ABD ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು..

ಎಬಿ ಡಿವಿಲಿಯರ್ಸ್ ಕ್ರಿಕೆಟ್ ಜಗತ್ತು ಕಂಡ ಒಬ್ಬ ಅದ್ಭುತ ಆಟಗಾರ. ವಿಶ್ವದಲ್ಲಿ ಯಾರಾದರೂ ಒಬ್ಬ ಪ್ರತಿ ಬಾಲ್‍ನ ಮೂಲೆ ಮೂಲೆಗೆ ಅಟ್ಟುವ ಆಟಗಾರ ಇದ್ದಾರೆ ಅಂದ್ರೆ ಅದು ಮಿಸ್ಟರ್ 360* ಎಬಿ ಡಿವಿಲಿಯರ್ಸ್, ಜಗತ್ತಿನ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ಎಬಿಡಿ ಅಗ್ರಸ್ಥಾನವನ್ನು ಪಡೆದುಕೊಳ್ತಾರೆ. ಆಡು ಮುಟ್ಟದ ಸೊಪ್ಪಿ, ಎಬಿಡಿ ಎಂಟ್ರಿಕೊಡದ ಕ್ಷೇತ್ರಗಳಿಲ್ಲ, ಹೌದು ಎಬಿಡಿ ಎಲ್ಲರಿಗೂ ಗೊತ್ತಿರೋ ಹಾಗೆ ಒಬ್ಬ ಅದ್ಭುತ ಕ್ರಿಕೆಟರ್ ಅನ್ನೋದು ಗೊತ್ತು, ಆದ್ರೆ ಎಬಿಡಿ ಕೇವಲ ಕ್ರಿಕೆಟ್ ಮಾತ್ರವಲ್ಲ ಇನ್ನು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಅಂದ್ರೆ ನೀವು ನಂಬಲೇ ಬೇಕು. ಎಬಿಡಿ ಅವರೊಬ್ಬ ಸೂಪರ್ ಮ್ಯಾನ್..ಅವರು ಕೇವಲ ಎಬಿಡಿ ಅಲ್ಲ ಅವರು ಎ ಟು ಝಡ್..

ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟರ್ ಆಗಿರೋ ಎಬಿಡಿಯನ್ನು ಭಾರತೀಯರು ತುಂಬಾನೇ ಇಷ್ಟ ಪಡ್ತಾರೆ, ಅದರಲ್ಲೂ ಆರ್‍ಸಿಬಿ ಅಭಿಮಾನಿಗಳು ಅಂತು ಆತನನ್ನ ಕ್ರಿಕೆಟ್ ದೇವರು ಅಂತಾನೇ ಅಂದುಕೊಂಡು ಬಿಟ್ಟಿದ್ದಾರೆ. ಆರ್‍ಸಿಬಿ ತಂಡಕ್ಕೆ ಆಪತ್ಭಾಂಧವನಾಗಿರೋ ಎಬಿಡಿ ಅಂದ್ರೆ ಕನ್ನಡಿಗರು ಮತ್ತು ಆರ್‍ಸಿಬಿ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅಂತಹ ಎಬಿಡಿ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳನ್ನು ಇವತ್ತು ನಾವ್ ಹೇಳ್ತಾ ಇದ್ದೇವೆ. ನೀವಿನ್ನು ನಮ್ಮ ಚಾನೆಲ್ ಅನ್ನ ಸಬ್‍ಸ್ಕ್ರೈನಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್‍ಸ್ಕ್ರೈಬ್ ಆಗಿ ಮತ್ತು ಈ ವಿಡಿಯೋ ಇಷ್ಟವಾದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಪ್ರೆಟೋರಿಯಾದಲ್ಲಿ. ತಂದೆ ಅಬ್ರಾಹಿಂ ಡಿವಿಲಿಯರ್ಸ್‍ಗೆ ಮಕ್ಕಳು ಸ್ಪೊಟ್ಸ್‍ಮನ್‍ಗಳಾಗಿ ಬೆಳಯಬೇಕು ಅನ್ನೋದು ತುಂಬಾನೇ ಆಸೆ, ಇದಕ್ಕೆ ಸಾಥ್ ನೀಡೋದು ಎಬಿಡಿ. ಎಬಿಡಿ ಒಬ್ಬ ಅದ್ಭುತ ಕ್ರೀಡಾ ಪಡುವಾಗಿದ್ದು, ಅವರು ರಗ್ಬಿ,ಗಾಲ್ಫ್ ಮತ್ತು ಟೆನ್ನಿಸ್ ಅಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ, ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್‍ರ ಅಪ್ಪಟ ಅಭಿಮಾನಿ ಕೂಡ ಹೌದು. ಎಬಿಡಿ ದಕ್ಷಿಣ ಆಫ್ರಿಕಾದ ಜೂನಿಯರ್ ಹಾಕಿ ತಂಡವನ್ನು ಪ್ರತಿನಿಧಿಸಿದ್ರು, ಇನ್ನು ಶಾಲಾದಿನಗಳಲ್ಲಿ ಸ್ವಿಮಿಂಗ್‍ನಲ್ಲೂ ಗೋಲ್ಡ್ ಮೆಡೆಲ್ ಪಡೆದು ದಾಖಲೆಯನ್ನು ಸಹ ನಿರ್ಮಿಸಿದ್ರು, ಇನ್ನು ಎಬಿಡಿ ವಿಲಿಯರ್ಸ್‍ಗೆ ಟೆನ್ನಿಸ್ ಆಟ ಅಂದ್ರೆ ಎಲ್ಲಿಲ್ಲದ ಅಚ್ಚುಮೆಚ್ಚು, ಹೀಗಾಗಿ ದಕ್ಷಿಣ ಆಫ್ರಿಕಾದ ಟೆನ್ನಿಸ್ ತಂಡವನ್ನು ಸಹ ಎಬಿಡಿ ಪ್ರತಿನಿಧಿಸಿದ್ದು, ಡೇವಿಸ್ ಕಪ್ ಟೆನ್ನಿಸ್ ಟೀಂ ಅನ್ನೂ ಪ್ರತಿನಿಧಿಸಿದ್ದರು. ಇಷ್ಟೆಲ್ಲಾ ಕ್ರೀಡಾ ಕ್ಷೇತ್ರದಲ್ಲಿ ಒಲವಿದ್ರು, ಎಬಿಡಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಕ್ರಿಕೆಟ್ ಕ್ಷೇತ್ರವನ್ನು, ಶಾಲಾ ದಿನಗಳಲ್ಲಿ ಉತ್ತಮ ಕ್ರಿಕೆಟ್ ಪ್ಲೇಯರ್ ಕೂಡ ಆಗಿದ್ದ ಎಬಿಡಿ 2003ರಲ್ಲಿ ಕೆನಾಡ ತಂಡದ ಎದುರು ಟೈಟಾನ್ ತಂಡದ ಪರವಾಗಿ ಕ್ರಿಕೆಟ್ ಜೀವನಕ್ಕೆ ಅಣಿಯಾಗುತ್ತಾರೆ. ಆಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ದಾಖಲಿಸೋ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.ಇನ್ನು ಅದೇ ವರ್ಷ ದಕ್ಷಿಣ ಆಫ್ರಿಕಾದ ಕಿರಿಯರ ತಂಡಕ್ಕೆ ಸೆಲೆಕ್ಟ್ ಆಗೋ ಎಬಿಡಿ ಇಂಗ್ಲೆಂಡ್ ಪ್ರವಾಸವನ್ನು ಮಾಡುತ್ತಾರೆ, ಅಲ್ಲೂ ಸಹ ಭರ್ಜರಿ ಶತಕ ಸಿಡಿಸೋ ಮೂಲಕ ಎಲ್ಲರ ಗಮನ ಸೆಳೆಯೋ ಮೂಲಕ 2004ರಲ್ಲಿ ಅಧಿಕೃತವಾಗಿ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ಆಯ್ಕೆ ಆಗೋ ಮೂಲಕ ಇಂಟರ್‍ನ್ಯಾಷನಲ್ ಕ್ರಿಕೆಟ್ ಜೀವನಕ್ಕೆ ಕಾಲಿಡುತ್ತಾರೆ.

