ವಿಕೆಟ್ ಗೆ ಬಾಲ್ ತಾಗದೇ ರನೌಟ್ ಆದ ಅಮಿತ್ ಮಿಶ್ರಾ..!

mishra run out

ನಿನ್ನೆ ನಡೆದ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ‌ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ರೋಚಕ ತಿರುವು ಕಂಡಿತ್ತು. ಗೆಲುವು ನಮ್ಮದೇ ಅಂತ ಖುಷಿಯಲ್ಲಿದ್ದ ಎಸ್.ಆರ್.ಹೆಚ್ ತಂಡಕ್ಕೆ ರಿಶಬ್ ಪಂಥ್ ವಿಲನ್ ಆಗಿ‌ ಪರಿಣಮಿಸಿದ್ರು. ಆದ್ರೆ 49 ರನ್ ಗಳಿಸಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಇವರ ನಂತರ ಬಂದ ಆಟಗಾರರೂ ಕೂಡ ಪೆವಿಲಿಯನ್ ಪರೇಡ್ ನಡೆಸಿದ್ರು. ಆದ್ರೆ ಈ ಪಂದ್ಯದಲ್ಲಿ ಒಂದು ಅಚ್ಚರಿಯ ರನೌಟ್ ಆಗಿದ್ದು ಈಗ ಹೆಚ್ಚು ಸುದ್ದಿಯಾಗ್ತಿದೆ. ಅದೂ ಕೂಡ ವಿಕೆಟ್ ಗೆ ಬಾಲ್ ತಾಗದೇ ರನೌಟ್ ಆಗಿದ್ದು..!

