ನೀನ್ ಏನ್ ಕೇಳಿದ್ರು 15 ನಿಮಿಷದಲ್ಲಿ ಮಾಡ್ತೀನಿ ಎಂದಿದ್ದು ಯಾರಿಗೆ..? ರಿವೀಲ್ ಆಯ್ತು ದರ್ಶನ್ ಅವರ ಇನ್ನೊಂದು ಅಸಲಿ ಮುಖ..!

ಸ್ಯಾಂಡಲ್‍ವುಡ್‍ನ ಬಾಕ್ಸಾಫಿಸ್ ಸುಲ್ತಾನ್ ಅಂದ್ರೆ ಅದು ದರ್ಶನ್ ಅಂತ ಎಲ್ಲಾರಿಗೂ ಗೊತ್ತಿರೋ ವಿಚಾರ, ಆದ್ರೆ ದರ್ಶನ್ ಅದನ್ನೂ ಮೀರಿ ಇರೋ ವ್ಯಕ್ತಿ ಅಂತ ಗೊತ್ತಾಗೋದು.. ಅವರೊಬ್ಬ ಸಹೃದಯಿ..ಆಪತ್ಭಾಂಧವ..ಕರುಣಾಮಯಿ ಅನ್ನೋ ವಿಚಾರದಲ್ಲಿ..ದರ್ಶನ್‍ಗೆ ಯಾರೇ ಕಷ್ಟದಲ್ಲಿ ಇದ್ದಾರೆ ಅಂತ ಗೊತ್ತಾದ ತಕ್ಷಣ ಹಿಂದು ಮುಂದು ನೋಡದೆ ಅವರ ಸಹಾಯಕ್ಕೆ ನಿಲ್ಲೋ.. ಸ್ಯಾಂಡಲ್‍ವುಡ್‍ನ ಮತ್ತೊಬ್ಬ ಕರ್ಣ ಅಂತಾನೇ ಹೇಳಬಹುದು. ತಾವು ಮಾಡಿದ ಸಹಾಯವನ್ನು ಎಲ್ಲಿಯೂ ತೋರಿಸಿಕೊಳ್ಳದೇ, ಯಾರ ಬಳಿಯೂ ಹೇಳಿಕೊಳ್ಳದೇ ತಮ್ಮ ಕೈಲಾದ ಸಹಾಯವನ್ನು ಮಾಡೋ ಹೃದಯವಂತ. ಅಂತಹ ದರ್ಶನ್ ಬಗ್ಗೆ ಈಗ ಸ್ಯಾಂಡಲ್‍ವುಡ್‍ನ ಮತ್ತೊಬ್ಬ ನಟ ಮಾತನಾಡಿದ್ದಾರೆ.

ಹೌದು ಕಾಶೀನಾಥ್ ಪುತ್ರ ಅಭಿಮನ್ಯು ದರ್ಶನ್ ಅವರ ಬಗೆಗಿನ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿಯನ್ನು ಈಗ ಬಿಚ್ಚಿಟ್ಟಿದ್ದಾರೆ. ಅಭಿಮನ್ಯು ತಮ್ಮ ತಂದೆ ಕಾಶೀನಾಥ್ ಅವರನ್ನು ಕಳೆದುಕೊಂಡಾಗ ಇಡೀ ಮನೆಯ ಜವಬ್ದಾರಿ ನನ್ನ ಮೇಲೆ ಇತ್ತು, ಆಗ ನನ್ನ ಹಿಂದೆ ನಿಂತಿದ್ದು ದರ್ಶನ್ ಸರ್ ಅವರು, ಅವರು ಹೇಳಿದ್ದು ಒಂದೇ ಮಾತು, ಚಿನ್ನ ನಿನಗೆ ಏನೇ ಬೇಕು ಅಂದ್ರೂ ಒಂದು ಫೋನ್ ಮಾಡು 15ನಿಮಿಷದಲ್ಲಿ ನಾನು ಅದನ್ನು ಮಾಡುತ್ತೇನೆ ಎಂದರು ಆ ಸಮಯದಲ್ಲಿ ನನ್ನ ಮೇಲೆ ಎಲ್ಲ ಜವಾಬ್ದಾರಿ ಇತ್ತು. ಅವರ ಕಡೆಯಿಂದ ಬಂದ ಒಂದು ಮಾತು ನನಗೆ ತುಂಬ ಧೈರ್ಯ ತುಂಬಿತು. ಎಂದು ಹೇಳಿದ ಅಭಿಮನ್ಯು ದರ್ಶನ್ ಸರ್ ಅವರಿಗೆ ಏನ್ ಹೇಳಿದ್ರು ಕಮ್ಮಿನೇ ಅಂತ ಹೇಳಿದ್ರು..

ಈ ರೀತಿ ಕಷ್ಟದಲ್ಲಿರೋ ಅದೆಷ್ಟೋ ನಟರಿಗೆ ನಮ್ಮ ಡಿ ಬಾಸ್ ಹಿಂದು ಮುಂದು ನೋಡದೆ ನೆರವನ್ನು ನೀಡಿದ್ದಾರೆ.. ಇನ್ನು ಸ್ಯಾಂಡಲ್‍ವುಡ್‍ನಲ್ಲಿ ಸಹಾಯ ಪಡೆದ ಅದೆಷ್ಟೋ ಮಂದಿ ಈಗಲೂ ದರ್ಶನ್ ಅವರನ್ನು ನೆನಪಿಸಿಕೊಳ್ತಾನೆ ಇರ್ತಾರೆ, ಆದ್ರೆ ಬಲಗೈನಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗ ಬಾರದು ಅನ್ನೋ ಗುಣ ಮಾತ್ರ ದರ್ಶನ್ ಅವರದ್ದು.. ಅದಕ್ಕೆ ಅನ್ಸುತ್ತೆ ಸ್ಯಾಂಡಲ್‍ವುಡ್‍ನಲ್ಲಿ ಯಾರಿಗೂ ಇಲ್ಲದ.. ಫ್ಯಾನ್ ಫಾಲೋವರ್ಸ್ ದರ್ಶನ್‍ಗೆ ಇರೋದು.. ಆ ಕಾರಣಕ್ಕೆ ಪ್ರೀತಿಯಿಂದ ಅಭಿಮಾನಿಗಳು ಕರೆಯೋದು ಇವನು ಗಾಂಧೀನಗರದ ಯಜಮಾನ..ಸ್ಯಾಂಡಲ್‍ವುಡ್‍ನ ಒಡೆಯ..ನಮ್ಮೆಲ್ಲರ ಪ್ರೀತಿಯ ದಾಸ ಡಿ ಬಾಸ್ ಅಂತ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top