ಅಲ್ಲಿದೆ ಎಬಡಿ ಎಂಬ ದೈತ್ಯ ಕ್ರಿಕೆಟ್ ಪ್ರತಿಭೆ ವಿಶ್ವಕ್ಕೆ ಪರಿಚಯ ಆಗೋ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದುತ್ತಾರೆ. ಇನ್ನು 2004ರಲ್ಲಿ ಟೆಸ್ಟ್‍ಗೆ ಪಾದಾರ್ಪಣೆ ಮಾಡಿದ್ರೆ, 2005ರಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡೋ ಮೂಲಕ ಸತತ 14 ವರ್ಷಗಳ ಕಾಲ ಕ್ರಿಕೆಟ್ ಪ್ರಿಯರನ್ನು ರಂಜಿಸಿದ್ದಾರೆ. 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸೋ ಎಬಿಡಿ, 2019ರಲ್ಲಿ ವಿಶ್ವಕಪ್ ಕ್ರಿಕೆಟ್‍ಗೆ ಮರಳುವ ಮನಸ್ಸು ಮಾಡಿದ್ರು ಅದು ಸಾಧ್ಯವಾಗಲಿಲ್ಲ, ಇನ್ನು 2020ರ ಟಿ 20 ವಿಶ್ವಕಪ್‍ನಲ್ಲಿ ತಂಡಕ್ಕೆ ಆಯ್ಕೆ ಮಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ತೀರ್ಮಾನ ಕೂಡ ಮಾಡಿತ್ತು ಆದ್ರೆ ವಿಶ್ವಕಪ್ ಮುಂದೂಡಿಕೆಯಿಂದ ಅದು ಕೂಡ ಸಾಧ್ಯವಾಗಿಲ್ಲ, ಸದ್ಯ ಐಪಿಎಲ್‍ನಲ್ಲಿ ಆರ್‍ಸಿಬಿ ಪರ ಆಡುತ್ತಿರೋ ಎಬಿಡಿ ಕ್ರಿಕೆಟ್ ಪ್ರಿಯರನ್ನು ಇನ್ನಷ್ಟು ರಂಜಿಸುತ್ತಿದ್ದಾರೆ. ಎಬಿಡಿ ಕೇವಲ ಕ್ರಿಕೆಟ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲ ಸಂಗೀತ ಕ್ಷೇತ್ರದಲ್ಲೂ ಸಹ ತಮ್ಮದೇ ಆದ ಚಾಪನ್ನು ಮೂಡಿಸಿದ್ದು ಸ್ವತಃ ಒಬ್ಬ ಗಾಯಕರಾಗಿದ್ದು, ಸ್ವಂತ ಬ್ಯಾಂಡ್ ಒಂದನ್ನು ಸಹ ಎಬಿಡಿ ನಡೆಸುತ್ತಿದ್ದಾರೆ. `ಶೋ ದೆಮ್ ಹು ಯು ಆರ್’ ಅನ್ನೋ ಗೀತೆ ಅವರಿಗೆ ಸಖತ್ ಹೆಸರು ಕೂಡ ತಂದುಕೊಟ್ಟಿತ್ತು.

ಕ್ರಿಕೆಟ್ ಪ್ರಿಯರ ಪಾಲಿಗೆ ಗಾಡ್ ಆಫ್ ಕ್ರಿಕೆಟರ್ ಆಗಿರೋ ಎಬಿಡಿ ಅಂದ್ರೆ ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ ಅದಕ್ಕೆ ಸಾಕ್ಷಿ ಅನ್ನೋ ಹಾಗೇ ಆರ್‍ಸಿಬಿ ತಂಡ ಗೆಲ್ಲಲು ಎಬಿಡಿ ಸಾಕು ಅಂತ ಹೇಳಿದ್ರೆ. ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಡಿಯಾ ನಡುವಿನ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ವೇಳೆ ಎಬಿಡಿ ಬ್ಯಾಟಿಂಗ್ ಮಾಡಲು ಕ್ರೀಸ್‍ಗೆ ಬಂದಾಗ ಇದೊಂದು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಅನ್ನೋದನ್ನು ಮರೆತು ಇಡೀ ಸ್ಟೇಡಿಯಂ ಎಬಿಡಿ ಎಬಿಡಿ ಅಂತ ಕೂಗೋ ಮೂಲಕ ಅವರ ಮೇಲಿನ ಅಭಿಮಾನವನ್ನು ತೋರಿಸಿದ್ರು, ಈ ವೇಳೆ ಕುಟುಂಬದ ಸಮೇತ ಬಂದಿದ್ದ ಎಬಿಡಿ ಪಂದ್ಯ ಮುಗಿದ ನಂತರ ನಿಮ್ಮ ಈ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ, ನಿಮ್ಮ ಪ್ರೀತಿಗೆ ಚಿರ ಋಣಿ ಅಂತ ಹೇಳಿದ್ರು.

ಇದು ನಿಮಗೆ ಗೊತ್ತಿರದ ಕೆಲವು ಎಬಿಡಿಯ ಬಗೆಗಿನ ವಿಷಯಗಳು ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ ಲೈಕ್ ಮಾಡಿ ಮತ್ತು ನೀವು ಎಬಿಡಿ ವಿಲಿಯರ್ಸ್ ಅವರ ಅಭಿಮಾನಿಯಾಗಿದ್ರೆ ಈ ವಿಡಿಯೋವನ್ನು ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top