ಹೌದು.. 19 ನೇ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆ ಬೇಕಾಗಿದ್ದದ್ದು ಕೇವಲ 5 ರನ್ ಗಳು ಮಾತ್ರ. ಆದ್ರೆ ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದದ್ದು ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ವೇಗಿ‌ ಪೌಲ್. 19.4 ನೇ ಓವರ್ ನಲ್ಲಿ 3 ಬಾಲ್‍ಗೆ 2 ರನ್ ಬೇಕಿದ್ದಾಗ ಸ್ಟ್ರೈಕ್ ನಲ್ಲಿದ್ದ ಮಿಶ್ರಾ ಹೇಗಾದ್ರೂ ಮಾಡಿ ಒಂದು ರನ್ ಕಲೆಹಾಕಲು ಪ್ಲಾನ್ ಮಾಡಿದ್ರು. ಕೊನೆಯ ಓವರ್ ಮಾಡ್ತಿದ್ದ ಖಲೀಲ್ ಅಹ್ಮದ್ ಆ ಬಾಲ್ ಬೀಟ್ ಮಾಡೋದ್ರಲ್ಲಿ ಯಶಸ್ವಿಯಾದ್ರು. ಬಾಲ್ ಕೀಪರ್ ನ ಕೈನಲ್ಲಿದ್ರೂ, ರನ್ ಕಲೆ ಹಾಕಲು ಮುಂದಾದ ಅಮಿತ್ ಮಿಶ್ರಾ ಕ್ರೀಸ್ ಬಿಟ್ಟು ಹೋಡಿದ್ರು. ಈ ವೇಳೆ ಕೀಪರ್ ವೃದ್ಧಿಮಾನ್ ಸಹ ರನೌಟ್ ಮಾಡಲು ಯತ್ನಿಸಿದ್ರು. ಆದ್ರೆ ಅವರು ಎಸೆದ ಬಾಲ್ ವಿಕೆಟ್ ಗೆ ತಾಗದೇ ಖಲೀಲ್ ಕೈಸೇರಿತ್ತು. ಈ ವೇಳೆ ಖಲೀಲ್ ಹಿಂದೆ ತಿರುಗಿ ಮಿಶ್ರಾ ರನೌಟ್ ಮಾಡಲು ಯತ್ನಿಸಿದ್ರು. ಆದ್ರೆ ಆ ಬಾಲ್ ವಿಕೆಟ್ ಗೆ ಬೀಳದೇ ಮಿಶ್ರಾ ಕಾಲಿಗೆ ತಾಗಿತ್ತು. ಈ ವೇಳೆ ಖಲೀಲ್ ಅಂಪೈರ್ ಮೊರೆ ಹೋದ್ರು ಅಲ್ಲದೇ ಡಿಆರ್ ಎಸ್ ತೆಗೆದುಕೊಳ್ಳುವಂತೆ ನಾಯಕ ವಿಲಿಯಂಸನ್ ಗೆ ಹೇಳಿದ್ರು. ಆದ್ರೆ ವಿಕೆಟ್ ಗೂ ತಾಗದ ಬಾಲ್ ಹೇಗೆ ಔಟ್ ಆಯ್ತು ಅಂತ ಕನ್ಫೂಸ್ ನಲ್ಲಿದ್ದ ಅಂಪೈರ್, ಥರ್ಡ್ ಅಂಪೈರ್ ಗೆ ಮನವಿ ಸಲ್ಲಿಸಿದ್ರು. ಒಂದು ವೇಳೆ ಬ್ಯಾಟ್ ಗೆ ಬಾಲ್ ತಾಗಿ ಕೀಪರ್ ಕ್ಯಾಚ್ ಆಗಿದೆಯೇನೋ ಎಂದು ಭಾವಿಸಿದ್ದ ಥರ್ಡ್ ಅಂಪೈರ್ ಚೆಕ್ ಮಾಡಿದ್ದಾರೆ. ಆದ್ರೆ ಕೀಪರ್ ಕ್ಯಾಚ್ ಆಗಿರ್ಲಿಲ್ಲ. ತಕ್ಷಣವೇ ಇದು ನಾಟೌಟ್ ಸೂಚಿಸುವಂತೆ ಅಂಪೈರ್ ಗೆ ತಿಳಿಸಿದ್ರು. ಆದ್ರೆ ಖಲೀಲ್ ಮನವಿ ಮಾಡಿದ್ದು ಕ್ಯಾಚ್ ಗೆ ಆಗಿರ್ಲಿಲ್ಲ ಬದ್ಲಾಗಿ ರನೌಟ್ ಗೆ. ಮತ್ತೆ ಥರ್ಡ್ ಅಂಪೈರ್ ಮೊರೆ ಹೋದಾಗ ಸತ್ಯ ಗೊತ್ತಾಗಿದೆ. ಖಲೀಲ್ ರನೌಟ್ ಮಾಡುವಾಗ ಅಮಿತ್ ಮಿಶ್ರಾ ಬೇಕೆಂದೇ ಬಾಲಿಗೆ ಅಡ್ಡ ಹೋಗಿದ್ದು ಗೊತ್ತಾಗಿದೆ. ಅಷ್ಟೇ ಅಲ್ಲದೇ ಅವರು ರನೌಟ್ ತಪ್ಪಿಸಲು ಪಿಚ್ ಮೇಲೆಯೇ ಓಡಿದ್ದು ಕಂಡು ಬಂತು. ಪಿಚ್ ನ ಮಧ್ಯದಲ್ಲಿ ವಕ್ರವಾಗಿ ಓಡಿದ ಮಿಶ್ರಾ ಕಾಲಿಗೆ ಬಾಲ್ ತಾಗಿಸಿಕೊಂಡು ರನೌಟ್ ನಿಂದ ಪಾರಾಗಿದ್ರೂ, ಬೇಕೆಂದೇ ಈ ರೀತಿ ಅವರು ಮಾಡಿದ್ದು ಧೃಡಪಟ್ಟ ಕಾರಣ ಕ್ರಿಕೆಟ್ ಲಾ 37ರ ಪ್ರಕಾರ ಮಿಶ್ರಾ ಔಟ್ ಎಂದು ಹೇಳಲಾಯ್ತು. ಈ ಮೂಲಕ ವಿಕೆಟ್ ಗೆ ಬಾಲ್ ತಾಗದೇ ಮಿಶ್ರಾ ರನೌಟ್ ಆದ್ರು. ಇಂತಹ ರನೌಟ್ ಇದೇ‌‌ ಮೊದಲೇನಲ್ಲ, ಇದೇ ಐಪಿಲ್ 2013ರಲ್ಲಿ ಯೂಸೂಫ್ ಪಠಾಣ್ ಕೂಡ ಔಟ್ ಆಗಿದ್ದರು, ಹಾಗೂ ಮಾಜಿ ಪಾಕ್ ಕ್ಯಾಪ್ಟನ್ ಇಂಜಮಾಮ್ ಉಲ್ ಹಕ್ ಗೆ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಕೂಡ ಈ ರೀತಿ ರನೌಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top