ಒಂದೇ ಬೆಳೆಯಿಂದ 90ಲಕ್ಷ ಗಳಿಸಿದ ಕರ್ನಾಟಕದ ರೈತ..!

90 lakh revenue in onion

ಒಂದೇ ಒಂದು ಬೆಳೆಯಿಂದ ಒರೋಬ್ಬರಿ 90ಲಕ್ಷ ಹಣ ಪಡೆದ ರೈತನ ಸ್ಟೋರಿ ಇದು. ಹೌದು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಚಿನ್ನಕ್ಕಿಂತ ಹೆಚ್ಚಾಗಿದ್ದು, ರೈತರ ಮುಖದಲ್ಲಿ ಒಂದು ಕಡೆ ಮಂದಹಾಸ ಬೀರುವಂತೆ ಮಾಡಿದೆ. ಇನ್ನು ಇದೇ ಈರುಳ್ಳಿಯಿಂದ ಬರೋಬ್ಬರಿ 90 ಲಕ್ಷ ಆದಾಯವನ್ನು ಪಡೆಯುವ ಮೂಲಕ ಮಾದರಿ ರೈತನಾಗಿದ್ದಾರೆ ಚಿತ್ರದುರ್ಗದ ಸಿದ್ದವ್ವಹನಹಳ್ಳಿಯ ಮಲ್ಲಿಕಾರ್ಜುನ ಅನ್ನೋ ಈ ರೈತ. ಈ ರೈತ ತನ್ನ 20 ಎಕರೆ ಜಮೀನಿನಲ್ಲಿ ಈರುಳ್ಳಿಯನ್ನು ಬೆಳೆದಿದ್ದು, 3700 ಪ್ಯಾಕೆಟ್‌ಗಳನ್ನು ಬೆಳೆದಿದ್ದರು. ಇನ್ನು ಒಂದು ಕ್ವಿಂಟಾಲ್‌ ಈರುಳ್ಳಿಗೆ 3200ರೂ ಯಿಂದ 7000 ರೂಪಾಯಿವರೆಗೆ ಹಂತ ಹಂತವಾಗಿ ಮಾರ್ಕೆಟ್‌ ಬೆಲೆ ಸಿಕ್ಕಿದ್ದು, ಇದರಿಂದಾಗಿ ಒಟ್ಟು 90ಲಕ್ಷ ಗಳಿಸಿದ್ದಾರೆ ಮಲ್ಲಿಕಾರ್ಜುನ್‌ ಅನ್ನೋ ರೈತ.

ಅನೇಕ ವರ್ಷಗಳಿಂದ ಈರುಳ್ಳಿಯನ್ನೇ ಬೆಳೆದುಕೊಂಡು ಬಂದಿರೋ ಈ ರೈತ ಪ್ರತಿ ವರ್ಷ 3500 ರಿಂದ 4000 ಸಾವಿರ ಪ್ಯಾಕೆಟ್‌ ಈರುಳ್ಳಿಯನ್ನು ಬೆಳೆಯುತ್ತಿದ್ದು ಈ ವರೆಗೂ 2009ರಲ್ಲಿ ಮಾತ್ರ ನಷ್ಟ ಅನುಭಸಿದ್ದು ಬಿಟ್ಟರೆ, ಬರಿ ಲಾಭವನ್ನೆ ಗಳಿಸಿದ್ದೇನೆ ಎಂದು ಹೇಳಿದ್ದಾರೆ. ಪ್ರತಿ ವರ್ಷವೂ ಉತ್ತಮ ಆದಾಯವನ್ನೇ ಕಾಣುತ್ತಿರೋ ಮಲ್ಲಿಕಾರ್ಜುನ್‌ ಅವರು ಈ ಬಾರಿ 3700 ಪ್ಯಾಕೇಟ್‌ ಈರುಳ್ಳಿಯನ್ನು ಬೆಳೆದಿದ್ದು ಒಟ್ಟು 12 ರಿಂದ 15 ಲಕ್ಷದ ವರೆಗೆ ಈರುಳ್ಳಿ ಬೆಳೆಯಲು ಖರ್ಚಾಗಿದ್ದು, ಉಳಿದ 75 ಲಕ್ಷ ರೂಪಾಯಿ ನಿವ್ವಳ ಲಾಭವನ್ನು ಈ ವರ್ಷ ಪಡೆದಿದ್ದೇನೆ ಎಂದು ಮಲ್ಲಕಾರ್ಜುನ್‌ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top