28ವರ್ಷಜೈಲಿನಲ್ಲಿದ್ದ ವ್ಯಕ್ತಿ ಕೋಟ್ಯಾಧಿಶ್ವರನಾದ..ಹೇಗೆ ಗೊತ್ತಾ..?

28 ವರ್ಷ ಜೈಲಿನಲಿದ್ದ ವ್ಯಕ್ತಿಯೊಬ್ಬ 71 ಕೋಟಿ ರೂಪಾಯಿಯ ಒಡೆಯನಾಗಿರೋ ಘಟನೆ ಅಮೇರಿಕಾದಲ್ಲಿ ನಡೆದಿದೆ. ಅಮೇರಿಕಾದ ಚೆಸ್ಟರ್ ಎಂಬ ವ್ಯಕ್ತಿ 28 ವರ್ಷ ಜೈಲುವಾಸ ಅನುಭವಿಸಿದ್ದು ಆತ ಜೈಲಿನಿಂದ ಬಿಡುಗಡೆಯಾಗುವ ವೇಳೆ 71.6 ಕೋಟಿ ರೂಪಾಯಿಯ ಒಡೆಯನಾಗಿದ್ದಾನೆ. ಹೌದು ಚೆಸ್ಟರ್ ಫಿಡೆಲ್ಫಿಯಾದಲ್ಲಿ ಕೊಲೆ ಕೇಸ್ ಆರೋಪದಲ್ಲಿ ಆತ ಶಿಕ್ಷೆಗೆ ಗುರಿಯಾಗಿದ್ದ, ಆದ್ರೆ 28 ವರ್ಷಗಳ ನಂತರ ಚೆಸ್ಟರ್ ಕೊಲೆ ಕೇಸ್‍ನಲ್ಲಿ ಅಪರಾಧಿಯಲ್ಲ ಅನ್ನೋ ಸಂತ್ಯಾಂಶ ಹೊರ ಬಂದಿದ್ದು, ಈತನ ಮೇಲೆ ಸುಳ್ಳು ಕೇಸ್ ದಾಖಲಿಸಿ ಆತನನ್ನು ಅಪರಾಧಿಯನ್ನಾಗಿ ಮಾಡಿ ಜೈಲುವಾಸಕ್ಕೆ ಕಳುಹಿಸಿದ್ದರು. ಸರ್ಕಾರದ ತಪ್ಪಿನ ಅರಿವಿನಿಂದಾಗಿ ಇದೀಗ ಚೆಸ್ಟರ್ ಅನ್ನು 28 ವರ್ಷಗಳ ನಂತರ ನಿರ್ಧೋಷಿ ಎಂದು ತೀರ್ಮಾನಿಸಿ ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇನ್ನು ಬಿಡುಗಡೆ ವೇಳೆ ಅಲ್ಲಿನ ಮೇಯರ್ ಆತನಿಗೆ 71.6 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಅಲ್ಲಿನ ಮೇಯರ್ ಆದೇಶಿಸಿದ್ದಾರೆ.

ಒಟ್ಟಿನಲ್ಲಿ 28 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ವ್ಯಕ್ತಿ ಇದೀಗ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಕೋಟ್ಯಾಧಿಪತಿ ಆಗಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top