2 ವರ್ಷದಲ್ಲಿ ಕಾದಿದೆ ಭೂಮಿಗೆ ಗಂಡಾಂತರ..! ಭೂಮಿಗೆ ಬರ್ತಾ ಇವೆ ಏಲಿಯನ್‍ಗಳು..!

ನಾವೂ ನೀವೂ ಹಾಲಿವುಡ್ ಸಿನಿಮಾಗಳಲ್ಲಿ ಅನ್ಯಗ್ರಹಗಳಿಂದ ಅನ್ಯ ಜೀವಿಗಳು ಭೂಮಿಯ ಮೇಲೆ ದಾಳಿ ಇಡೋ ಸೀನ್‍ಗಳನ್ನು ನೋಡಿರ್ತಿವಿ, ಇನ್ನು ಅವು ನಿಜವಾಗಿಯೂ ಭೂಮಿ ಬಂದು ಬಿಟ್ರೆ ಏನಪ್ಪ ಗತಿ ಅನ್ನೋ ಆಲೋಚನೆಯನ್ನು ಸಹ ನಾವು ಮಾಡಿರ್ತಿವಿ, ಆದ್ರೆ ಇಂತಹ ಆಲೋಚನೆಗಳಿಗೆ ಪುಷ್ಟಿ ನೀಡುವಂತೆ ಸುದ್ದಿಯೊಂದು ಈಗ ಹೊರ ಬಿದ್ದಿದೆ, ಹೌದು ನಾಸಾದ ಹಿರಿಯ ವಿಜ್ಞಾನಿಯೊಬ್ಬರು ಬೆಚ್ಚಿ ಬೀಳಿಸುವಂತಹ ಸುದ್ದಿಯೊಂದು ನೀಡಿದ್ದಾರೆ, ಅದೇನು ಅಂದ್ರೆ ಇನ್ನು ಎರಡರಿಂದ ಮೂರು ವರ್ಷದಲ್ಲಿ ಭೂಮಿಗೆ ಅನ್ಯಗ್ರಹ ಜೀವಿಗಳ ಆಗಮನ ಆಗಲಿದೆಯಂತೆ ಅಂದರೆ ಏಲಿಯನ್ಸ್ ಗಳು ನಮ್ಮ ಭೂಮಂಡಲವನ್ನು ಸಂಪರ್ಕಿಸಲಿವೆಯಂತೆ. ಈಗಾಗಲೇ ಮಂಗಳ ಗ್ರಹದಲ್ಲಿ ಸಂಶೋದನೆಗಳು ನಡೀತಾನೆ ಇವೆ, ಇನ್ನು ಮಂಗಳ ಗ್ರಹ ಕೂಡ ಭೂಮಿಯನ್ನು ಹೋಲುವ ಗ್ರಹವಾಗಿದ್ದು ಅಲ್ಲಿಯೂ ಜೀವಿಗಳು ವಾಸವಾಗಿದ್ದಾವೆ ಅನ್ನೋ ನಂಬಿಕೆ ವಿಜ್ಞಾನಿಗಳಲ್ಲಿ ಇದೆ, ಅದಕ್ಕಾಗಿ ಸಾಕಷ್ಟು ಸಂಶೋದನೆಗಳು ಸಹ ನಡುತ್ತಿವೆ, ಇದೇ ವೇಳೆ ಈಗ ನಾಸಾದ ಹಿರಿಯ ವಿಜ್ಞಾನಿ ಡಾ. ಜಿಮ್ ಗ್ರೀನ್ ಒಂದು ಹೇಳಿಕೆಯನ್ನು ನೀಡಿದ್ದಾರೆ.

ಅವರ ಪ್ರಕಾರ ` ಮಂಗಳದಲ್ಲಿ ಅನ್ಯ ಗ್ರಹ ಜೀವಿಗಳನ್ನು ಪತ್ತೆಹಚ್ಚುವ ವಿಷಯದಲ್ಲಿ ನಾಸಾ ತುಂಬಾ ಹತ್ತಿರದಲ್ಲಿ ಇದೆಯಂತೆ, ಅದ್ರೆ ನಾವು ಹೇಳುವ ಈ ವಿಷಯವನ್ನು ಕೇಳಿದ್ರೆ ಎಲ್ಲಾರು ಶಾಕ್ ಆಗ್ತಾರೆ, ಯಾಕಂದ್ರೆ ಅನ್ಯ ಗ್ರಹ ಜೀವಿಗಳನ್ನು ಒಪ್ಪಿಕೊಳ್ಳಲು ಈ ಭೂ ಮಂಡಲ ತಯಾರಿಲ್ಲ ಅನ್ನೋದು ಈ ರೀತಿ ಹೇಳುವ ಮೂಲಕ ಇನ್ನು ಕೆಲವೇ ವರ್ಷಗಳಲ್ಲಿ ಏಲಿಯನ್‍ಗಳನ್ನು ಸಂಪರ್ಕಿಸುತ್ತವೆ ಅನ್ನೋದು ನಾಸಾ ವಿಜ್ಞಾನಿಗಳು ಹೇಳೋ ಮಾತು.

ಒಂದು ವೇಳೆ ವಿಜ್ಞಾನಿಗಳು ಹೇಳಿದ ರೀತಿ ಏಲಿಯನ್‍ಗಳು ಸಂಪರ್ಕಕ್ಕೆ ಸಿಕ್ಕಿ ಅವುಗಳು ನಮ್ಮ ಭೂಮಂಡಲದ ಮೇಲೆ ದಾಳಿ ಮಾಡ್ತಾವ ಇಲ್ಲ ನಮ್ಮ ಸಂವಹನವನ್ನು ಅರ್ಥ ಮಾಡಿಕೊಂಡು ನಮ್ಮ ಜೊತೆ ಉತ್ತಮ ಬಾಂದವ್ಯ ಹೊಂದಿ ಒಂದೊಳ್ಳೆ ಲೋಕ ಸೃಷ್ಟಿಯಾಗಬಹುದೇ ಇಲ್ಲ ಸಂಘರ್ಷವಾಗಿ ವಿನಾಶ ಹೊಂದಬಹುದೇ ಈ ಬಗ್ಗೆ ನೀವೇನ್ ಹೇಳ್ತೀರಾ ಅನ್ನೋದನ್ನ ಕಮೆಂಟ್ ಮಾಡುವ ಮೂಲಕ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top