7 ಭಾಷೆಯಲ್ಲಿ ಬರಲಿದೆ ಉಪ್ಪಿಯ ‘ಕಬ್ಜಾ’..!

ಸ್ಯಾಂಡಲ್ವುಡ್ ನಲ್ಲಿ ಈಗ ಏನಿದ್ರೂ ಪ್ಯಾನ್ ಇಂಡಿಯಾದ ಕಾನ್ಸೆಪ್ಟ್. ದೊಡ್ಡ ದೊಡ್ಡ ಸ್ಟಾರ್‌ಗಳು ಈಗ ಏನಿದ್ರೂ ತಮ್ಮ‌ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ತೆಗೆದುಕೊಂಡು ಹೋಗ ಬೇಕು ಅನ್ನೋದು ,ಸದ್ಯ ಕೆಜಿಎಫ್ ,ಕುರುಕ್ಷೇತ್ರ, ಪೈಲ್ವಾನ್ ಬಹುಭಾಷೆಯಲ್ಲಿ ತೆರೆಕಂಡು ಸಕ್ಸಸ್ ಕೂಡ ಪಡೆದುಕೊಂಡು ಬಿಡ್ತು, ಈಗ‌ ಅದೇ ಸಾಲಿಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಹೆಜ್ಜೆ ಇಡಲು ರೆಡಿಯಾಗ್ತಾ ಇದ್ದಾರೆ. ಇದುವರೆಗೂ ಬಂದ ಸಿನಿಮಾ ಕೇವಲ ಐದು ಭಾಷೆಯಲ್ಲಿ ತೆರೆಕಂಡಿದ್ರೆ ಉಪ್ಪಿಯ ಈ ಸಿನಿಮಾ 7 ಭಾಷೆಯಲ್ಲಿ ರೆಡಿಯಾಗ್ತಾ ಇದೆ, ಹೌದು ಆರ್ ಚಂದ್ರು ನಿರ್ದೇಶನದಲ್ಲಿ ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ರೆಡಿಯಾಗ್ತಾ ಇದೆ, ಇನ್ನು ಉಪ್ಪಿ ಮತ್ತು ಆರ್ ಚಂದ್ರು ಕಾಂಬಿನೇಶನ್ ನಲ್ಲಿ ಈಗಾಗ್ಲೇ ‘ಬ್ರಹ್ಮ’ ಮತ್ತು ಐ ಲವ್ ಯು ಸಿನಿಮಾ ಬಂದಿದ್ದು ತಕ್ಕ ಮಟ್ಟಿನ ಯಶಸ್ಸನ್ನು ಕಂಡಿತ್ತು, ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ‘ಕಬ್ಜಾ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಗೆ ಅಡಿಯಾಗಿತ್ತಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ,

ಕನ್ನಡ ,ತಮಿಳು,ತೆಲುಗು,ಮಲೆಯಾಳಂ,ಹಿಂದಿ,ಬೆಂಗಾಲಿ ಮತ್ತು ಮರಾಠಿಯಲ್ಲಿ ಮಿಂಚಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಆರ್ ಚಂದ್ರು ನಿರ್ದೇಶನದಲ್ಲಿ ಬರ್ತಾ ಇರೋ ಚಿತ್ರದ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಖುಷಿಯನ್ನು ಶೇರ್ ಮಾಡಿಕೊಂಡಿರೋ ಉಪ್ಪಿ ಚಿತ್ರ ಸದ್ಯರಲ್ಲೇ ಸೆಟ್ಟೇರಲಿದೆ ಅನ್ನೋ ಮಾಹಿತಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ ಸಿನಿಮಾಗಳು ಗಡಿದಾಟಿ ಸೌಂಡ್ ಮಾಡ್ತಾ ಇರೋ ಟೈಂನಲ್ಲಿ ಆ ಲಿಸ್ಟ್ ಮತ್ತೊಂದು ಸಿನಿಮಾ ಸೇರ್ತಾ ಇರೋದು ಸಂತೋಷದ ವಿಚಾರವೇ ಸರಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top