9 ತಿಂಗಳಲ್ಲಿ ನ್ಯಾನೋ ಕಾರು ಸೇಲಾಗಿದ್ದು ಕೇವಲ ಒಂದೇ..! ನೀವೂ ನಂಬಲೇ ಬೇಕು..!

ಜಗತ್ತಿನ ಕಡಿಮೆ ಬೆಲೆಯ ಕಾರು ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾರು ಅದು ನ್ಯಾನೋ ಕಾರು.. ಭಾರತದಲ್ಲಿ ಸಾಮಾನ್ಯ ಜನರು ಸಹ ಕಾರಿನಲ್ಲಿ ಓಡಾಡುವಂತೆ ಮಾಡಿತ್ತು, ಆದ್ರೆ ವಾರ್ಷಿಕ ಮೊದಲ ಒಂಭತ್ತು ತಿಂಗಳಲ್ಲಿ ಕೇವಲ ಒಂದು ಕಾರು ಮಾತ್ರ ಮಾರಾಟವಾಗಿದೆ ಎಂದು ಹೇಳಿದೆ.

ಜನಸಾಮಾನ್ಯರ ಕಾರು ಎಂದೇ ಫೇಮಸ್‌ ಆಗಿದ್ದ ಈ ಕಾರು 2019 ಫೆಬ್ರವರಿ ತಿಂಗಳಿನಿಂದ ಇಲ್ಲಿಯವರೆಗೆ ದೇಶದ ಮಾರುಕಟ್ಟೆಯಲ್ಲಿ ಕೇವಲ ಒಂದು ಕಾರು ಮಾತ್ರ ಖರೀದಿಯಾಗಿದೆಯಂತೆ, ಇನ್ನು ನ್ಯಾನೋ ಕಾರನ್ನು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಲಾಗುತ್ತಿತ್ತು, ಆದ್ರೆ ಕಾರಿನಲ್ಲಿನ ಕೆಲವು ತಾಂತ್ರಿಕ ದೋಷ, ಕಚ್ಚಾ ಸಾಮಗ್ರಿಗಳ ಹಾಗೂ ಉತ್ಪಾದನೆಯ ವೆಚ್ಚ ಏರಿಕೆ ಆಗಿದ್ದರಿಂದಾಗಿ ನ್ಯಾನೋ ಕಾರಿನ ಬೇಡಿಕೆ ಕೂಡ ಕುಸಿತವಾಗಿದೆ.

ಇನ್ನು ಕಾರಿನ ಉತ್ಪಾದನಾ ಯೋಜನೆ, ಬೇಡಿಕೆ ನ್ಯಾನೊ ಮುಂದಿನ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕಂಪನಿ ಹೇಳಿದೆ.

ಕಂಪನಿ ನಿಯಂತ್ರಕ ದಾಖಲಾತಿಗಳ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ದೇಶಿ ಮಾರುಕಟ್ಟೆಯಲ್ಲಿ ನ್ಯಾನೋ ಉತ್ಪಾದನೆ ಮತ್ತು ಮಾರಾಟ ವಹಿವಾಟು ಆಗಿಲ್ಲ, ಫೆಬ್ರವರಿಯಲ್ಲಿ ಕೇವಲ ಒಂದು ಯುನಿಟ್‌ ಮಾರಾಟ ಮಾಡಲಾಗಿದೆ ಎಂದು ಕಂಪನಿಯ ದಾಖಲಾತಿಯಲ್ಲಿ ಲಭ್ಯವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top