710 ಕೋಟಿ ಲಾಟರಿ ಗೆದ್ದ ಈ ವ್ಯಕ್ತಿ ಮಾಡಿದ್ದಾದ್ರು ಏನು ಗೊತ್ತಾ..?

ನಿಮಗೇನಾದ್ರು ಲಾಟರಿ ಹೊಡೆದರೆ ಏನು ಮಾಡ್ತೀರಾ, ಒಂದಷ್ಟು ಸಂತೋಷ ಸಂಭ್ರಮಾಚಣೆ ಮಾಡಿ..ಖುಷಿಯಿಂದ ಕುಪ್ಪಳಿಸುತ್ತೀರಾ,ಇನ್ನು ತಮ್ಮ ಅಕ್ಕಪಕ್ಕದ ಆತ್ಮೀಯರಿಗೆ, ನಿಮ್ಮ ನೆಂಟರಿಷ್ಟರಿಗೆ ಕುಟುಂಬದವರಿಗೆ ಹೇಳಿ ಒಂದಿಷ್ಟು ಸಂತೋಷವನ್ನು ಹಂಚಿಕೊಳ್ತಿರಾ, ಇನ್ನು ಕೆಲವ್ರು ಲಾಟರಿ ಹೊಡೆದಿದೆ, ಲಾಟರಿ ಹಣ ಕೈ ಸೇರಲಿ ಆ ನಂತರದಲ್ಲಿ ನಮ್ಮ ಆತ್ಮಿಯರಿಗೆ ಹೇಳಿದರಾಯ್ತು ಅಂತ ಸುಮ್ಮನಾಗಿ ಬಿಡ್ತೀರಾ, ಆದ್ರೆ ಇಲ್ಲೊಬ್ಬ ತನಗೆ ಬಂದ ಬರೋಬ್ಬರಿ 710 ಕೋಟಿ ಮೊತ್ತದ ಲಾಟರಿ ಹೊಡೆದ ವ್ಯಕ್ತಿ ಮಾಡಿದ್ದನ್ನು ನೀವು ಕೇಳಿದ್ರೆ ಆಶ್ಚರ್ಯ ಆಗ್ತೀರಾ..

ಹೌದು ಲೊಟ್ಟೋ ಲಾಟರಿ ಮೂಲಕ 95 ದಶಲಕ್ಷ ಡಾಲರ್ (710 ಕೋಟಿ ರೂಪಾಯಿ) ಮೊತ್ತವನ್ನು ಗೆದ್ದ ವ್ಯಕ್ತಿ ತನ್ನ ಗುರುತು ಸಿಗಬಾರದು ಎಂದು ಮರೆಮಾಚಿಕೊಂಡು ಚೆಕ್ ಪಡೆದಿರುವ ಘಟನೆ ನಡೆದಿದೆ. ಇತನ ಹೆಸರು ಡಬ್ಲ್ಯು ಬ್ರೌನ್ ಅಂತ, ಈತ ಜಮೈಕಾದ ಪ್ರಜೆಯಾಗಿದ್ದು, ಈತ ಇದೇ ತಿಂಗಳ ಮೊದಲ ವಾರದಲ್ಲಿ ಮೇ ಪೆನ್‍ನಲ್ಲಿರುವ ಡಿ ಎಂಡ್ಸ್ ಸ್ಪೋರ್ಟ್ ಬಾರ್‍ನಲ್ಲಿ ಲೊಟ್ಟೊ ಟಿಕೆಟ್ ಒಂದನ್ನು ಖರೀದಿಸಿದ್ದನು. ಆತ ಎರಡು ಟಕೆಟ್‍ಗಳನ್ನು ತೆಗೆದುಕೊಂಡಿದ್ದನ್ನು ಆದ್ರೆ ಆತ ತೆಗೆದುಕೊಂಡಿದ್ದ ಒಂದು ಟಿಕೆಟ್‍ಕ್ಕೆ ಬರೋಬ್ಬರಿ 95ದಶಲಕ್ಷ ಡಾಲರ್ ಅಂದರೆ ಅಂದಾಜು 710 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಈ ವಿಚಾರ ತಿಳಿದ ಡಬ್ಲ್ಯು ಬ್ರೌನ್ ತನಗೆ ಬಂದ ಹಣವನ್ನು ಸಾರ್ವಜನಿಕವಾಗಿ ತೆಗೆದುಕೊಳ್ಳುವುದು ಬಹಿರಂಗವಾದ್ರೆ ಎಲ್ಲಿ ತೊಂದರೆಯಾಗುತ್ತದೆ ಎಂದು ಆತ ತಾನು ಡಾರ್ತ್ ವೆಡೆರ್ ವಸ್ತ್ರವನ್ನು ಧರಿಸಿ ವೇದಿಕೆಗೆ ಬಂದು ತನ್ನ ಲಾಟರಿ ಹಣದ ಚೆಕ್ ಅನ್ನು ಪಡೆದುಕೊಂಡಿದ್ದಾನೆ. ಇನ್ನು ಈ ವಿಚಾರವಾಗಿ ಆತನ ಬಳಿ ಕೇಳಿದ್ರೆ ಈ ರೀತಿಯಾಗಿ ಚೆಕ್ ಅನ್ನು ಪಡೆದುಕೊಂಡ್ರಿ ಅಂತ ಕೆಲವ್ರು ಕೇಳಿದ್ದಕ್ಕೆ, ಸಾಮಾನ್ಯನೊಬ್ಬ ದಿಢೀರ್ ಶ್ರೀಮಂತನಾದ್ರೆ ಏನೆಲ್ಲಾ ಸಮಸ್ಯೆಗಳು ಉಂಟಾಗಲಿದೆ ಅನ್ನೋದನ್ನ ನಾನು ಊಹಿಸಿದ್ದೇ ಹಾಗಾಗಿ ನಾನು ಈ ರೀತಿ ಮಾಡಿದೆ ಎಂದು ಬ್ರೌನ್ ಹೇಳಿಕೊಂಡಿದ್ದಾನೆ.

ಒಟ್ಟಿನಲ್ಲಿ ಅದೃಷ್ಟ ಯಾವಾಗ ಯಾರ ಹೆಗಲ್ಲನ್ನು ಏರುತ್ತೆ ಗೊತ್ತಾಗೋದಿಲ್ಲ, ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು..ನಮ್ಮ ಹೆಗಲ ಮೇಲೆ ಯಾವಾಗ ಅದೃಷ್ಟ ಬಂತು ಕುಳಿತುಕೊಳ್ಳುತ್ತೆ ಅನ್ನೋದು ಗೊತ್ತಾಗೋದಿಲ್ಲ, ಬಂದಾಗ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳ ಬೇಕು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top