5 ಮೊಮ್ಮಕ್ಕಳ ಅಜ್ಜ ಈಗ ಗಂಡು ಮಗುವಿನ ತಂದೆ..!ವಯಸ್ಸೆಷ್ಟು ಗೊತ್ತಾ..?

ಪ್ರಪಂಚದಲ್ಲಿ ಯಾವ ಕ್ಷಣದಲ್ಲಿ ಏನೇನೋ ಆಗಿ ಹೋಗುತ್ತದೆ, ಒಂದು ಕಡೆ ವಿಸ್ಮಯ, ಇನ್ನೊಂದು ಕಡೆ ಆಘಾತ, ಇನ್ನು ಮನುಷ್ಯನ ಜೀವನದಲ್ಲಿ ಚಿತ್ರವಿಚಿತ್ರ ಘಟನೆಗಳು ಸಹ ನಡೆದು ಹೋಗುತ್ತದೆ.

ಅದರಲ್ಲೂ ಮನುಷ್ಯನ ಆಸೆಗೆ,ಸಾಧನೆಗೆ ವಯಸ್ಸಿನ ಮಿತಿ ಇರೋದಿಲ್ಲ, ಯಾವ ವಯಸ್ಸಿನಲ್ಲಿಯಾದರು ಸಾಧನೆಯನ್ನು ಮಾಡಬಹುದು, ಇನ್ನು ಸಾಯುವ ಒಳಗೆ ಯಾವಾಗ ಬೇಕಾದರು ತಂದೆಯಾಗಬಹುದು, ಇದು ಒಂದು ರೀತಿಯಲ್ಲಿ ಪ್ರಕೃತಿ ನಿಯಮ, ಅಂತಹದ್ದೇ ಒಂದು ಘಟನೆ ಈ ನಡೆದಿದೆ. ಹೌದು 5 ಮೊಮ್ಮಕ್ಕಳನ್ನು ಹೊಂದಿರೋ 89ನೇ ವಯಸ್ಸಿನ ಅಜ್ಜ ಈಗ ಒಂದು ಗಂಡು ಮಗುವಿನ ತಂದೆಯಾಗಿದ್ದಾರೆ.

ಒನ್‌ ಫಾರ್ಮುಲಾದ ಮಾಜಿ ಮುಖ್ಯಸ್ಥ ಬರ್ನಿ ಎಕ್ಲೆಸ್ಟೋನ್‌ ತಮ್ಮ 89ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ.44 ವರ್ಷದ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಪತ್ನಿಯ ಹೆಸರು ಫೆಬಿಯಾನಾ ಫ್ಲೊಸಿ, ಫೆಬಿಯಾನಾ ಫ್ಲೊಸಿ ಬರ್ನಿಗೆ ಮೂರನೇ ಹೆಂಡತಿಯಾಗಿದ್ದು, ಮೊದಲ ಎರಡು ಪತ್ನಿಯರಿಗೆ ವಿಚ್ಛೇದನವನ್ನು ನೀಡಿದ್ದಾರೆ. ಇನ್ನು ಮೊದಲ ಎರಡು ಪತ್ನಿಯರಿಗೆ ಮೂರು ಹೆಣ್ಣು ಮಕ್ಕಳಿದ್ದು, ಅವರಿಗೆ ಒಟ್ಟು 5 ಜನ ಮಕ್ಕಳಿದ್ದು, 5 ಮೊಮ್ಮಕ್ಕಳ ತಾತಾ ಈ ಬರ್ನಿ, ಸದ್ಯ ಗಂಡು ಮಗುವಿನ ತಂದೆಯಾಗಿರೋ ಖುಷಿಯಲ್ಲಿರೋ ಬರ್ನಿ, ನನಗೂ ಒಬ್ಬ ಗಂಡು ಮಗುವಿದೆ ಆತನ ಹೆಸರು ಏಸ್‌ ಎಂದು ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ.

ಇನ್ನು ಫೆಬಿಯಾನಾ ಹೆರಿಗೆ ಯಾವುದೇ ತೊಂದರೆಯಿಲ್ಲದಂತೆ ಆಯ್ತು, ಮಗುವನ್ನು ಕರುಣಿಸಿದ ದೇವರಿಗೆ ಥ್ಯಾಂಕ್ಸ್‌ ಹೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಬರ್ನಿ 2009ರಲ್ಲಿ ಮೋಟರ್ಸ್‌ ಸ್ಪೋರ್ಟ್‌ ಕೌನ್ಸಿಲ್‌ನಲ್ಲಿ ಫೆಬಿಯಾನಾರ ಪರಿಚಯವಾಗಿದ್ದು ಎರಡನೇ ಪತ್ನಿ ವಿಚ್ಛೇದನದ ನಂತರ 2012ರಲ್ಲಿ ಫೆಬಿಯಾನಾ ಜೊತೆ ಬರ್ನಿ ಮದುವೆಯಾಗಿದ್ದರು.

89 ವರ್ಷದ ಬರ್ನಿ ಗಂಡು ಮಗುವಾದ ಖುಷಿಯಲ್ಲಿದ್ದು ಇದೇ ಅಕ್ಟೋಬರ್‌ ತಿಂಗಳಿಗೆ ಬರ್ನಿಗೆ 90 ವರ್ಷ ಆಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top