37 ಬಾಲ್‍ಗಳಲ್ಲಿ ಸೆಂಚುರಿ ಐಪಿಎಲ್‍ನಲ್ಲಿ ಕೋಟಿಗೆ ಹರಾಜಾಗೋದು ಪಕ್ಕಾ

ಟೀಂ ಇಂಡಿಯಾಗೆ ಒಬ್ಬ ಸ್ಟಾರ್ ಪ್ಲೇಯರ್ ಹುಟ್ಟಿಕೊಂಡಿದ್ದಾರೆ. ಹೌದು ವೀಕ್ಷಕರೆ.. ಟೀಂ ಇಂಡಿಯಾಗೆ ಪ್ರತಿ ವರ್ಷ ಹೊಸ ಹೊಸ ಪ್ರತಿಭೆಗಳು ಎಂಟ್ರಿಕೊಡ್ತಾನೆ ಇರ್ತಾರೆ,ಜೊತೆ ತಮ್ಮ ಟ್ಯಾಲೆಂಟ್ ಮೂಲಕಾನೇ ಟೀಂ ಇಂಡಿಯಾದಲ್ಲಿ ಸ್ಥಾನಪಡೆದು ದಾಖಲೆಗಳನ್ನು ನಿರ್ಮಿಸ್ತಾರೆ, ಇದೀಗ ಅಂತಹದ್ದೇ ಒಬ್ಬ ಆಟಗಾರ ಹುಟ್ಟಿಕೊಂಡಿದ್ದಾನೆ. ಈತನ ಆಟನೋಡಿದ ಕ್ರಿಕೆಟ್ ದಿಗ್ಗಜರೇ ಈತನ ಆಟಕ್ಕೆ ಮನಸೋತಿದ್ದು, ಈತ ಟೀಂ ಇಂಡಿಯಾಗೆ ಬಂದ್ರೆ ಒಬ್ಬ ಬೆಸ್ಟ್ ಬ್ಯಾಟ್ಸಮನ್ ಸಿಕ್ಕಂತೆ ಅಂತ ಹೇಳೋದಕ್ಕೆ ಶುರುಮಾಡಿದ್ದಾರೆ.

ಸದ್ಯ ದೇಸೀ ಕ್ರಿಕೆಟ್ ಶುರುವಾಗಿದ್ದು, ಬಿಸಿಸಿಐ ಕಣ್ಣು ಕೂಡ ಇದೀಗ ದೇಸೀ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ಮೇಲೆ ನೆಟ್ಟಿದೆ, ಇಲ್ಲಿ ತಮ್ಮ ಆಟದ ಮೂಲಕ ಗಮನ ಸೆಳೆಯೋ ಆಟಗಾರರನ್ನು ಗುರುತಿಸಿ ಐಪಿಎಲ್ ಮತ್ತು ಟೀಂ ಇಂಡಿಯಾಗೆ ಭವಿಷ್ಯದ ಪ್ಲೇಯರ್‍ಗಳನ್ನಾಗಿ ಮಾಡಿಕೊಳ್ಳುವ ಪ್ಲಾನ್ ಬಿಸಿಸಿಐನದ್ದು, ಇಂತಹ ಹಂಟಿಂಗ್ ಕೆಲಸ ಮಾಡುತ್ತಿರೋ ಬಿಸಿಸಿಐಗೆ ಇದೀಗ ಟೂರ್ನಿಯ ಮೊದಲ ಭಾಗದಲ್ಲಿಯೇ ಒಬ್ಬ ಭರ್ಜರಿ ಬ್ಯಾಟ್ಸಮನ್ ಸಿಕ್ಕಿದ್ದಾನೆ.

