಾದ ಚಿತ್ರದಲ್ಲಿ ಲವ್ ಫೀಲ್ ಜೊತೆ ಸುಂದರವಾದ ಸ್ಥಳಗಳನ್ನು ಕಣ್ ಮುಂದೆ ತರೋ ಪ್ರಯತ್ನವೂ ಆಗಿದೆ, ಈಗಾಗ್ಲೇ ತನ್ನ ಮೆಲೋಡಿ ಟ್ಯೂನ್ ಮೂಲಕ ಸಿನಿರಸಿಕನಿಗೆ ಮುದ ನೀಡಿದ್ದಾರೆ ಮ್ಯೂಸಿಕ್ ಡೈರೆಕ್ಟರ್.

ಹೊಸಬರೆ ಸೇರಿ ಮಾಡಿರೋ ಅಂದವಾದ ಸಿನಿಮಾ ಗೋಲ್ಡನ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ, ಚಿತ್ರಕ್ಕೆ ಮಧುಶ್ರೀ ಬಂಡವಾಳ ಹೂಡಿದ್ದು, ಹರೀಶ್ ಎನ್ ಸೊಂಡೇಕೊಪ್ಪ ಛಾಯಾಗ್ರಹಣ ಮಾಡಿದ್ದಾರೆ. ಚಲ ಅನ್ನೋ ಪ್ರತಿಭೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇನ್ನು ವಿಕ್ರಮ್ ವರ್ಮನ್ ಸಂಗೀತ ನೀಡಿದ್ದು ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ಮ್ಯೂಸಿಕ್ ಮಾಂತ್ರಿಕ ಗುರುಕಿರಣ್ ನೀಡಿದ್ದಾರೆ. ಒಟ್ಟಿನಲ್ಲಿ ಟ್ರೈಲರ್ ಮೂಲಕ ಭರವಸೆ ಮೂಡಿಸಿರೋ ಅಂದವಾದ ಸಿನಿಮಾ 25ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡ್ತಾ ಇದ್ದು ಸಿನಿರಸಿಕರನ್ನು ಮೋಡಿಮಾಡೋದ್ರಲ್ಲಿ ಅನುಮಾನವೇ ಇಲ್ಲ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top