ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ದೂರು ನೀಡಿದ ಕಾಮಿಡಿಯನ್ ಅಲಿ..!

Ali approaches Police to trace out the culprits

ಚಿತ್ರರಂಗದಲ್ಲಿ ಸ್ಟಾರ್ ವಾರ್ ಏನೂ ಹೊಸದೇನೆಲ್ಲ, ಆದ್ರೆ ಒಬ್ಬ ಹೀರೋ ಮತ್ತು ಕಾಮಿಡಿಯನ್ ನಡುವೆ ವಾರ್ ಈಗ ಟಾಲಿವುಡ್‍ನಲ್ಲಿ ನಡೀತಾ ಇದೆ. ಪವನ್ ಕಲ್ಯಾಣ್ ಮತ್ತು ಅಲಿ ಇಬ್ಬರು ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಇವರಿಬ್ಬರ ಸಂಬಂಧ ಒಂದು ವರ್ಷಗಳಿಂದ ಹಳಸಿ ಹೋಗಿದೆ. ಕಾರಣ ಒಂದು ವರ್ಷದ ಹಿಂದೆ ನಡೆದ ಚುನಾವಣಾ ರ್ಯಾಲಿಯಲ್ಲಿ ಇಬ್ಬರು ಮುಖಾಮುಖಿಯಾಗಿದ್ದ, ಆ ವೇಳೆ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ರು. ಇದರಿಂದಾಗಿ ಇವರಿಬ್ಬರ ನಡುವೆ ಒಂದು ವರ್ಷದಿಂದ ಭೇಟಿಯು ಸಹ ಆಗಿರಲಿಲ್ಲ.

ಆದರೀಗ ಪವನ್ ಕಲ್ಯಾಣ್ ಅಭಿಮಾನಿಗಳು ಅಲಿ ವಿರುದ್ಧ ಅನೇಕ ಪೋಸ್ಟ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದು, ಒಂದು ವರ್ಷದಿಂದ ಸುಮ್ಮನಿದ್ದ ಅಲಿ ಇನ್ನು ಸುಮ್ಮನಿದ್ದರೆ ಆಗೋಲ್ಲ ಎಂದು ಸೈಬರ್ ಕ್ರೈಂಗೆ ದೂರನ್ನು ನೀಡಿದ್ದಾರೆ.

ಇನ್ನು ಅಲಿ ನೀಡಿರುವ ದೂರಿನ ಅನ್ವಯ ಪವನ್ ಕಲ್ಯಾನ್ ಅಭಿಮಾನಿಗಳು ಅಲಿ ಹೆಸರಿನಲ್ಲಿ ನಕಲಿ ಖಾತೆಯನ್ನು ಸೋಶಿಯಲ್ ಮೀಡಿಯಾದಲ್ಲಿ ತೆರೆದಿದ್ದು, ಅದರಲ್ಲಿ ಇಲ್ಲಸಲ್ಲದ ಪೋಸ್ಟ್‍ಗಳನ್ನು ಹಾಕುವ ಮೂಲಕ ಅಲಿ ಹೆಸರಿಗೆ ಮಸಿ ಬಳಿಯು ಕೆಲಸ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ವಿರೋಧಿ ಪೋಸ್ಟ್‍ಗಳನ್ನು ಹಾಕಲಾಗುತ್ತಿದ್ದು. ನಕಲಿ ಖಾತೆಯನ್ನು ಡಿಲೀಟ್ ಮಾಡಿಸಿ ಎಂದು ಮನವಿಮಾಡಿದ್ದಾರೆ.

ಇನ್ನು ಇತ್ತಿಚೆಗೆ ಅಲಿ ಹೆಸರಲ್ಲಿ ಟ್ವೀಟರ್ ಖಾತೆ ತೆರೆದು, ಪವನ್ ಕಲ್ಯಾಣ್ ಅವರಿಗೆ ಕ್ಷಮೇ ಕೇಳುವ ರೀತಿ ಪೋಸ್ಟ್‍ಗಳನ್ನು ಸಹ ಹಾಕಲಾಗಿದೆ. ಅಷ್ಟೇ ಅಲ್ಲದೇ ಈ ಟ್ವೀಟ್ ಸಕತ್ ಟ್ರೋಲ್ ಕೂಡ ಆಗಿತ್ತು. ಸದ್ಯ ಅಲಿ ದೂರು ನೀಡಿದ್ದು ನಕಲಿ ಖಾತೆ ಸೃಷ್ಟಿಸಿ ಮಾನ ಹಾನಿಮಾಡಲಾಗುತ್ತಿದೆ ಎಂದು ಮಾನಹಾನಿ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top