ಹೌದು ಆತ ಬೇರೆ ಯಾರು ಅಲ್ಲ ಮೊಹಮ್ಮದ್ ಅಜರ್‍ವುದ್ದೀನ್.. ಹೌದು ಕೇರಳ ತಂಡದ ಪರವಾಗಿ ಆಡುತ್ತಿರೋ ಈ ಬಲಗೈ ಬ್ಯಾಟ್ಸಮನ್ ಸದ್ಯ ಕ್ರಿಕೆಟ್ ಲೋಕದಲ್ಲಿ ಸೌಂಡ್ ಮಾಡ್ತಾ ಇದ್ದಾನೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ 37 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಒಟ್ಟು 54 ಬಾಲ್‍ಗಳಲ್ಲಿ 137ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಸದ್ಯ ಈತನ ಆಟನೋಡಿದ ದಿಗ್ಗಜರು ಮನಸೋತಿದ್ದು, ಕ್ರಿಕೆಟ್ ವಿಶ್ಲೇಷಣೆಕಾರ ಹರ್ಷ ಬೋಗ್ಲೆ ಈತನ ಆಟವನ್ನು ಮಾಜಿ ಕಿಕೆಟರ್ ಮೊಹಮ್ಮದ್ ಅಜರುದ್ದೀನ್‍ಗೆ ಹೋಲಿಸಿದ್ದಾರೆ.

ಈ ಆಜರುದ್ದೀನ್ ಆಟ ನೋಡಿದ್ರೆ ನನಗೆ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಅಜರುದ್ದೀನ್ ಆಟ ನೆನಪಾಗುತ್ತದೆ ಅನ್ನೋ ಮಾತುಗಳನ್ನು ಹೇಳಿದ್ದಾರೆ. ಸದ್ಯ ಸಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕೇವಲ 37 ಬಾಲ್‍ಗಳಲ್ಲಿ ಶತಕ ಸಿಡಿಸೋ ಮೂಲಕ ದಾಖಲೆ ಬರೆದಿರೋ ಈ 21 ವರ್ಷದ ಈ ಆಟಗಾರ ಸದ್ಯ ಬಿಸಿಸಿಐ ಗಮನ ಸೆಳೆದಿದ್ರೆ, ಇತ್ತ ಐಪಿಎಲ್ ಫ್ರಾಂಚೈಸಿಗಳು ಈತನನ್ನು ತಮ್ಮ ತಂಡಕ್ಕೆ ಖರೀದಿ ಮಾಡಬೇಕು ಅನ್ನೋ ಪ್ಲಾನ್‍ನಲ್ಲಿ ಇದ್ದಾರೆ.

ಫೆಬ್ರವರಿಯಲ್ಲಿ ಐಪಿಎಲ್ ಮಿನಿ ಆಕ್ಷನ್ ನಡೆಯುತ್ತಿದ್ದು, ಮಿನಿ ಹರಾಜು ಪ್ರಕ್ರಿಯೆಯಲ್ಲಿ ಅಜರುದ್ದೀನ್ ಕೋಟಿ ಕೋಟಿ ಮೊತ್ತಕ್ಕೆ ಐಪಿಎಲ್ ಪ್ರಾಂಚೈಸಿಗಳು ಖರೀದಿ ಮಾಡೋದು ಪಕ್ಕಾ ಅಂತನಾನೇ ಹೇಳುತ್ತಿದ್ದಾರೆ. ಸದ್ಯ ಬಿಸಿಸಿಐ ಗಮನ ಸೆಳೆದಿರೋ ಅಜರುದ್ಧಿನ್ ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋದು ಪಕ್ಕಾ ಅಂತಾನೇ ಹೇಳಲಾಗುತ್ತಿದೆ.

ನಿಮ್ಮ ಪ್ರಕಾರ ಅಜರುದ್ಧಿನ್ ಬ್ಯಾಟಿಂಗ್ ಸ್ಟೈಲ್ ಬಗ್ಗೆ ನಿಮ್ಮ ಅನಿಸಿಕೆ ಏನೂ ಈತ ಐಪಿಎಲ್‍ನಲ್ಲಿ ಯಾವ ತಂಡದ ಪರ ಆಡಬೇಕು ಅನ್ನೋದು ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top