ರವಿಮಾಮನ ಕಡೆಯಿಂದ ಕ್ಯೂಟ್ ಹುಡುಗಿಗೆ ಬಿಗ್ ಆಫರ್..!

aashika ranganath with ravichandran

ಸ್ಯಾಂಡಲ್‍ವುಡ್‍ನ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಸದ್ಯ ಸ್ಯಾಂಡಲ್‍ವುಡ್‍ನ ಬ್ಯೂಸಿ ನಟಿ, ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸ್ತಾ ಇರೋ ಈ ಬೆಡಗಿ ಸದ್ಯ ಪವನ್ ಒಡೆಯರ್ ನಿರ್ದೇಶನದ `ರೆಮೋ’, ಗರುಡ, ರಂಗಮಂದಿರ, ಅವತಾರ ಪುರುಷ, ಪಿಸಿ ಶೇಖರ್ ನಿರ್ದೇಶನದ ಸಿನಿಮಾದಲ್ಲಿ ಸದ್ಯ ನಟಿಸ್ತಾ ಇದ್ದಾರೆ.

ಇಷ್ಟು ಬ್ಯೂಸಿ ಇರೋ ಕ್ಯೂಟ್ ಬ್ಯೂಟಿಗೆ ಈಗ ಮತ್ತೊಂದು ಬಿಗ್ ಆಫರ್ ಬಂದಿದೆ, ಹೌದು ಅದು ಆಫರ್ ಬಂದಿರೋದು ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ, ಸದ್ಯ ರವಿಮಾಮ ತಮ್ಮ ನಿರ್ದೇಶನದಲ್ಲಿ ಹೊಸದೊಂದು ಸಿನಿಮಾ ರೆಡಿಮಾಡ್ತಾ ಇದ್ದು ಅದಕ್ಕೆ ಗ್ಲಾಮರ್ ಮತ್ತು ಕ್ಯೂಟ್ ಫೇಸ್ ನಟಿಯೊಬ್ಬಳ ಅವಶ್ಯಕತೆ ಇತ್ತು.

ಇನ್ನು ದೊಡ್ಡ ಸ್ಟಾರ್ ನಟರ ಸಿನಿಮಾ ಆಫರ್ ಬಂದಾಗ ಯಾರು ತಾನೇ ಬಿಟ್ಟುಬಿಡ್ತಾರೆ, ಹೀಗಾಗಿ ಆಶಿಕಾಳಿಗೆ ಆಫರ್ ಕೊಟ್ಟಾಗ ಆಶಿಕಾ ತಮ್ಮ ಬ್ಯೂಸಿ ಶೆಡ್ಯೂಲ್‍ನಲ್ಲಿ ರವಿಮಾಮಗೆ ಡೇಟ್ಸ್ ಕೊಟ್ಟಿದ್ದಾರಂತೆ, ಇನ್ನು ಈ ಚಿತ್ರದಲ್ಲಿ ರವಿಮಾಮ ನಿರ್ದೇಶನದ ಜೊತೆ ಅವರೆ ನಾಯಕನಾಗ್ತಾರ ಇಲ್ಲ ಬೇರೆಯವರನ್ನು ಆಶಿಕಾಗೆ ಜೋಡಿ ಹುಡುಕುತ್ತಾರ ಕಾದು ನೋಡ ಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top