
70ವರ್ಷದ ಮುದುಕನೊಬ್ಬ ಮದುವೆಯಾಗಲು ಹೋಗಿ 28 ಲಕ್ಷ ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ.
2019 ಆಗಸ್ಟ್ ನಲ್ಲಿ ಈ ಘಟನೆ ನಡೆದಿದ್ದು, ಹಣ ಕಳೆದುಕೊಂಡ ವ್ಯಕ್ತಿ ಮುಂಬೈ ನಿವಾಸಿಯಾಗಿದ್ದು, 2018ರಲ್ಲಿ ತನ್ನ ಪತ್ನಿ ನಿಧನವಾಗಿದ್ದ, ಮನೆಯಲ್ಲಿ 70 ವರ್ಷದ ವೃದ್ಧ ಒಬ್ಬರೇ ಇದ್ದ ಕಾರಣ , ಆತನ ಸ್ನೇಹಿತ ಇನ್ನೊಂದು ಮದುವೆಯಾಗಲು ಸಲಹೆಯನ್ನು ನೀಡಿದ್ದಾನೆ. ಅಷ್ಟೇ ಅಲ್ಲದೇ ಯಾರಾದರೂ ವಿಧವೆಯನ್ನು ಮದುವೆಯಾಗು ಎಂದು ತನ್ನ ಪರಿಚಯದ ವಿಧವೆಯ ಕುಟುಂಬಸ್ಥರನ್ನು ಪರಿಚಯ ಮಾಡಿಸಿಕೊಡುತ್ತಾನೆ. ಇನ್ನು ವಿಧವೆಗೆ 21 ವರ್ಷದ ಮಗಳಿದ್ದು, ವಿಧಯ ಜೊತೆ ಮಾತುಕತೆಯಾಗಿದ್ದು, ವಿಧವೆಯ ಜೊತೆಯಲ್ಲಿ ತಂದೆ,ಸಹೋದರ ಮತ್ತು ಮಗಳು ವೃದ್ಧನ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ವಿಧವೆ ಜೈಪುರದವಳಾಗಿದ್ದರಿಂದ ಮದುವೆ ರಿಜಿಸ್ಟರ್ ಅನ್ನು ಜೈಪುರದಲ್ಲೇ ಮಾಡಿಸೋಣ ಎಂದು ಹೇಳಿದ್ದಾರೆ. ಇನ್ನು ಇದಕ್ಕೆ ಆ ಮುದುಕ ಒಪ್ಪಿದ್ದು, ಎಲ್ಲಾರೂ ಜೈಪುರಕ್ಕೆ ಹೋಗಿ ಸಬ್ರಿಸ್ಟರ್ನಲ್ಲಿ ನೋಂದಣಿ ಮಾಡಿಸಿದ್ದಾರೆ. ಅಧಿಕಾರಿಗಳು ಒಂದು ತಿಂಗಳ ನಂತರ ಮದುವೆ ಡೇಟ್ ಕೊಟ್ಟಿದ್ದು, ಹಾಗಾಗಿ ಎಲ್ಲಾರೂ ಮುಂಬೈಗೆ ಬಂದು ವೃದ್ಧನ ಜೊತೆ ವಾಸವಾಗಿದ್ದರು.
ಈ ವೇಳೆ ವಿಧವೆ ಮತ್ತು ಆಕೆಯ ಕುಟುಂಬಸ್ಥರು ವೃದ್ಧನ ಮನೆಯಿಂದ ಅನೇಕ ವಸ್ತುಗಳನ್ನು ಕದ್ದಿದ್ದು, ಜೊತೆಗೆ ಅನೇಕ ಕಾಗದ ಪತ್ರಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ವಿಧವೆ ಮತ್ತು ಆಕೆಯ ಕುಟುಂಬದವರು ಕಾಣದೆ ಹೋದಾಗ ವೃದ್ಧ ಮನೆಯಲ್ಲಿ ವಸ್ತುಗಳನ್ನು ಪರಿಶೀಲಿಸಿದಾಗ ವಸ್ತುಗಳು ಮತ್ತು ಕೆಲವು ಕಾಗದ ಪತ್ರಗಳು ತೆಗೆದುಕೊಂಡು ಹೋಗಿರುವುದು ಗಮನಕ್ಕೆ ಬರುತ್ತದೆ. ತನ್ನ ಸ್ನೇಹಿತನ ಜೊತೆ ಜೈಪುರಕ್ಕೆ ಹೋಗಿ ವಿಚಾರಿಸಿದಾಗ ಅವರು ಮಾಡಿರುವ ಮೋಸ ಬೆಳಕಿಗೆ ಬರುತ್ತದೆ. ಇನ್ನು 28 ಲಕ್ಷ ಮೌಲ್ಯದ ವಸ್ತು ಕಳೆದುಕೊಂಡ ಆಘಾತದಲ್ಲಿ ಹೃದಯಾಘಾತವಾಗಿದ್ದು ವೃದ್ಧ ಜೈಪುರದಲ್ಲಿ ಚಿಕಿತ್ಸೆ ಪಡೆದು ಮುಂಬೈಗೆ ಆಗಮಿಸಿದ್ದಾನೆ.
ಈ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದ ವೃದ್ಧ ಇತ್ತಿಚೆಗೆ ಮತ್ತೆ ಹೃದಯಾಘಾತವಾಗಿದ್ದು, ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾg. ಈ ವೇಳೆ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿ ದೂರು ನೀಡಿದ್ದಾರೆ.