6 ತಿಂಗಳಲ್ಲಿ ಮತ್ತೆ ಐಪಿಎಲ್‌ ಶುರು, ಪಡಿಕಲ್‌ ಬಗ್ಗೆ ಮೆಚ್ಚುಗೆ ಪಡಿಸಿದ ಗಂಗೂಲಿ

ಐಪಿಎಲ್‌ 2020 ಯಶಸ್ವಿಯಾಗಿ ಮುಗಿಸಿರೋ ಬಿಸಿಸಿಐ ಮತ್ತು ಐಪಿಎಲ್‌ ಕಮಿಟಿ ಇದೀಗ ಯಶಸ್ಸಿನ ಖುಷಿಯಲ್ಲಿ ಇದೆ. ಈ ವರ್ಷದ ಐಪಿಎಲ್‌ ಕೊನೆಯ ಹಂತಕ್ಕೆ ಬಂದು ತಲುಪಿದ್ದು ಬಿಸಿಸಿಐ ಆಧ್ಯಕ್ಷ ದಾದಾ ಸೌರವ್‌ ಗಂಗೂಲಿ ಖುಷಿಯಲ್ಲಿದ್ದು, ಇದೀಗ ಐಪಿಎಲ್‌ನ 6 ಯುವ ಪ್ರತಿಭೆಗಳ ಹೆಸರನ್ನು ಗುರುತಿಸಿದ್ದಾರೆ.

ಹೌದು ಇತ್ತಿಚೆಗೆ ಮಾಧ್ಯಮದ ಜೊತೆ ಮಾತನಾಡುವ ವೇಳೆ ಐಪಿಎಲ್‌ನಲ್ಲಿ ಯುವ ಪ್ರತಿಭೆಗಳು ಉತ್ತಮವಾಗಿ ಪ್ರದರ್ಶನವನ್ನು ತೋರುತ್ತಿದ್ದು ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಈ ಬಾರಿ ಯುವ ಪ್ರತಿಭೆಗಳ ಹವಾ ಜೋರಾಗಿದೆ ಅಂದಿದ್ದು, ಇದರ ಜೊತೆಯಲ್ಲಿ 6 ಯುವ ಪ್ರತಿಭೆಗಳನ್ನು ಗುರುತಿಸಿ ಪ್ರಶಂಸಿದ್ದಾರೆ. ಇದರಲ್ಲಿ ಕನ್ನಡಿಗ ದೇವದತ್‌ ಪಡಿಕಲ್‌ ಕೂಡ ಇದ್ದು, ಪಡಿಕಲ್‌ ಮೊದಲ ಐಪಿಎಲ್‌ನಲ್ಲೇ ಉತ್ತಮ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರೋ ಪಟ್ಟಿಯಲ್ಲಿ ಟಾಪ್‌ ೪ರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ, ಇಂಟರ್‌ನ್ಯಾಷನಲ್‌ ಕ್ಯಾಪ್‌ ತೊಡದೇ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಅನ್ನೋ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಇದೀಗ ಬಿಸಿಸಿಐ ಅಧ್ಯಕ್ಷ ಪಡಿಕಲ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಸಹ ಹೇಳಿದ್ದು ಇವರು ಐಪಿಎಲ್‌ನ ಯುವ ಪ್ರತಿಭೆ ಮುಂದಿನ ದಿನಗಳಲ್ಲಿ ಇವರ ಭವಿಷ್ಯ ಉತ್ತಮವಾಗಿರಲಿದೆ ಅಂತ ಹೇಳಿದ್ದಾರೆ. ಇನ್ನು ಪಡಿಕಲ್‌ ಜೊತೆಯಲ್ಲಿ ಸಂಜು ಸ್ಯಾಮ್‌ಸನ್‌,ರಾಹುಲ್‌ ತ್ರಿಪಾಠಿ,ವರುಣ್‌ ಚಕ್ರವರ್ತಿ,ಶುಬ್‌ಮನ್‌ ಗಿಲ್‌, ಸೂರ್ಯ ಕುಮಾರ್‌ ಯಾದವ್‌ ಅವರ ಹೆಸರನ್ನು ಸೆಲೆಕ್ಟ್‌ ಮಾಡಿದ್ದಾರೆ. ಇನ್ನು ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸಕ್ಕೆ ಸೂರ್ಯಕುಮಾರ್‌ ಯಾದವ್‌ ಆಯ್ಕೆ ಮಾಡದೆ ಇರುವುದರ ಬಗ್ಗೆ ಒಂದಷ್ಟು ಟೀಕೆಗಳು ಸಹ ಕೇಳಿಬಂದಿತ್ತು, ಈ ವಿಚಾರವಾಗಿ ಮಾತನಾಡಿರೋ ಗಂಗೂಲಿ ಸೂರ್ಯಕುಮಾರ್‌ ಯಾದವ್‌ ಒಬ್ಬ ಒಳ್ಳೆಯ ಆಟಗಾರ,ಆತನ ಸಮಯ ಬರುತ್ತದೆ .ಕೊಂಚ ಕಾಯಲಿ ಎಂದಿದ್ದಾರೆ. ಐಪಿಎಲ್‌ ಮತ್ತು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ವಲ್ಪ ಸಮಯ ಕಾಯಬೇಕು ಅಂತ ಸೌರವ್‌ ಗಂಗೂಲಿ ಹೇಳಿದ್ದಾರೆ.

ಇನ್ನು ಇದೇ ವೇಳೆ ಮುಂದಿನ ಐಪಿಎಲ್‌ 2021ರಲ್ಲಿ ನಡೆಸಲು ಯೋಜನೆಯನ್ನು ಹಾಕಿಕೊಂಡಿದ್ದೇವೆ. ಮುಂದಿನ ವರ್ಷ ಏಪ್ರಿಲ್‌ ವೇಳೆಗೆ ಕೊರೋನಾಗೆ ವ್ಯಾಕ್ಸಿನ್‌ ಬರುವ ಬಗ್ಗೆ ನಂಬಿಕೆ ಇದೆ,ಹಾಗಾಗಿ ಮುಂದಿನ ವರ್ಷ ಐಪಿಎಲ್‌ 2021 ಭಾರತದಲ್ಲೇ ನಡೆಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದು, ಐಪಿಎಲ್‌ ಮೆಗಾ ಆಕ್ಷನ್‌ ಬಗ್ಗೆ ಕೂಡ ಮಾಹಿತಿ ನೀಡಿದ್ದು, ಮೆಗಾ ಆಕ್ಷನ್‌ ಬಗ್ಗೆ ಯಾವುದೇ ತೀರ್ಮಾನವನ್ನು ಇದುವರೆಗೂ ತೆಗೆದುಕೊಂಡಿಲ್ಲ, ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಸೌರವ್‌ ಗಂಗೂಲಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top