ಅಳಿದು ಉಳಿದವರಿಗೆ ಕೈಹಿಡಿದ ಸ್ಯಾಂಡಲ್‌ವುಡ್‌ ಕಿರಿಕ್‌ ಹುಡುಗ..!

ಕಿರುತೆರೆಯಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡು ಎಲ್ಲರಿಗೂ ಮನೋರಂಜನೆ ನೀಡಿದ್ದ ಬಹುಮುಖ ಪ್ರತಿಭೆ ಅಶುಬೇದ್ರಾ ಮೊದಲ ಬಾರಿಗೆ ನಾಯಕನಾಗಿ ನಟಿಸ್ತಾ ಇರೋ ಸಿನಿಮಾ ʻಅಳಿದು ಉಳಿದವರುʼ ಈ ಚಿತ್ರಕ್ಕೆ ಈಗ ಶ್ರೀಮನ್‌ ನಾರಾಯಣನ ಕೃಪ ಕಟಾಕ್ಷ ಕೂಡ ಒಲಿದಿದೆ..

ಹೌದು ಸ್ಯಾಂಡಲ್‌ವುಡ್‌ನಲ್ಲಿ ಡಿಫರೆಂಟ್‌ ಸಿನಿಮಾ ನೀಡಿ ನಾನು ಉಳಿದವರು ಕಂಡಂತೆ ಅಂತ ಹೇಳಿ ಕಿರಿಕ್‌ ಪಾರ್ಟಿ ಮಾಡಿ, ಅವನೇ ಶ್ರೀಮನ್‌ ನಾರಾಯಣನ ಅವತಾರ ತೋರಿಸಲು ರೆಡಿಯಾಗಿರೋ ರಕ್ಷಿತ್‌ ಶೆಟ್ಟಿ ಈಗ ʻಅಳಿದು ಉಳಿದವರುʼ ಚಿತ್ರಕ್ಕೆ ಸಾಥ್‌ ನೀಡಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ರಕ್ಷಿತ್‌ ಶೆಟ್ಟಿ ಸಿನಿಮಾಗೆ ಸಾಥ್‌ ನೀಡಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಟೈಟಲ್‌ ಮೂಲಕನೇ ಕ್ಯೂರ್ಯಾಸಿಟಿ ಕ್ರಿಯೇಟ್‌ ಮಾಡಿದ್ದ ಅಳಿದು ಉಳಿದವರು ಹೆಸರಿನಂತೆ ಇದೊಂದು ಥ್ರಿಲ್ಲರ್‌ ಮೂವಿಯಾಗಿದ್ದು, ಪೋಸ್ಟರ್‌ ಕೂಡ ಥ್ರಿಲ್ಲರ್‌ ಲುಕ್‌ನಲ್ಲಿದ್ದು ಸಿನಿ ರಸಿಕನಿಗೆ ಸಖತ್‌ ಥ್ರಿಲ್‌ ಕೊಡೋದು ಗ್ಯಾರಂಟಿ ಅಂತಿದೆ ಚಿತ್ರತಂಡ,

ಇನ್ನು ಮೊದಲ ಬಾರಿಗೆ ನಾಯಕ ನಟನಾಗಿ ತೆರೆಮೇಲೆ ಮಿಂಚೋಕೆ ರೆಡಿಯಾಗಿರೋ ಅಶುಬೇದ್ರಾ ಈ ಚಿತ್ರಕ್ಕೆ ನಾಯಕ ಕಂ ನಿರ್ಮಾಪಕರಾಗಿದ್ದು, ಅರವಿಂದ್‌ ಶಾಸ್ತ್ರಿ ಚಿತ್ರಕ್ಕೆ ಡೈರೆಕ್ಷನ್‌ ಹೇಳಿದ್ದಾರೆ. ಇನ್ನು ಅಶುಬೇದ್ರಾ ಅವರಿಗೆ ನಾಯಕಿಯಾಗಿ ಸಂಗೀತ ಭಟ್‌ ಕಾಣಿಸಿಕೊಂಡಿದ್ದು, ಉಳಿದಂತೆ ಚಿತ್ರದಲ್ಲಿ ಅತುಲ್‌ ಕುಲಕರ್ಣಿ, ಲೂಸಿಯಾ ಪವನ್‌ ಚಿತ್ರದಲ್ಲಿ ನಟಿಸ್ತಾ ಇರೋದು ಚಿತ್ರಕ್ಕೆ ಸಿಕ್ಕಿರೋ ಇನ್ನೊಂದು ಪ್ಲಸ್‌ ಪಾಯಿಂಟ್‌. ಇನ್ನುಫಸ್ಟ್‌ ಲುಕ್‌ ರಿಲೀಸ್‌ ಮಾಡೋ ಮೂಲಕ ಪ್ರಮೋಷನ್‌ ಕೆಲಸ ಸ್ಟಾರ್ಟ್‌ ಮಾಡಿರೋ ಚಿತ್ರತಂಡ ಸದ್ಯದರಲ್ಲೇ ಟೀಸರ್‌ ರಿಲೀಸ್‌ ಮಾಡೋ ಮೂಲಕ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಜೊತೆಗೆ ಕ್ಯೂರ್ಯಾಸಿಟಿಯನ್ನು ಸಹ ಹೆಚ್ಚು ಮಾಡುವಂತೆ ಮಾಡಲಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top