
ಕೊರೋನಾ ಇಡೀ ವಿಶ್ವಕ್ಕೆ ಕಂಟಕವಾಗಿ,ಎಲ್ಲರಿಗೂ ಸಮಸ್ಯೆಯನ್ನು ತಂದು ಒಡ್ಡಿದೆ. ಹೀಗಿರುವಾಗ ಇಲ್ಲೊಂದು ಕುಟುಂಬಕ್ಕೆ ಮಾತ್ರ ಕೊರೋನಾ ವರವಾಗಿ ಕಾಣಿಸಿದೆ. ಹೌದು ಗದಗ ಜಿಲ್ಲೆಯ ಒಂದು ಕುಟುಂಬದಲ್ಲಿ 22 ವರ್ಷಗಳ ಹಿಂದೆ ಕಳೆದು ಹೋಗಿದ್ದ ಮಗ ಇದೀಗ ಮರಳಿ ಬಂದಿದ್ದಾನೆ.
ಈ ಘಟನೆ ನಡೆದಿರೋದು ಗದಗದ ಗಜೇಂದ್ರಗಡ ಗೋಗೇರಿ ಎಂಬ ಗ್ರಾಮದಲ್ಲಿ , ಮಲಿಕ್ ಸಾಬ್ ಭಾಗವಾನ್ ಎಂಬುವವರ ಮಗ ಇವನಾಗಿದ್ದು, ಈತ ಇವರಿಗೆ ಮೂರನೇ ಮಗನಾಗಿದ್ದುಈತನ ಹೆಸರು ಆದಂ ಎಂದು ಗುರುತಿಸಲಾಗಿದೆ. ಈತ ಮಹಾರಾಷ್ಟ್ರದ ಸೊಲ್ಲಾಪುರದ ಹೋಟೆಲ್ ಒಂದರಲ್ಲಿ ಕೆಲಸಮಾಡಿಕೊಂಡಿದ್ದು, ಕೊರೋನಾ ಎಫೆಕ್ಟ್ನಿಂದಾಗಿ ಹೋಟೆಲ್ನಲ್ಲಿ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾನೆ.
ನಂತರ ಅಲ್ಲಿ ಇಲ್ಲಿ ಕೆಲಸ ಮಾಡಿದ್ರು, ಆತನಿಗೆ ಜೀವನ ನಡೆಸಲು ಕಷ್ಟವಾಗಿದ್ದು, ನಂತರ ತಂದೆ ತಾಯಿ ನೆನಪಾಗಿದೆ. ಆದಂ ಊರಿಗೆ ಹೋಗಲು ಮನಸ್ಸು ಮಾಡಿದ್ದು ಊರಿಗೆ ಬಂದವನು ತಾವು ಮೊದಲು ವಾಸವಾಗಿದ್ದ ಸ್ಥಳಕ್ಕೆ ಹೋಗಿದ್ದಾನೆ. ಅಲ್ಲಿ ಇಲ್ಲದನ್ನು ನೋಡಿ ಗ್ರಾಮಸ್ಥರ ಬಳಿ ಕೇಳಿದ್ದಾನೆ. ನಂತರ ಗ್ರಾಮಸ್ಥರು ಆತನ ಅಣ್ಣನಿಗೆ ವಿಷಯ ತಿಳಿಸಿದ್ದು ಅಣ್ಣ ಆದಂನನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಆದಂಗೆ ಚಿಕ್ಕವರಿದ್ದಾಗ ಆರೋಗ್ಯ ಸರಿ ಇಲ್ಲ ಎಂದು ಬಳ್ಳಿ ಆಕಾರದಲ್ಲಿ ಸುಟ್ಟ ಗಾಯ ಮತ್ತು ಆತನ ಕಾಲ ಬೆರಳಲ್ಲಿ ಒಂದು ಬೆರಳು ಉದ್ದ ಇದ್ದನ್ನು ಗುರುತು ಹಿಡಿದು ಈತನೇ ಆದಂ ಎಂದು ಗುರುತಿಸಿದ್ದಾರೆ. ಸದ್ಯ ಮನೆಯಲ್ಲಿ ಇದೀಗ ಸಂತಸ ಸೃಷ್ಟಿಯಾಗಿದ್ದು, ಆದಂ ಪುಣೆಯಲ್ಲಿ ಅಣ್ಣನ ಜೊತೆ ಮೆಕಾನಿಕ್ ಆಗಿ ದುಡಿಯುತ್ತಿದ್ದ,1998ರಲ್ಲಿ ಗೆಳೆಯರೊಂದಿಗೆ ಮುಂಬೈಗೆ ಪ್ರವಾಸಕ್ಕೆ ಹೋದಾಗ ಕಾಣೆಯಾಗಿದ್ದಾನೆ.
ನಂತರ ಕುಟುಂಬದವರು ೫ ವರ್ಷಗಳ ಕಾಲ ಪೊಲೀಸ್ರ ಬಳಿ ವಿಚಾರಣೆ ನಡೆಸಿದ್ರು ಆದಂ ಸಿಕ್ಕಿರಲಿಲ್ಲ, ಆದ್ರೆ ಆದಂ ತಾಯಿ ಬಡಿಮಾ ಮಾತ್ರ ಮಗ ವಾಪಾಸ್ ಬರುವ ನಂಬಿಕೆಯಲ್ಲಿ ಇದ್ದಳು, ಇನ್ನು ಆರು ತಿಂಗಳ ಹಿಂದೆ ಆಸ್ತಿ ಹಂಚಿಕೆ ಮಾಡುವಾಗ ಆದಂಗೂ ಒಂದು ಪಾಲು ನೀಡಬೇಕು ಆತ ವಾಪಾಸ್ ಬರುತ್ತಾನೆ ಎಂದು ತಾಯಿ ಹೇಳುತ್ತಿದ್ದರು, ಇದೀಗ ತಾಯಿ ನಂಬಿಕೆ ನಿಜವಾಗಿದ್ದು, ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸದ್ಯ ಕೊರೋನಾ ಹಿನ್ನೆಲೆಯಲ್ಲಿ ಆದಂ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದು, ಆದಂ ಮನೆಗೆ ಮರಳಿರೋದು ಮನೆಯಲ್ಲಿ ಸಂತಸ ತರಿಸಿದೆ.