ಆ್ಯಂಕರ್ ಅನುಶ್ರೀ ಮೊದಲ ಸಂಬಳ ಎಷ್ಟು ಗೊತ್ತಾ..?

ಕಿರುತೆರೆ ಮತ್ತು ಖಾಸಗಿ ಕಾರ್ಯಕ್ರಮಗಳ ನಂಬರ್ 1 ಆಂಕರ್ ಅಂದರೆ ಅದು ಮುದ್ದು ಮೊಗದ ಅನುಶ್ರೀ, ಆಂಕರಿಗ್ ಮಾಡಲು ನಿಂತರೆ ಪಟಪಟನೆ ಮಾತನಾಡುವ ನಗುವಿನ ಮೂಲಕ ಸ್ಫೂರ್ತಿ ತುಂಬುವ ಆಂಕರಿಂಗ್‍ನಲ್ಲಿ ಈ ಮಟ್ಟಕ್ಕೆ ಏರಲು ಸಾಕಷ್ಟು ಶ್ರಮವಹಿಸಿದ್ದಾರೆ.ಇನ್ನು ಈ ಮಟ್ಟಕ್ಕೆ ಏರಲು ಪಟ್ಟ ಕಷ್ಟಗಳೆಷ್ಟು ಅನ್ನೋದನ್ನು ತಮ್ಮ ಬದುಕಿನ ಕಹಿ ನೆನಪಿನ ನೋವನ್ನು ತೆರೆದಿಟ್ಟಿದ್ದಾರೆ.

ಇತ್ತಿಚೆಗೆ ಜೀ ಕನ್ನಡದ `ಜೀನ್ಸ್’ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅನುಶ್ರೀ, ಕಾರ್ಯಕ್ರಮದಲ್ಲಿ ಆಟದ ವೇಳೆ ತಾವು ಮೊದಲು ಆಂಕರ್ ಆಗಿ ಪಡೆದ ಮೊದಲ ಸಂಭಾವನೆ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಮಂಗಳೂರಿನಿಂದ ಬೆಂಗಳೂರಿಗೆ ಬಂದಾಗ ಅನುಭವಿಸಿದ ನೋವುಗಳನ್ನು ಬಿಚ್ಚಿಟ್ಟಿದ್ದಾರೆ.

ನಾನು ಈ ಮಟ್ಟದಲ್ಲಿ ಇದ್ದೇನೆ ಎಂದರೆ ಅದಕ್ಕೆ ನನ್ನ ಅಮ್ಮನೇ ಕಾರಣ, ಅವರಿಗೆ ನಾನು ಥ್ಯಾಂಕ್ಸ್ ಹೇಳಲೇ ಬೇಕು. ಅವರೇ ನನಗೆ ಸ್ಫೂರ್ತಿ , ನಮ್ಮನ್ನು ಅಪ್ಪ ಬಿಟ್ಟುಹೋದಾಗ ಮಾನಸಿಕವಾಗಿ ಅಮ್ಮ ಗಟ್ಟಿಯಾಗಿದ್ದು ನಮ್ಮನ್ನು ಬೆಳೆಸಿದ್ರು, ಅವರು ಆಗ ಧೈರ್ಯವಾಗಿ ನಿಂತಿದ್ದರಿಂದಾಗಿ, ಇಂದು ಸಹ ನಾನು ಧೈರ್ಯವಾಗಿ ಬೆಳೆಯಲು ಕಾರಣವಾಯಿತು.

ಇನ್ನು ಕಾರ್ಯಕ್ರಮದ ವೇಳೆ ಅನುಶ್ರೀ ಅವರಿಗೆ ಕಾರ್ಯಕ್ರಮದಲ್ಲಿ ನೀಡಿದ್ದ ಲಕೋಟೆಯಲ್ಲಿ 250 ರೂಪಾಯಿ ಇದ್ದನ್ನು ನೋಡಿ ಅನುಶ್ರೀ ಭಾವುಕರಾದರು, ಅವರು ತಾವು ಮೊದಲ ಬಾರಿಗೆ ಅವರ ಕೆಲಸಕ್ಕೆ ಪಡೆದ ಸಂಬಳ 250 ರೂಪಾಯಿ ಆಗಿತ್ತು, `ಇದು ನನ್ನ ಮೊದಲ ಪೇಮೆಂಟ್ ಎಂದು ಭಾವುಕರಾದರು.

ಮಂಗಳೂರಿನಲ್ಲಿ ಖಾಸಗಿ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ನಾನು ಬೆಂಗಳೂರಿಗೆ ಬಂದಾಗ , ನಿನಗೆ ಕಾರ್ಯಕ್ರಮದಲ್ಲಿ ನಿರೂಪಣೆ ಕೆಲಸ ಇರುತ್ತದೆ. 250 ರೂಪಾಯಿ ಇರುತ್ತದೆ ಎಂದು ಹೇಳಿದ್ರು, ನಾನು ಗಂಟೆಗೆ ಅಂದು ಕೊಂಡಿದ್ದೆ, ಆದ್ರೆ ಅದು ಒಂದು ಎಪಿಸೋಡ್‍ಗೆ ಎಂದು ಹೇಳಿದ್ರು, ಆದರೆ ಅಲ್ಲಿ ಏಳೆಂಟು ಜನ ಆಂಕರ್ ಇದ್ದರು ನಾನೇ ಲೇಟೆಸ್ಟ್ ಸೇರ್ಪಡೆ ಆಗಿದ್ದೆ, ನನಗೆ ಅಬ್ಬಬ್ಬಾ ಎಂದರು ತಿಂಗಳಿಗೆ ನಾಲ್ಕು ಎಪಿಸೋಡ್ ಸಿಗುತ್ತಿತ್ತು, ಹಾಗಾಗಿ ನಾನು ತಿಂಗಳಿಗೆ 250 ರೂಪಾಯಿ ಸಂಬಳ ಪಡೆದ್ದದು ಈಗ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ರು. ಆದ್ರೆ ಈಗ ಎಷ್ಟೇ ಕಾರ್ಯಕ್ರಮಗಳು ಇದ್ದರು ಎಷ್ಟೇ ಕ್ಯಾಶ್ ಪಡೆಯಬಹುದು, ಆದ್ರೆ 250 ರೂಪಾಯಿ ಕೊಟ್ಟ ಸುಖ ಲಕ್ಷ ದುಡಿದರೂ ಸಿಗೋದಿಲ್ಲ, ಆಗ ಸಿಗುತ್ತಿದ್ದ ನೆಮ್ಮದಿ ಈಗ ಸಿಗುವುದಿಲ್ಲ ಎಂದು ಹೇಳಿದ್ರು.

ಇನ್ನು ಕಾರ್ಯಕ್ರಮದಲ್ಲಿ ನೀವೂ ಎಷ್ಟೇ ದುಡಿದರು ಏನೇ ಆಗಿದ್ದರು, ನಿಮ್ಮ ಬಳಿ ಇರುವವರೆಗೂ ಹತ್ತು ಜನರ ಜೊತೆ ಕುಳಿತು ತಿನ್ನಿ ಅದರಿಂದ ಸಿಗುವ ಖುಷಿಯೇ ಬೇರೆ, ಇಂದು ಇರುತ್ತೇವೆ ನಾಳೆ ಇರುತ್ತೇವೋ ಇಲ್ಲವೋ ನಂಬಿಕೆ ಇಲ್ಲ.. ಎಲ್ಲರೂ ಒಟ್ಟಿಗಿ ಇರಬೇಕು ಎಂದು ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top