ABD ವಿಚಾರದಲ್ಲಿ ಕೊಹ್ಲಿ ಲೆಕ್ಕಾಚಾರ ಉಲ್ಟಾ ಪಲ್ಟಾ..

ಐಪಿಎಲ್ 2020ಯ ಆರ್ ಸಿ ಬಿ ಮತ್ತು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸತತ ಸೋಲಿನಿಂದ ಹೊರ ಬಂದು ಪಂಜಾಬ್ ತಂಡ ಮತ್ತೆ ಗೆಲುವನ್ನು ಕಂಡುಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಸಿ ಬಿ ನಿಧಾನಗತಿಯ ಆಟದಿಂದಾಗಿ 173ರನ್ ಗಳ ಟಾರ್ಗೆಟ್ ನೀಡಿತ್ತು,ಶಾರ್ಜಾ ಪಿಚ್ ನಲ್ಲಿ ದೊಡ್ಡ ಮೊತ್ತ ಆರ್ ಸಿ ಬಿ ಕಲೆ ಹಾಕಲಿದೆ ಅನ್ನೋ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ರೆ ಇತ್ತ ವಿರಾಟ್ ಕೊಹ್ಲಿ ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಆಯ್ತು. ಹೌದು ಶಾರ್ಜಾ ಪಂದ್ಯದಲ್ಲಿ ಪ್ರಯೋಗಕ್ಕೆ ಕೈ ಹಾಕಿದ್ದ ವಿರಾಟ್ ಆರ್ ಸಿ ಬಿಯ ಎರಡನೇ ವಿಕೆಟ್ ಬಿದ್ದಾಗ ಎಲ್ಲಾರೂ ಎಬಿಡಿ ಕ್ರಿಸ್ ಗೆ ಬರ್ತಾರೆ ಅಂತಾನೇ ಅಂದುಕೊಂಡಿದ್ರು,ಆದ್ರೆ ಎಬಿಡಿ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಬರುವ ಮೂಲಕ ಎಲ್ಲರ ಲೆಕ್ಕಾಚಾರ ತಲೆಕಳಗಾಗುವಂತೆ ಮಾಡಿತು,ಆದ್ರೆ ಇಲ್ಲಿ ವಿರಾಟ್ ಲೆಕ್ಕಾಚಾರ ಸರಿ ಪಡಿಸುವಲ್ಲಿ ವಾಷಿಂಗ್ಟನ್ ಸಹಾಯ ಮಾಡಲಿಲ್ಲ,ಇನ್ನು ವಾಷಿಂಗ್ಟನ್‌ ನಂತರ ಎಬಿಡಿ ಬರಬಹುದು ಅಂದುಕೊಂಡವರಿಗೆ ಶಿವಂ ದುಬೆ ಎಂಟ್ರಿ ವಿರಾಟ್ ಲೆಕ್ಕಾಚಾರ ಅರ್ಧವಾಗಲಿಲ್ಲ,ಈ ವೇಳೆಗೆ ವಿರಾಟ್ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಅರ್ಥವಾಗಿತ್ತು,ನಂತರ ಬಂದ ಎಬಿಡಿಗೆ ಸಿಕ್ಕ ಸಮಯದಲ್ಲಿ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ,ಹೀಗಾಗಿ ವಿರಾಟ್ ಎಬಿಡಿ ವಿಚಾರದಲ್ಲಿ ಹಾಕಿಕೊಂಡಿದ್ದ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು,ತಂಡದ ಬ್ಯಾಟಿಂಗ್ ಆರ್ಡರ್ ನಲ್ಲಿ ಬದಲಾವಣೆ ಮಾಡಿದ್ದು ತಂಡದ ನಿಧಾನಗತಿ ಸ್ಕೋರ್ ಗೆ ಕಾರಣವಾಗುವ ಜೊತೆಯಲ್ಲಿ ,ಆರ್ ಸಿ ಬಿ ಸೋಲಿಗೆ ವಿರಾಟ್ ಲೆಕ್ಕಾಚಾರವೂ ಕಾರಣವಾಯ್ತು ಅಂತಾನೇ ಹೇಳಬಹುದು. ಆರ್ ಸಿ ಬಿ ತನ್ನ ಎಂದಿನ ಬ್ಯಾಟಿಂಗ್ ಆರ್ಡರ್ ನಲ್ಲೇ ಆಡಿದ್ದರೆ ಪಂದ್ಯಗೆಲ್ಲುವ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಏರಬಹುದಿತ್ತು,ಆದ್ರೆ ಎಬಿಡಿ ವಿಚಾರದಲ್ಲಿ ಶಾರ್ಜಾ ಪಿಚ್ ನಲ್ಲಿ ವಿರಾಟ್ ಹಾಕಿದ್ದ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು ತಂಡದ ಸೋಲಿಗೆ ಕಾರಣವಾಯ್ತು.

ಈ ವಿವಾರವಾಗಿ ನೀವೇನ್ ಹೇಳ್ತೀರಾ..ಎಬಿಡಿ ಬ್ಯಾಟಿಂಗ್ ಆರ್ಡರ್ ನಲ್ಲಿ ಕೆಳಗಿಳಸಿದ್ದೇ ತಂಡದ ಸೋಲಿಗೆ ಕಾರಣವಾಯ್ತ,ವಿರಾಟ್ ಲೆಕ್ಕಾಚಾರ ಉಲ್ಟಾ ಹೊಡೀತಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top