4000 ಜನರಿಗೆ ನೆರವಾದ ಕ್ರಿಕೆಟ್ ದೇವರು..!

ಕೊರೊನಾದಿಂದ ದೇಶವೇ ಸಂಕಷ್ಟದಲ್ಲಿ ಸಿಲುಕಿದ್ದು, ಕೆಲವು ಸ್ಥಿತಿವಂತರು ಸಂಕಷ್ಟದಲ್ಲಿರುವ‌ ಜನರ ನೆರವಿಗೆ ನಿಂತಿದ್ದಾರೆ. ಇನ್ನು ಹಲವು ಬೇರೆ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳು ಸಹ ತಮ್ಮ ತಮ್ನ ಮಟ್ಟಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್ ಕೂಡ 4000 ಜನರಿಗೆ ಹಣದ ಸಹಾಯವನ್ನು ಮಾಡಿದ್ದಾರೆ. ಮುಂಬೈನ ಹೈ5 ಫೌಂಡೇಷನ್ ಎಂಬ ಸಂಸ್ಥೆಗೆ ಸಚಿನ್ ಹಣ ನೀಡಿದ್ದಾರೆ. ಆದ್ರೆ ಸಚಿನ್ ಎಷ್ಟು ಹಣ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ, ಇನ್ನು ಹೈ5 ಸೇವಾ ಸಂಸ್ಥೆ ಟ್ವೀಟ್ ಮಾಡಿ ನೀವು ನೀಡಿದ ಧನ ಸಹಾಯದಿಂದ ಸರ್ಕಾರಿ ಶಾಲಾ ಮಕ್ಕಳು ಸೇರಿದಂತೆ 4000 ಜನರಿಗೆ ಸಹಾಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸಚಿನ್ ಕೂಡ ಟ್ವೀಟ್ ಮಾಡಿದ್ದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ನಿಮಗೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top