2023ರ ವಿಶ್ವಕಪ್ ಗೆ ಮತ್ತೆ ಎಬಿಡಿ ಎಂಟ್ರಿ..? ಯಾಕೆ ಗೊತ್ತಾ..?

abd

ಕ್ರಿಕೆಟ್ ಜಗತ್ತಿನ ಮಿಸ್ಟರ್ 360° ಎಂದೇ ಖ್ಯಾತಿ ಗಳಿಸಿರೋ ಏಕೈಕ ವ್ಯಕ್ತಿ ಅಂದ್ರೆ ಅದು ಎಬಿ ಡೆವಿಲಿಯರ್ಸ್. 2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಎಬಿ `ದಿ ಸೂಪರ್ ಮ್ಯಾನ್’ ಸುಮಾರು 15 ವರ್ಷಗಳವರೆಗೂ ಸೌತ್ ಆಫ್ರಿಕಾ ತಂಡದಲ್ಲಿ ಮಿಂಚಿದ್ರು. ಇವರ ಅದ್ಭುತ ಬ್ಯಾಟಿಂಗ್ ಶೈಲಿ, ಪವರ್ ಫುಲ್ ಶಾಟ್ಸ್, ಜಬರ್ದಸ್ತ್ ಫೀಲ್ಡಿಂಗ್ ಜೊತೆಗೆ ಉತ್ತಮ ಕೀಪಿಂಗ್ ಪ್ರದರ್ಶನವನ್ನೂ ನೀಡಿದ್ರು.

ಆದ್ರೆ ಸಖತ್ ಬ್ಯಾಟಿಂಗ್ ಫಾರ್ಮ್ ನಲ್ಲಿರುವಾಗ್ಲೆ ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರನೆ ವಿದಾಯ ಹೇಳಿದ್ರು. ಇದೀಗ ಜನಪ್ರಸಿದ್ಧಿ ಪಡೆದಿರುವ ಬಿಗ್ ಬ್ಯಾಷ್ ಲೀಗ್ ಗೂ ಗುಡ್ ಬೈ ಹೇಳಿ, ಭಾರತದಲ್ಲಿ ನಡೆಯುವ ಐಪಿಎಲ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದಾರೆ.
Read : ಈ ಬಾರಿಯೂ ವರ್ಲ್ಡ್ ಕಪ್ ಗೆಲ್ಲೂದು ಆಸ್ಟ್ರೇಲಿಯಾ..! ಗಂಭೀರ್ ಭವಿಷ್ಯ..!

ಆದ್ರೆ ಇದೀಗ ಎಬಿಡಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಸಖತ್ ಸುದ್ದಿಯಾಗುದ್ದಾರೆ. ಒಂದು ವೇಳೆ ಟೀಂ ಸೌತ್ ಆಫ್ರಿಕಾಗೆ ಕಂಬ್ಯಾಕ್ ಮಾಡೋದಿದ್ರೆ 2023 ರ ವಿಶ್ವಕಪ್ ಗೆ ಅಂತ ಖಾಸಗಿ ಸುದ್ದಿವಾಹಿನಿಯೊಂದ್ರಲ್ಲಿ ಹೇಳಿದ್ದಾರೆ. ಈ ಹೇಳಿಕೆ ಹಿಂದೆ ಒಂದು ಬಲವಾದ ಕಾರಣವೂ ಇದೆ ನೋಡಿ.

2023 ರ ವಿಶ್ವಕಪ್ ಆಡಲು ಎಬಿಡಿ ನಿರ್ಧರಿಸಿದ್ದು ಮತ್ಯಾರಿಗೂ ಅಲ್ಲ ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಗಾಗಿ. ಒಂದು ವೇಳೆ ಎಂಎಸ್ ಡಿ 2023 ರ ವಿಶ್ವಕಪ್ ನಲ್ಲೂ ಕಾಣೊಸಿಕೊಂಡಿದ್ದೇ ಆದ್ರೆ ಸೌತ್ ಆಫ್ರಿಕಾ ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡ್ತೀನಿ ಅಂತ ನಗುತ್ತಲೇ ಉತ್ತರಿಸಿದ್ದಾರೆ. ಸದ್ಯ ನನಗೆ ಈಗ 35 ವರ್ಷವಾಗಿದೆ. ಮುಂದಿನ ವಿಶ್ವಕಪ್ ಗೆ ನನಗೆ 39 ವರ್ಷವಾಗಲಿದೆ. ಆಗಲೂ ಧೋನಿ ವಿಶ್ವಕಪ್ ಆಡಿದ್ರೆ ಖಂಡಿತಾ ನಾನೂ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top