4 ವರ್ಷ ಜೈಲುವಾಸ ಅನುಭವಿಸಿದ ಆಮೆಗೆ ಬಿಡುಗಡೆ ಭಾಗ್ಯ..!

ನಾಲ್ಕು ವರ್ಷದಿಂದ ಜೈಲುವಾಸ ಅನುಭವಿಸುತ್ತಿದ್ದ ಮೂರು ಆಮೆಗಳಿಗೆ ಈ ಬಿಡುಗಡೆ ಭಾಗ್ಯ ದೊರೆದಿದೆ. ಈ ಘಟನೆ ರಾಯ್ ಪುರದ ರಾಜನಂದಗಾಂವ್ ನಲ್ಲಿ ನಡೆದಿದ್ದು 2015ರಲ್ಲಿ ಈ ಆಮೆಗಳ‌ನ್ನು ವಶಕ್ಕೆ ಪಡೆದಿದ್ರು, 6 ಜನ ಮಾಂತ್ರಿಕರು ಈ ಆಮೆಗಳನ್ನು ಇಟ್ಟುಕೊಂಡು ಮಾಟಮಂತ್ರಕ್ಕಾಗಿ ಬಳಸುತ್ತಿದ್ದರು, ಈ ವೇಳೆ ಪೋಲಿಸರು 6 ಜನ ಮಾಂತ್ರಿಕರು ಸೇರಿದಂತೆ ಮೂರು ಆಮೆಯನ್ನು ವಶಕ್ಕೆ ಪಡೆದಿದ್ರು, 4 ವರ್ಷದಿಂದ ಪೋಲೀಸ್ ಠಾಣೆಯಲ್ಲಿ ವಾಸವಿದ್ದ ಆಮೆಗಳು, ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು, ರಾಜನಂದಗಾಂವ್ ನ್ಯಾಯಾಲಯ ಆಮೆಗಳನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿದೆ ಇನ್ನು ಆಮೆಗಳನ್ನು ಬಿಡುಗಡೆ ಮಾಡಿರೋ ಪೊಲೀಸರು ಆಮೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದು.

ಇಲಾಖೆ ಸಿಬ್ಬಂದಿ ಆಮೆಯನ್ನು ಶಿವನಾಥ್ ನದಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top