ಪ್ರಪಂಚದಲ್ಲಿ ಚಿತ್ರವಿಚಿತ್ರ ಘಟನೆಗಳು ನಡೀತಾನೇ ಇರ್ತಾವೆ,ಕೆಲವೊಂದು ಘಟನೆಗಳು ಮನಸ್ಸಿಗೆ ಖುಷಿಯನ್ನು ಕೊಟ್ರೆ,ಇನ್ನು ಕೆಲವು ಘಟನೆಗಳು ಬೇಸರವನ್ನು ತರಿಸುತ್ತವೆ. ಇನ್ನು ಇಂತಹ ಘಟನೆಗಳು ನಡೀತಾವಾ ಅನ್ನೋ ಆಶ್ಚರ್ಯ ಕೂಡ ಆಗ್ತಾವೆ, ಅಂತಹದ್ದೇ ಒಂದು ವಿಚಿತ್ರ ಮತ್ತು ಆಶ್ಚರ್ಯ ಸೃಷ್ಟಿಸೋ ಘಟನೆಯೊಂದು ರಷ್ಯಾದಲ್ಲಿ ನಡೆದಿದೆ, ಈ ವಿಚಿತ್ರ ಘಟನೆಯನ್ನು ನೀವೂ ಕೇಳಿದ್ರು ಆಶ್ಚರ್ಯ ಪಡ್ತೀರಾ. ಹೌದು ರಷ್ಯಾದ ಒಬ್ಬ ಪ್ರಭಾವಿ ಮಹಿಳೆ ತನ್ನ ಗಂಡನಿಗೆ ಡಿವೋರ್ಸ್ ಕೊಟ್ಟು 20 ವರ್ಷದ ಮಗನನ್ನು ಮದುವೆಯಾಗಿರೋ ಚಿತ್ರ-ವಿಚಿತ್ರ ಘಟನೆಯೊಂದು ಸುದ್ದಿಯಾಗಿದೆ.
ರಷ್ಯಾದ ಮರಿನಾ ಬಲ್ಮಶೆವಾ ಎಂಬಾಕೆ, ಅಲೆಕ್ಸಿ ಅನ್ನುವವರನ್ನು 2007ರಲ್ಲಿ ವಿವಾಹವಾಗಿದ್ದಳು , ಇನ್ನು ಅಲೆಕ್ಸಿಗೆ ಮರಿನಾ ಎರಡನೇ ಹೆಂಡತಿಯಾಗಿದ್ದು, ಈ ಮೊದಲು ಅಲೆಕ್ಸಿಗೆ ಮೊದಲ ಹೆಂಡತಿಯಿಂದ ವಿಚ್ಚೇದನ ಕೂಡ ಆಗಿತ್ತು, ಆದ್ರೆ ಅಲೆಕ್ಸಿ ಮರಿನಾ ಅನ್ನು ಮದುವೆಯಾಗುವ ವೇಳೆ ಮೊದಲ ಪತ್ನಿಯ ಮಗು ಒಂದು ಅಲೆಕ್ಸಿಗೆ ಇದ್ದು ಆತ 7 ವರ್ಷದವನಾಗಿದ್ದ, ಇನ್ನು ಮರಿನಾ ಆ ಹುಡುಗನನ್ನು ತನ್ನ ತಾಯಿಯ ರೀತಿ ಸಾಕಿ ಸಲಹಿದ್ದಳು, ಆದ್ರೀಗ ಅದೇ ಹುಡುಗನಿಗೆ 20 ವರ್ಷ ವಯಸ್ಸಾಗಿದ್ದು, ತನ್ನ ಗಂಡ ಅಲೆಕ್ಸಿಗೆ ಮರಿನಾ ಡಿವೋರ್ಸ್ ನೀಡಿ ಮಲಮಗನನ್ನೇ ಮದುವೆಯಾಗಿದ್ದಾಳೆ. 20 ವರ್ಷದ ಮಗನನ್ನು 35 ವರ್ಷದ ಮರಿನಾ ವಿವಾಹವಾಗಿದ್ದು, ಕಳೆದ ವಾರ ಇಬ್ಬರು ರಿಜಿಸ್ಟರ್ ಆಫಿಸ್ನಲ್ಲಿ ಮದುವೆಯಾಗಿರೋ ವಿಡಿಯೋವನ್ನು ಮರಿನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಇನ್ನು ನಾವಿಬ್ಬರು ಮೊದಲನೆ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಸಹ ಮರಿನಾ ಬಹಿರಂಗಪಡಿಸಿಕೊಂಡಿದ್ದಾಳೆ.
ಇನ್ನು ಒಂದು ರೆಸ್ಟೋರೆಂಟ್ನಲ್ಲಿ ಮದುವೆ ಕಾರ್ಯಕ್ರಮದ ಪಾರ್ಟಿಯನ್ನು ಏರ್ಪಡಿಸಲಾಗಿತ್ತು, ಅನೇಕ ಗಣ್ಯರು ಈ ಪಾರ್ಟಿಗೆ ಆಗಮಿಸಿದ್ರು ಎಲ್ಲರೂ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ರು ಎಂದು ಹೇಲಿಕೊಂಡಿದ್ದಾರೆ.ಇನ್ನು ನಾವಿಬ್ಬರು ಮದುವೆಯಾಗಿರುವ ವಿಚಾರದ ಬಗ್ಗೆ ಅಲೆಕ್ಸಿ ಬಳಿ ಹೇಳಿಕೊಂಡಿಲ್ಲ, ನಾವಿಬ್ಬರು ಮದುವೆಯಾಗಿರುವುದನ್ನು ಆತ ಇಷ್ಟಪಡುವುದಿಲ್ಲ ಎಂದು ಮರಿನಾ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಮರಿನಾ ಮದುವೆಯಾಗಿರೊ ಹುಡುಗನ ಹೆಸರು ವ್ಲಾಡಿಮಿರ್ ಆಗಿದ್ದು, ಈತ 7ವರ್ಷವಿದ್ದಾಗ ಮರಿನಾ ತೆಗೆಸಿಕೊಂಡಿದ್ದ ಫೋಟೋ ಮತ್ತು ಈಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದು. ನಾವಿಬ್ಬರು ಸಂತೋಷವಾಗಿ ಜೀವನವನ್ನು ನಡೆಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಇನ್ಸ್ಟಾಗ್ರಾಂನಲ್ಲಿ ಮರಿನಾ ಈ ಪೋಸ್ಟ್ ಹಾಕುತ್ತಿದ್ದಂತೆ, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ತಾಯಿ ಸ್ಥಾನದಲ್ಲಿ ಆತನನ್ನು ಬೆಳೆಸಿದ್ದು, ಈಗ ಆತನನನ್ನೆ ಮದುವೆಯಾಗಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.