2500ಕೋಟಿ ಕಲೆಕ್ಷನ್ ಮಾಡಿದ ಹುಚ್ಚಾ ವೆಂಕಟ್ ಸಿನಿಮಾ..! ಇದು ನಿಜಾ..ಆದ್ರೆ..!

ಸ್ಯಾಂಡಲ್ವುಡ್ ನ ಫೈರಿಂಗ್ ಸ್ಟಾರ್ ಹುಚ್ಚಾವೆಂಕಟ್ ಸ್ಯಾಂಡಲ್ವುಡ್ ನಲ್ಲಿ ತನ್ನದೇ ಹೆಸರಿನ‌ ಸೀರಿಸ್ ಸಿನಿಮಾಗಳನ್ನು ಮಾಡಿ, ವಿಚಿತ್ರ ಕ್ಯಾರೆಕ್ಟರ್ ಅಂತ ಕರೆಸಿಕೊಂಡ ನಟ, ಸ್ವತಂತ್ರ್ಯ ಪಾಳ್ಯದ ಮೂಲಕ ನಾಯಕ ನಟನಾಗಿ ಪರಿಚಯವಾದ ಹುಚ್ಚಾ ವೆಂಕಟ್, ನಂತರ ಹುಚ್ಚಾ ವೆಂಕಟ್ ಸಿನಿಮಾ ಮೂಲಕ ಸುದ್ದಿಯಾದ್ರು, 2014ರಲ್ಲಿ ತೆರೆಕಂಡ ಈ ಸಿ‌ನಿಮಾ ನೋಡಲು ಜನ ಥಿಯೇಟರ್ ಗೆ ಬರ್ಲಿಲ್ಲ ಅಂತ ಹಿಗ್ಗಾ ಮುಗ್ಗಾ ಬೈದು ಸುದ್ದಿಯಾಗಿದ್ದ ವೆಂಕಟ್ ನ, ಹುಚ್ಚಾ ವೆಂಕಟ್ ಸಿನಿಮಾ ಗೂಗಲ್, ವಿಕಿಪೀಡಿಯ ಪ್ರಕಾರ 2500ಕೋಟಿ ಕಲೆಕ್ಷನ್ ಮಾಡಿದ್ಯಾಂತೆ,

ಹೌದು ಗೂಗಲ್ ಹೇಳೋ ಪ್ರಕಾರ ಹುಚ್ಚಾ ವೆಂಕಟ್ ಸಿನಿಮಾ 30ಲಕ್ಷದಲ್ಲಿ ನಿರ್ಮಾಣವಾಗಿದ್ದು, ಇದುವರೆಗೂ 2500 ಕೋಟಿ ಗಳಿಕೆ ಕಂಡಿದೆ ಎಂದು ಗೂಗಲ್ ಹೇಳ್ತಾ ಇದ್ದು, ಇದರ ಜೊತೆಯಲ್ಲಿ ಹುಚ್ಚಾ ವೆಂಕಟ್ ಅವರೇ ಈ ಚಿತ್ರದ ನಾಯಕಿ ಪಾತ್ರವನ್ನು ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ನೀಡಿದೆ..

ಒಟ್ಟಿನಲ್ಲಿ ಸಿನಿಮಾ ವಿಚಾರದಲ್ಲಿ ಸುದ್ದಿಯಾಗೋ ಹುಚ್ಚಾ ವೆಂಕಟ್ ಈಗ ಗಳಿಕೆ ವಿಚಾರದಲ್ಲೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.


ಇ‌ನ್ನು ಇತ್ತೀಚೆಗೆ ವೆಂಕಟ್ ಇನ್ನು ಮುಂದೆ ಹುಚ್ಚಾಟಗಳನ್ನು ಆಡುವುದಿಲ್ಲ, ಅಲ್ಲದೇ ಇಷ್ಟು ದಿನ ಅಪ್ಪ ಅಮ್ಮನ ದುಡ್ಡಿನಲ್ಲಿ ಬದುಕಿದ್ದೇನೆ ಇನ್ನು ಮುಂದೆ ದುಡಿಯುತ್ತೇನೆ ಎಂದು ಸಹ ಹೇಳಿದ್ರು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top