99 ವರ್ಷದ ಈ ಜೋಡಿಯ ಡ್ಯಾನ್ಸ್ ನೋಡಿ ಫಿದಾ ಆದ ಪ್ರೇಕ್ಷಕರು..! Video

ಸಾಧನೆಗೆ ವಯಸ್ಸು ಎಂದು‌ ಅಡ್ಡಿ ಬರೋದಿಲ್ಲ ಅಂತ ಈ ಜೋಡಿ ನೋಡಿದ್ರೆ ಮತ್ತೊಮ್ಮೆ ಅನಿಸುತ್ತಿದೆ, ಯಾರೇ ಆಗಲಿ‌ ಸಾಧನೆ ಮಾಡಬೇಕಾದ್ರೆ ವಯಸ್ಸಿನ ಲೆಕ್ಕ ಹಾಕಬಾರದು ಅನ್ನೋ ಮಾತಿದೆ, ಆ ಮಾತಿಗೆ ಸಾಕ್ಷಿಯಾಗಿದ್ದಾರೆ ಈ ವೃದ್ಧ ಜೋಡಿ,ಐರ್ಲೆಂಡ್ ನ ಜಿಮ್ ಮೆಕ್ ಮನಸ್ ಈಗ ಎಲ್ಲರ ಅಚ್ಚುಮೆಚ್ಚಿನ ಜೋಡಿಯಾಗಿದ್ದಾರೆ, ತಮ್ಮ 99ನೇ ವಯಸ್ಸಿನಲ್ಲಿ ಅರ್ಜೆಂಟೈನಾ ದಲ್ಲಿ ನಡೆಯುತ್ತಿರೋ ವರ್ಲ್ಡ್ ಟ್ಯಾಂಗೋ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದಾರೆ.

ಈಗ ತನ್ನ 99ನೇ ವಯಸ್ಸಿನಲ್ಲಿ ಮಾಡಿದ ಡ್ಯಾನ್ಸ್ ಗೆ ನೆರೆದಿದ್ದ ಪ್ರೇಕ್ಷಕರು ಫುಲ್ ಫಿಧಾ ಆಗಿದ್ದಾರೆ, 99ರ ಜಿಮ್ ಮೆಕ್ ಮನಸ್ ಗೆ ಅರ್ಜೆಂಟೈನಾ ದ ಲುಸಿಯಾ ಸೇವಾ ಅನ್ನೋರು ಜೋಡಿಯಾಗಿದ್ರು ,ಇವರಿಬ್ಬರ ಡ್ಯಾನ್ಸ್ ಪ್ರದರ್ಶನಕ್ಕೆ ಕಾರ್ಯಕ್ರನದಲ್ಲಿ ನೆರೆದಿದ್ದ ಅಷ್ಟೂ ಜನ‌ ಎದ್ದು ನಿಂತು‌ ಚಪ್ಪಾಳೆ ತಟ್ಟಿದ್ದಾರೆ, ಈ ಕಾರ್ಯಕ್ರಮದಲ್ಲಿ ಒಟ್ಟು 36ದೇಶದ 744ಜೋಡಿ ಭಾಗವಹಿಸಿದ್ರು, ಇದರಲ್ಲಿ ಮೊದಲ ಸುತ್ತಿನಲ್ಲಿ ಜಿಮ್ ಮೆಕ್ ಮನಸ್ ಜೋಡಿ ನೆರೆದಿದ್ದವರನ್ನು ಫಿದಾಗೊಳಿಸಿದ್ದಾರೆ, ಅದಕ್ಕೆ ಹೇಳೋದು ಸಾಧನೆಗೆ ಯಾವತ್ತು ವಯಸ್ಸು ಅಡ್ಡ ಬರೋಲ್ಲ ಅನ್ನೋದು, ಇನ್ನು ಇವರ ಈ ಫಿಟ್‌ನೆಟ್ ಸೀಕ್ರೆಟ್ ಏನೂ ಗೊತ್ತಾ..? ಉತ್ತಮ ಆಹಾರ ಮತ್ತು ಪ್ರತಿನಿತ್ಯ ವ್ಯಾಯಾಮ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top